ಮೇಷ ರಾಶಿ

ಕೆಲಸದ ಒತ್ತಡವನ್ನು ಮನೆಯಲ್ಲಿ ತೋರಿಸಬೇಡಿ, ದುಡುಕಿ ನೋಯಿಸಬೇಡಿ. ತಾಳ್ಮೆಯಿಂದ ಎಲ್ಲವನ್ನೂ ಗೆಲ್ಲಬಹುದು, ಸರಿಪಡಿಸುವುದು. ವ್ಯವಹಾರದಲ್ಲಿನ ಇಬ್ಬರ ಜಗಳ ಮೂರನೇ ವ್ಯಕ್ತಿಗೆ ಲಾಭಕಾರಿಯಾಗುತ್ತದೆ.

ನಿಮ್ಮನ್ನು ನೀವು ಸಂತೈಸಿಕೊಳ್ಳಿ. ಕೆಲವು ಯೋಜನೆಗಳಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಲು ವಿಫಲರಾಗುವ ಸಂಭವವಿದೆ. ಮೇಲಾಧಿಕಾರಿಗಳ ಸಂಘರ್ಷ ಉದ್ಯೋಗ ಸ್ಥಳದಲ್ಲಿ ನಿಮ್ಮನ್ನು ಚಿಂತೆಗೆ ಈಡು ಮಾಡಲಿದೆ. ಆದಷ್ಟು ಮಟ್ಟಿಗೆ ಶಾಂತ ಚಿತ್ತದಿಂದ ಮತ್ತು ಚತುರತೆಯಿಂದ ವರ್ತಿಸಿ. ಎಲ್ಲದರಲ್ಲೂ ಪ್ರಯೋಜನ ಪಡೆಯಲು ಸಿದ್ದರಾಗಿ.

ಅದೃಷ್ಟ ಸಂಖ್ಯೆ : 9

ವೃಷಭ ರಾಶಿ

ಮಕ್ಕಳ ಕೆಲವು ವರ್ತನೆಗಳು ಮನಸ್ಸಿಗೆ ಕಿರಿಕಿರಿ ಅನ್ನಿಸಬಹುದು. ಕೆಲಕಾಲ ಏಕಾಂತವಾಗಿ ಧ್ಯಾನ ಕೈಗೊಂಡರೆ ಮನಸ್ಸು ತಿಳಿಯಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅನೇಕ ರೀತಿಯಾದಂತಹ ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡುವಿರಿ.

ಹಿರಿಯರ, ಹಿತೈಷಿಗಳ ಮಾರ್ಗದರ್ಶನದಿಂದ ನಿಮ್ಮ ಯೋಜನೆಗಳಿಗೆ ಅರ್ಥಪೂರ್ಣವಾದ ಲಾಭ ಪಡೆಯುವಿರಿ. ಕೆಲವು ಜನಗಳನ್ನು ದೂಷಣೆಯಿಂದ ನಿಮ್ಮನ್ನು ಕೆಟ್ಟವರನ್ನಾಗಿ ಬಿಂಬಿಸಲು ಪ್ರಯತ್ನ ನಡೆಯುತ್ತಿದೆ. ನಿಮ್ಮ ಕೆಲವು ಚಿಂತನೆಗಳಿಂದ ನಿಮ್ಮನ್ನು ನೀವು ಸಮಾಜದಲ್ಲಿ ಗೌರವ ವರ್ಚಸ್ಸು ಹೆಚ್ಚಾಗುವಂತೆ ಮಾಡಿಕೊಳ್ಳಿ.

