ಮೇಷ ರಾಶಿ
ನಿಮ್ಮ ಪ್ರತಿಭೆಯ ಪ್ರದರ್ಶನದಿಂದ ಮೆಚ್ಚಿಗೆ ಪುರಸ್ಕಾರಗಳನ್ನು ಪಡೆಯುವ ಭಾಗ್ಯವಿದೆ. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಕಾರ್ಯ ಮಾಡಿ. ಅನುಪಯುಕ್ತ ಸಲಹೆಗಳು ನಿಮ್ಮನ್ನು ದಾರಿ ತಪ್ಪಿಸುತ್ತದೆ ಎಚ್ಚರಿಕೆ.
ನಿಮ್ಮ ಆತ್ಮ ಶಕ್ತಿ ನಂಬಿ ಹಿಡಿದ ಕಾರ್ಯ ಯಶಸ್ಸು ಖಂಡಿತ. ಒಳ್ಳೆಯ ಮಾರ್ಗದರ್ಶನದಿಂದ ಬಹಳ ದಿನಗಳ ಅಪೂರ್ಣ ಕೆಲಸವು ಪೂರ್ಣಗೊಳ್ಳುವ ಸಂಭವ.
ಅದೃಷ್ಟ ಸಂಖ್ಯೆ : 5
ವೃಷಭ ರಾಶಿ
ಜೀವನವೇ ಕಷ್ಟವೆಂದು ವ್ಯಥೆ ಪಡುತ್ತೀರಬೇಡಿ. ಶ್ರಮಪಟ್ಟು ಸಾಧಿಸಿ ಸಮಸ್ಯೆ ದೂರವಾಗುತ್ತದೆ. ವಾಹನ ಚಲಾವಣೆಯಲ್ಲಿ ಜಾಗೃತೆ ವಹಿಸಿ. ಉದ್ಯೋಗದಲ್ಲಿ ಏಕಾಗ್ರತೆ ಬಹಳ ಮುಖ್ಯ. ಆರ್ಥಿಕ ಸ್ಥಿತಿಯಲ್ಲಿ ಕಠಿಣತೆ ಇದ್ದರೂ ಚಿಂತೆ ಬೇಡ, ಅದೃಷ್ಟ ನಿಮ್ಮ ಬೆನ್ನ ಹಿಂದೆಯೇ ಇದೆ.
ಅದೃಷ್ಟ ಸಂಖ್ಯೆ : 3
ಮಿಥುನ ರಾಶಿ
ಸ್ವಾರ್ಥ ಸಾಧನೆಗಾಗಿ ಕೆಲವು ಜನಗಳ ಭೇಟಿಯಾಗುವ ಸಾಧ್ಯತೆ ಆದಷ್ಟು ವಿಚಾರಗಳಿಂದ ದೂರವಿರಿ. ಸಾಮಾಜಿಕ ಜೀವನದಲ್ಲಿ ಮನ್ನಣೆ ಗಳಿಸುವಿರಿ. ನಿಮ್ಮ ಮಹತ್ವದ ಕಾರ್ಯದಲ್ಲಿ ಪ್ರತಿರೋಧ ಒಡ್ಡಲು ಕೆಲವೊಂದು ಸಂಚುಗಳು ನಡೆಯಲಿದೆ ಜಾಗ್ರತೆ.
ಅದೃಷ್ಟ ಸಂಖ್ಯೆ : 9
ಕರ್ಕಾಟಕ ರಾಶಿ
ಉದ್ಯೋಗದಲ್ಲಿನ ಕೆಲವು ಕಠಿಣ ನಿರ್ಧಾರಗಳಿಂದ ಆರ್ಥಿಕ ಪ್ರಗತಿ ಸಾಧಿಸಲಿದೆ. ನಿಮ್ಮ ಕೆಲವು ಜವಾಬ್ದಾರಿಗಳನ್ನು ಸಂಗಾತಿಗೆ ವರ್ಗಾಯಿಸಲು ಇಚ್ಛೆಪಡುವಿರಿ. ಗೃಹ ನಿರ್ಮಾಣ ಕಾರ್ಯಕ್ಕೆ ಯೋಜನೆ ರೂಪಿಸಲಿದ್ದೀರಿ.
