ಶಿರಸಿ: ಅರಣ್ಯವಾಸಿಗಳಿಗೆ ಸಾಗುವಳಿಗಾಗಿ ಹಾಗೂ ವಾಸ್ತವ್ಯಕ್ಕಾಗಿ ಹಕ್ಕನ್ನು ನೀಡುವ ಕುರಿತು ಜು.21 ರಂದು ಯಲ್ಲಾಪುರ ಪಟ್ಟಣ ವ್ಯಾಪ್ತಿಯ ಮಾರಿಕಾಂಬಾ ದೇವಿಗೆ ಉರುಳು ಸೇವೆ ನೀಡುವ ಮೂಲಕ ಹೋರಾಟದ ಹೊಸ ಹೆಜ್ಜೆ ಪ್ರಾರಂಭಿಸಲು ನಿರ್ಧರಿದೆ ಎಂದು ಹೋರಾಟಗಾರರ ವೇದಿಕೆಯ ಜಿಲ್ಲಾಧ್ಯಕ್ಷ ಎ. ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ವೆಂಕಟ್ರಮಣ ದೇವಾಲಯದಲ್ಲಿ ಸಭೆ ಜರುಗಿಸಿ, ಸಭೆ ನಂತರ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಗ್ರಾಮದೇವಿ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿ 11 ಗಂಟೆಗೆ ಉರುಳು ಸೇವೆ ಸಂಘಟಿಸಲಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES  5ರಿಂದ ರಾಘವೇಶ್ವರ ಶ್ರೀ ಚಾತುರ್ಮಾಸ್ಯ

ಜಿಲ್ಲೆಯಲ್ಲಿ ಈಗಾಗಲೇ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ 85,575 ಅರ್ಜಿಗಳನ್ನು ಅರಣ್ಯ ಅತಿಕ್ರಮಣದಾರರು ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ ಈಗಾಗಲೇ ವಿವಿಧ ಅರಣ್ಯ ಹಕ್ಕು ಸಮಿತಿಯಲ್ಲಿ 65,220 ಅರ್ಜಿಗಳು ತಿರಸ್ಕಾರವಾಗಿ ಬಂದಂತ ಅರ್ಜಿಗಳಲ್ಲಿ ಶೇಕಡಾ 74.43 ರಷ್ಟು ಅರ್ಜಿಗಳು ತಿರಸ್ಕಾರವಾಗಿರುವುದು ವಿಷಾದಕ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ವೈಯಕ್ತಿಕ ಬುಡಕಟ್ಟು ಮತ್ತು ಸಮ ಉದ್ದೇಶಕ್ಕೆ ನೀಡಿದಂಥ ಹಕ್ಕು ಕೇವಲ 2,807 ಬಂದಿರುವ ಅರ್ಜಿಗಳಲ್ಲಿ ಮಾನ್ಯತೆ ದೊರಕಿರುವುದು ಶೇಕಡಾ 3.2 ರಷ್ಟು ಮಾತ್ರ. ಜು. 21 ರಂದು ಯಲ್ಲಾಪುರದಲ್ಲಿ ಜರುಗುವ ಉರುಳು ಸೇವೆ ಮತ್ತು ಮೆರವಣಿಗೆ ರ್ಯಾಲಿಗೆ ಆಸಕ್ತ ಅರಣ್ಯ ಅತಿಕ್ರಮಣದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

RELATED ARTICLES  UPSC ಫಲಿತಾಂಶ : ಹೊನ್ನಾವರದ ದೀಪಕ್ ಶೇಟ್ ಸಾಧನೆ.