ಅದೃಷ್ಟ ಸಂಖ್ಯೆ : 3

ಮಿಥುನ ರಾಶಿ

ನಿಮ್ಮ ಉದ್ಯೋಗದ ಅನುಭವದಿಂದ ಇತರ ಜನರಿಗೆ ಉಪಯೋಗವಾಗುವಂತಹ ಕಾರ್ಯಗಳನ್ನು ಕೈಗೊಳ್ಳುವಿರಿ. ಕುಟುಂಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗುವಿರಿ. ಸಂಗಾತಿಯ ಇಷ್ಟದ ವಸ್ತುಗಳು ಅಥವಾ ತಿನಿಸುಗಳು ತರುವುದನ್ನು ಮರೆಯದಿರಿ.

ಹಣಕಾಸಿನಲ್ಲಿ ಲಾಭದ ವಾತಾವರಣ ಹಾಗೂ ಹೆಚ್ಚಿನ ಬೇಡಿಕೆ ನಿಮ್ಮನ್ನು ಸಂತುಷ್ಟಗೊಳಿಸಲಿದೆ. ಸರಕಾರಿ ನೌಕರರಿಗೆ ಸ್ಥಾನ ಪಲ್ಲಟವಾಗುತ್ತದೆ ಅಥವಾ ಮುಂಬಡ್ತಿ ಯೋಗವಿದೆ.

ಅದೃಷ್ಟ ಸಂಖ್ಯೆ : 6

ಕರ್ಕಾಟಕ ರಾಶಿ

ನೀವು ಕಲಿತ ವಿದ್ಯೆ ಇಂದು ನಿಮಗೆ ಫಲಕಾರಿ ಆಗಲಿದೆ. ಉದ್ಯೋಗ ಸಿಗದೇ ಇರುವ ಜನರಿಗೆ ಉದ್ಯೋಗಾವಕಾಶ ಅಥವಾ ಉದ್ಯೋಗ ಸೃಷ್ಟಿ ಮಾಡುವ ಹೊಸ ಜವಾಬ್ದಾರಿ.

ಎಣ್ಣೆ, ದ್ರವ್ಯ ಪದಾರ್ಥಗಳ ಮಾರಾಟಗಾರರಿಗೆ ಶುಭ ದಿನವಾಗಿದೆ. ಮಕ್ಕಳ ಅಶಿಸ್ತು ಸ್ವಲ್ಪ ಮಟ್ಟಿಗೆ ಬೇಸರ ತರಿಸುತ್ತದೆ. ಮನೋರಂಜನೆ ಅವಕಾಶ ನೀಡಲಿದ್ದೀರಿ. ಪ್ರೇಮಿಗಳಿಗೆ ಇಷ್ಟಾರ್ಥ ಈಡೇರಿಕೆ ಆಗುವ ದಿನ.

RELATED ARTICLES  ಶರಣಾಗಲು ಶಾಸಕ ಹ್ಯಾರಿಸ್ ಪುತ್ರನ ನಾಟಕ! ನಡೆದಿದೆ ಆದಿಕಾರಿಗಳ ಎತ್ತಂಗಡಿ ಪ್ರಹಸನ!

ಅದೃಷ್ಟ ಸಂಖ್ಯೆ : 2

ಸಿಂಹ ರಾಶಿ

ಸಹೋದರರಲ್ಲಿ ಮನಸ್ತಾಪ. ಕುಟುಂಬದಲ್ಲಿ ಸಣ್ಣ ವಿಚಾರಗಳಿಗೂ ಕಲಹ. ಉದ್ಯೋಗ ಸ್ಥಳದಲ್ಲಿ ಜವಾಬ್ದಾರಿಯುತ ಸ್ಥಾನ ಸಿಗಲಿದೆ, ಆದರೂ ಸಹೋದ್ಯೋಗಿಗಳಲ್ಲಿ ವೈಮನಸ್ಸು.

