ಕಾರವಾರ : ಹೃದಯ ಸಂಬಂಧಿ ಕಾಯಿಲೆಗಳಿಗೆಚಿಕಿತ್ಸೆ ನೀಡುವ ‘ಗ್ಲೋಬಲ್ ಹಾರ್ಟ್ ಫೌಂಡೇಷನ್’ದಿಂದ ಜು.27 ಮತ್ತು 28ರಂದು ನಗರದ ಅಜ್ವಿ ಓಶನ್ ಹೋಟೆಲನಲ್ಲಿ ಹೃದ್ರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್ ವ್ಯವಸ್ಥಾಪಕ ನಿರ್ದೇಶಕ ಡಾ.ಸುಜಲ್ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೌಂಡೇಷನ್‌ನಿಂದ ಈಗಾಗಲೇ 30 ಸಾವಿರಕ್ಕೂ ಅಧಿಕ ಹೃದಯ ಸಂಬಂಧಿ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ವೇಳೆ ಆಯುರ್ವೇದ ಔಷಧ ನೀಡಲಾಗುತ್ತದೆ, ಕಡಿಮೆ ವೆಚ್ಚದಲ್ಲಿ ಹಾಗೂ ಶಸ್ತ್ರ ಚಿಕಿತ್ಸೆಗೆ ಒಳಪಡಿಸದೇ ಹೃದಯ ಕಾಯಿಲೆಯನ್ನು ಗುಣಪಡಿಸಲಾಗುತ್ತದೆ.
ಡಾ.ಎ.ವಿ.ನಾರಾಯಣ ಅವರು ಹೃದಯ ಕಾಯಿಲೆಗೆ ಆಯುರ್ವೇದ ಔಷದ ಕಂಡು ಹಿಡಿದಿದ್ದರು. ಹೃದಯದಲ್ಲಿ ಬ್ಲಾಕೇಜ್ ಇದ್ದಲ್ಲಿ ಆಪರೇಶನ್ ಮಾಡದೇ ಕೇವಲ ಮಾತ್ರೆಗಳಿಂದಲೇ ಗುಣಪಡಿಸುವ ಈ ಚಿಕಿತ್ಸೆಯ ಲಾಭವನ್ನು ಜಿಲ್ಲೆಯ ನಾಗರಿಕರು ಪಡೆದುಕೊಳ್ಳುವಂತಾಗಬೇಕು. ಈ ಚಿಕಿತ್ಸೆಯಲ್ಲಿ ‘ಮೈಡ್ರೊಪ್ ಎಕ್ಸ್ ಎಲ್’ ಹೆಸರಿನ ಮಾತ್ರೆಗಳನ್ನು ರೋಗಿಗಳಿಗೆ ನೀಡಲಾಗುತ್ತದೆ. ಅಲ್ಲದೇ ಚಿಕಿತ್ಸೆ ಪಡೆಯುತ್ತಿರುವ ರೋಗಿಯು ಸೇವಿಸಬೇಕಾದ ಆಹಾರದ ಬಗ್ಗೆ ತಿಳಿವಳಿಕೆ ನೀಡಲಾಗುವುದು. ಚಿಕಿತ್ಸೆಗೆ ನಿರ್ದಿಷ್ಟ ಚಿಕಿತ್ಸಾ ವೆಚ್ಚವಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.