ಅದೃಷ್ಟ ಸಂಖ್ಯೆ : 2
ಸಿಂಹ ರಾಶಿ
ಯಾವುದೇ ಸರಳ ಮಾರ್ಗದಿಂದ ಹಣಕಾಸಿನ ಪರಿಸ್ಥಿತಿ ಉತ್ತಮ ಆಗುವುದೆಂದು ಭ್ರಮೆ ಬೇಡ. ನಿಮ್ಮ ಕಠಿಣ ಶ್ರಮ ಹಾಗೂ ಕೆಲಸದ ಮೇಲಿನ ಪ್ರೀತಿಯು ನಿಮ್ಮನ್ನು ದೊಡ್ಡ ಮಟ್ಟದಲ್ಲಿ ಇರಿಸುತ್ತದೆ.
ಯೋಜಿತ ಕೆಲಸಗಳಲ್ಲಿ ಸಂಪನ್ಮೂಲಗಳ ಕೊರತೆಯಿಂದ ಸಮಸ್ಯೆ ಉದ್ಭವಿಸುವುದು. ಆರ್ಥಿಕ ಪರಿಸ್ಥಿತಿ ಮಧ್ಯಮದಲ್ಲಿದೆ. ಶುಭ ಗ್ರಹಗಳಿಂದ ಫಲಗಳಿಂದ ಸಂಜೆ ವೇಳೆಗೆ ಕಷ್ಟಗಳು ದೂರವಾಗುತ್ತದೆ.
ಅದೃಷ್ಟ ಸಂಖ್ಯೆ : 1
ಕನ್ಯಾ ರಾಶಿ
ನಿಮ್ಮಲ್ಲಿನ ಆಕರ್ಷಣೆಯ ವ್ಯಕ್ತಿತ್ವದಿಂದ ಸಮಾಜದಲ್ಲಿ ವಿಶಿಷ್ಟ ವ್ಯಕ್ತಿಯಾಗಿ ಗುರುತಿಸಿಕೊಳ್ಳುವಿರಿ. ನಿಮ್ಮಲ್ಲಿನ ನಿಗೂಢ ಶಕ್ತಿಯೊಂದು ನಿಮಗೆ ಸಹಕಾರಿಯಾಗಲಿದೆ. ಹಣಕಾಸಿನಲ್ಲಿ ಉತ್ತಮ ಬೆಳವಣಿಗೆ. ಕುಟುಂಬದಲ್ಲಿ ಸೌಖ್ಯ.
ಅದೃಷ್ಟ ಸಂಖ್ಯೆ : 4
ತುಲಾ ರಾಶಿ
ಮಕ್ಕಳ ಉದ್ಯೋಗದಲ್ಲಿ ಬದಲಾವಣೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ. ಮಿತ್ರರಿಂದ ಆರ್ಥಿಕ ಪುನಃಶ್ಚೇತನಕ್ಕೆ ಸಹಕಾರ. ಹಳೆಯ ಹೂಡಿಕೆಗಳಿಂದ ಲಾಭ. ಇಂದು ಸಂಗಾತಿಯನ್ನು ಖುಷಿಪಡಿಸುವ ಕ್ಷಣ.
ಅದೃಷ್ಟ ಸಂಖ್ಯೆ : 6
ವೃಶ್ಚಿಕ ರಾಶಿ
ಕುಟುಂಬದವರಲ್ಲಿನ ಮಾತುಗಳನ್ನು ಕೇಳುವಷ್ಟು ಸಮಯ ನೀಡಿ. ಆಲಸ್ಯದಿಂದ ಉದ್ಯೋಗದಲ್ಲಿ ಪ್ರತಿಕೂಲ ಪರಿಣಾಮ. ಬಂಧುಗಳು ಅಥವಾ ಸಹೋದರರಿಂದ ಆಸ್ತಿಗಳಲ್ಲಿ ವ್ಯಾಜ್ಯ ಮಾಡುವ ಸಾಧ್ಯತೆ. ಕೆಲವು ಸಂಘಟನೆಗಳಿಗೆ ನಿಮ್ಮ ನಾಯಕತ್ವ ಪ್ರಾಮುಖ್ಯ ತಂದುಕೊಡುತ್ತದೆ.