ಕೆಲವು ವಿಷಯಗಳಲ್ಲಿ ನಂಬಿಕೆ ಬಹಳ ಮುಖ್ಯ, ನಿಮ್ಮ ಕಣ್ಣಿನ ನೇರಕ್ಕೆ ಅಥವಾ ನಿಮ್ಮ ಯೋಚನೆಗೆ ತಾಳೆ ಹಾಕುವುದು ತಪ್ಪು. ಸೂಕ್ಷ್ಮಮತಿಗಳಾಗಿ ವರ್ತಿಸಿ. ಧನಾಗಮನ ಮೂಲಗಳು ಇಂದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಕುಲದೇವತಾ ಆರಾಧನೆ ಕಷ್ಟಗಳಿಗೆ ಪರಿಹಾರ.

ಅದೃಷ್ಟ ಸಂಖ್ಯೆ : 2

ಕನ್ಯಾ ರಾಶಿ

ಹಣಕಾಸಿನ ಸಹಾಯಕ್ಕಾಗಿ ಬರುವ ಜನಗಳಿಂದ ಆದಷ್ಟು ಪೂರ್ವಾಪರ ಯೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ, ಇಂತಹ ವಿಷಯಗಳಲ್ಲಿ ನಿಮ್ಮ ಸಂಗಾತಿಯ ಮಾತುಗಳನ್ನು ಸಲಹೆಗಳನ್ನು ಪಾಲಿಸಿ. ನಿಮ್ಮ ಹಲವು ದಿನದ ಯಶಸ್ಸು ತೀರಾ ಹತ್ತಿರದಲ್ಲಿದೆ.

ಕೆಲವು ಘಟನೆಗಳು ಕನಸಿನಲ್ಲಿ ಕಂಡಂತೆ ಇದ್ದರು ವಾಸ್ತವದಲ್ಲಿ ನಡೆಯುತ್ತಿರುತ್ತದೆ ಇದು ನಿಮಗೆ ಆಶ್ಚರ್ಯಚಕಿತರನ್ನಾಗಿ ಮಾಡಬಹುದು. ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ. ದೀರ್ಘಾವಧಿ ಹೂಡಿಕೆಗಳು ಲಾಭದಾಯಕವಾಗಿವೆ.

ಅದೃಷ್ಟ ಸಂಖ್ಯೆ : 4

ತುಲಾ ರಾಶಿ

ದೂರ ದೃಷ್ಟಿಯಿಂದ ಮಾಡಿರುವ ಹೂಡಿಕೆಗಳು ಅಥವಾ ಷೇರುಗಳ ಮೌಲ್ಯ ಹೆಚ್ಚಾಗುತ್ತದೆ. ಇನ್ನೊಬ್ಬರಿಗೆ ಉಪಕಾರವಾಗಲೆಂದು ಬುದ್ಧಿ ಮಾತನ್ನು ಹೇಳಿದರೆ ಅದು ವ್ಯರ್ಥವಾಗುತ್ತದೆ. ಆಕಸ್ಮಿಕವಾದ ಹೊಸ ಆಲೋಚನೆಯೊಂದು ನಿಮ್ಮನ್ನು ನವೀನ ಕಾರ್ಯಕ್ಕೆ ಹುರಿತದುಂಬಿಸುತ್ತದೆ.

ಸೂಕ್ತ ಸಂದರ್ಭದಲ್ಲಿ ಹಣಕಾಸಿನ ನೆರವು ಸಿಗಲಿದೆ. ಪಶು ಸಂಗೋಪನೆ ಉದ್ಯಮಿಗಳಿಗೆ ಲಾಭದಾಯಕ ದಿನ. ಹೊಗಳು ಭಟ್ಟರಿಂದ ದೂರವಿರಿ. ಕೆಲಸ ಪ್ರಾರಂಭ ಮುನ್ನವೇ ಸೋಲುತ್ತೇನೆ ಎಂಬ ಋಣಾತ್ಮಕ ಯೋಚನೆಯನ್ನು ಮೊದಲು ಬಿಡಿ.

ಅದೃಷ್ಟ ಸಂಖ್ಯೆ : 7

ವೃಶ್ಚಿಕ ರಾಶಿ

ನಿಮ್ಮನ್ನು ಗೌರವಿಸುವ ವ್ಯಕ್ತಿಗಳಿಂದ ಅಭಿಮಾನ ಮೂಡುತ್ತದೆ. ಹಾಗೆಯೇ ನಿಂದಿಸುವ ಜನರಿಂದ ದುಃಖವೂ ಮೂಡುತ್ತದೆ. ಸುಖ-ದುಃಖ ಎರಡು ನಾಣ್ಯಗಳಂತೆ ನಿಮ್ಮ ಇಂದಿನ ಯೋಜನೆ ಲಾಭದಿಂದ ಕೂಡಿದೆ ಆದರೆ ಮನಸ್ಸು ಬೇಸರಿಸಿದೆ.

ಚಟುವಟಿಕೆ, ಕ್ರಿಯಾಶೀಲತೆಯನ್ನು ವೃದ್ಧಿಸಿಕೊಳ್ಳಿ. ಕಾರ್ಯದಲ್ಲಿ ಜಯ ಸಂಪಾದನೆ ಆಗಲಿದೆ. ನಿಮ್ಮೆಲ್ಲಾ ಕೆಲಸಗಳಿಗೆ ಇಂದು ನಿಮ್ಮ ಸಂಗಾತಿಯ ಸಾರತಿ ಆಗಿರುತ್ತಾರೆ .

RELATED ARTICLES  ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ಸ್ವಾಸ್ಥ್ಯ ಮಂಗಲ ಕಾರ್ಯಕ್ರಮ

ಅದೃಷ್ಟ ಸಂಖ್ಯೆ : 5

ಧನಸ್ಸು ರಾಶಿ

ಕೆಲವು ಸರ್ಕಾರಿ ಕೆಲಸಗಳು ಇಷ್ಟು ದಿನ ಹಿನ್ನಡೆ ಆಗುವುದು ಇಂದು ಒಂದು ಹಂತದ ಸಫಲತೆ ಕಾಣುವಿರಿ. ದೂರದ ಸಂಬಂಧಿಗಳ ನಿಮ್ಮ ಬಳಿ ಸಹಾಯ ಕೇಳಲು ಬರಬಹುದು. ನೀವು ಸಂಘಜೀವಿ ಆದರೆ ಕೆಲವು ಅಯೋಗ್ಯರ ಸಂಘ ಬಿಡುವುದು ಒಳಿತು.

ಉದ್ಯಮಿಗಳು ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡುವರು. ಮಕ್ಕಳು ವೈಜ್ಞಾನಿಕ ಚಟುವಟಿಗಳಲ್ಲಿ ಆಸಕ್ತಿ ವ್ಯಕ್ತಪಡಿಸುತ್ತಾರೆ.

ಅದೃಷ್ಟ ಸಂಖ್ಯೆ : 5

ಮಕರ ರಾಶಿ

ಸಂಗಾತಿಯೊಡನೆ ಶಾಂತ ರೀತಿಯಿಂದ ವರ್ತಿಸಿ. ನಿಮ್ಮ ಮುಂಗೋಪ ಘರ್ಷಣೆಗೆ ತಿರುಗಬಹುದು. ಕೆಲವು ನಿರ್ಧಾರಗಳು ನಿಮ್ಮ ಯೋಜನೆಗಳನ್ನು ಬುಡಮೇಲು ಮಾಡುತ್ತದೆ. ನೆರೆಹೊರೆಯವರ ಜೊತೆ ಪ್ರೀತಿ ಸಂಪಾದಿಸಿ.

ಬಾಕಿ ಹಣ ವಸೂಲಾತಿಗೆ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ. ಗೃಹ ನಿರ್ಮಾಣ ಕಾರ್ಯದಲ್ಲಿ ಅಡೆತಡೆ. ಶುಭ ಗ್ರಹಗಳ ದೃಷ್ಟಿಯಿಂದ ಊಹಿಸದ ಲಾಭಗಳು ಸಿಗಲಿದೆ.