ಅದೃಷ್ಟ ಸಂಖ್ಯೆ : 1
ಧನಸ್ಸು ರಾಶಿ
ಗುರುಹಿರಿಯರ ಆಶೀರ್ವಾದದಿಂದ ಪುಣ್ಯಫಲ. ಸ್ವಂತ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಶುಭ. ನಿಮ್ಮ ಮಡದಿಯ ಜೊತೆ ಔತಣಕೂಟ ಪಾಲ್ಗೊಳ್ಳುವ ನಿರೀಕ್ಷೆ. ಅನಿರೀಕ್ಷಿತ ಕೆಲಸದ ಪ್ರವಾಸ ಒದಗಬಹುದು. ವಿಚಾರಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಿರಿ.
ಅದೃಷ್ಟ ಸಂಖ್ಯೆ : 5
ಮಕರ ರಾಶಿ
ಕುಟುಂಬದವರಲ್ಲಿನ ಅನಾರೋಗ್ಯವೂ ನಿಮ್ಮನ್ನು ಕೊಂಚ ಮಟ್ಟಿಗೆ ಬೇಸರ ತರಿಸುತ್ತದೆ. ಕೆಲವು ಅರ್ಥಿಕ ಮೂಲಗಳಿಂದ ಬರುವಂತ ಹಣಕಾಸು ತಡೆಯಾಗುವ ಸಾಧ್ಯತೆ ಇದೆ.
ಮನೆ ಮಾರಾಟ ಮಾಡುವ ಪ್ರಯತ್ನದಲ್ಲಿದ್ದರೆ ಅವರಿಗೆ ಶುಭವಾಗುವುದು. ವೈವಾಹಿಕ ಜೀವನದಲ್ಲಿ ಸಣ್ಣ ವಿಚಾರಗಳಿಗೆ ಕಲಹ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಕೆಲವು ಸಮಸ್ಯೆಗಳಿಗೆ ಹಿರಿಯರ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ.
ಅದೃಷ್ಟ ಸಂಖ್ಯೆ : 2
ಕುಂಭ ರಾಶಿ
ನಿಮ್ಮ ಹಿತೈಷಿಗಳು ಹಾಗೂ ಸ್ನೇಹಿತ ವರ್ಗದವರು ನಿಮ್ಮಲ್ಲಿನ ಗೌರವವನ್ನು ಬಹಿರಂಗವಾಗಿ ವ್ಯಕ್ತಪಡಿಸುವುದರಿಂದ ಧನ್ಯತಾ ಭಾವ ಹಾಗೂ ಸಂತೋಷವು ನಿಮ್ಮಲ್ಲಿ ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿ ನಿಮ್ಮ ಮಾತೆ ಅಂತಿಮವಾಗಿ ಇರಬೇಕೆಂಬ ಭಾವನೆಯನ್ನು ಬಿಟ್ಟುಬಿಡಿ, ಎಲ್ಲರೊಳಗೆ ಒಂದಾಗಿ. ಕೆಲವು ಸಂತೋಷ ಕೂಟಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದರೂ, ತಡರಾತ್ರಿ ಮನೆಗೆ ಹೋಗುವುದು ಸಭ್ಯತೆ ಅಲ್ಲ.
ಅದೃಷ್ಟ ಸಂಖ್ಯೆ : 4
ಮೀನ ರಾಶಿ
ಧೈರ್ಯ ಸಾಹಸ ಗುಣಗಳಿಂದ ವಿಶಿಷ್ಟವಾದ ವಿನೂತನ ಪ್ರಯೋಗಕ್ಕೆ ಅಣಿಯಾಗುವಿರಿ. ನಿಮ್ಮ ಆರ್ಥಿಕ ಲೆಕ್ಕಾಚಾರದಲ್ಲಿ ಪರಿಣಿತರ ಸಲಹೆ ಪಡೆದುಕೊಳ್ಳಿ. ತೆರಿಗೆಗಳು ಕೆಲವು ಹೂಡಿಕೆಗಳ ಬಗ್ಗೆ ನಿಗಾ ವಹಿಸಿ. ಕುಟುಂಬ ಮತ್ತು ವ್ಯವಹಾರವನ್ನು ಸಮತೋಲನದಿಂದ ನೋಡಿಕೊಳ್ಳಿ.
ಅದೃಷ್ಟ ಸಂಖ್ಯೆ : 6