ಅದೃಷ್ಟ ಸಂಖ್ಯೆ : 8

ಕುಂಭ ರಾಶಿ

ಮೇಲ್ನೋಟಕ್ಕೆ ನಗುತ್ತಾ ಪ್ರಶಾಂತವಾಗಿದ್ದೀರಿ. ಆದರೆ ಅಂತರಂಗದಲ್ಲಿ ಬೇಸರದ ಛಾಯೆ ಸುತ್ತಿಕೊಂಡಿದೆ. ಹಣಕಾಸಿನಲ್ಲಿ ಕೊರತೆಗಳಿಂದ ಚಡಪಡಿಕೆ. ಆರ್ಥಿಕ ಚೈತನ್ಯಕ್ಕೆ ಹೋರಾಟವನ್ನು ಪ್ರಾರಂಭಿಸಬೇಕು. ಉತ್ಪಾದಿಸಿದ ಉತ್ಪನ್ನಗಳು ಮಾರಾಟ ಮಾಡಲು ಹವಣಿಸಬೇಕಾಗಿದೆ.

ಇಂದಿನ ದಿನ ಜಂಜಾಟದಿಂದ ಕೂಡಿದ್ದರೂ, ಕುಟುಂಬದಲ್ಲಿನ ಸಿಹಿ ಸುದ್ದಿ ನಿಮಗೆ ಶಕ್ತಿಶಾಲಿಯನ್ನಾಗಿಸುತ್ತದೆ. ಮಕ್ಕಳ ಉನ್ನತ ಶಿಕ್ಷಣಕ್ಕೆ ನಿಮ್ಮ ಶ್ರಮ ಅಗತ್ಯ.

ಅದೃಷ್ಟ ಸಂಖ್ಯೆ : 3

ಮೀನ ರಾಶಿ

ದಿನದ ಪ್ರಾರಂಭದಲ್ಲಿ ಕೆಲಸದ ಒತ್ತಡವಿದ್ದರೂ ಸಂಜೆಯೊಳಗೆ ಪ್ರಶಾಂತವಾಗಿರುವಿರಿ. ಆಧುನಿಕ ತಂತ್ರಜ್ಞಾನದ ವಸ್ತುಗಳಲ್ಲಿ ಆಸಕ್ತಿ ಬೆಳೆಯುತ್ತದೆ. ಮಕ್ಕಳಿಗಾಗಿ ವಿಶೇಷ ವಸ್ತುಗಳನ್ನು ಕೊಂಡುಕೊಳ್ಳಲು ಬಯಸುವಿರಿ. ಬಯಸದೇ ಬರುವಂತಹ ಹಣಕಾಸಿನ ಲಾಭವೂ ನಿಮ್ಮನ್ನು ಸಂತೋಷಗೊಳಿಸುತ್ತದೆ.

ಇಂದು ನಿಮ್ಮ ಸಂಗಾತಿಯು ತುಂಬಾ ಸುಂದರವಾಗಿ ಕಾಣಿಸುವರು. ಆಲಿಂಗನ, ಪ್ರೀತಿ, ಪ್ರಣಯ ಯಾವುದೇ ಕೊರತೆ ಇಲ್ಲದೆ ಆನಂದಿಸುವಿರಿ. ನಿಮ್ಮ ವೈವಾಹಿಕ ಜೀವನದಲ್ಲಿ ಸುಂದರ ಅಮೃತ ಘಳಿಗೆ. ಪ್ರೇಮಿಗಳು ಪ್ರೇಮ ಪರೀಕ್ಷೆಯಲ್ಲಿ ಫಲಿತಾಂಶ ಕಾಣುವರು. ಹೊಸ ವಾಹನ ಖರೀದಿಗೆ ಯೋಜನೆ ರೂಪಿಸಲಿದ್ದಿರಿ.

ಅದೃಷ್ಟ ಸಂಖ್ಯೆ : 5