ಮೇಷ ರಾಶಿ

ನಿಮ್ಮ ಕೆಲಸವು ಸರ್ವ ಪ್ರಗತಿ ಕಂಡರೂ ಅದು ಕಾರ್ಯರೂಪಕ್ಕೆ ಬರುವಷ್ಟರಲ್ಲಿ ವಿಫಲವಾಗುವ ಸಂಭವ. ಕುಟುಂಬದಲ್ಲಿ ಸಂತೋಷದಾಯಕ ವಾತಾವರಣ ಇದೆ. ನಿಮ್ಮ ಆತ್ಮೀಯ ಜನಗಳಿಂದ ಕೆಲವು ಕಾರ್ಯಗಳಿಗೆ ಅಡ್ಡಿಪಡಿಸುವ ಸಂದರ್ಭ ಬರಬಹುದು.

ಆರ್ಥಿಕ ಸ್ಥಿತಿಯು ಸಮಾನಾಂತರದಿಂದ ಕೂಡಿದೆ. ನಿಮ್ಮ ಇಷ್ಟಾರ್ಥಗಳು ಪೂರ್ಣಗೊಳ್ಳಲು ಕಠಿಣ ಕ್ರಮ ಅಗತ್ಯ ಇದೆ. ದೂರ ಪ್ರವಾಸವು ರೋಚಕ ಮತ್ತು ಉಲ್ಲಾಸವನ್ನು ನೀಡುತ್ತದೆ.

ಅದೃಷ್ಟ ಸಂಖ್ಯೆ : 1

ವೃಷಭ ರಾಶಿ

ನಿಮ್ಮ ಮನಸ್ಸಿನ ಉದ್ವೇಗ ಹಾಗೂ ಚಂಚಲತೆಯನ್ನು ಹತೋಟಿಯಲ್ಲಿಡಿ. ನಿಮ್ಮ ಸೌಮ್ಯ ಸ್ವಭಾವ ದುರುಪಯೋಗ ಮಾಡಿಕೊಳ್ಳುವ ಜನರಿದ್ದಾರೆ ಎಚ್ಚರ. ನಿಮ್ಮ ಒಳ್ಳೆಯ ಮಾತುಗಳು ಅಪಾರ್ಥದಲ್ಲಿ ಕೇಳಿಸಿಕೊಳ್ಳುವವರು.

ಸಾರ್ವಜನಿಕ ಕ್ಷೇತ್ರದಲ್ಲಿರುವವರು ನಡೆ, ನುಡಿ, ಆಚಾರ, ವಿಚಾರಗಳಲ್ಲಿ ಗಮನ ನೀಡಿ. ಅನಾರೋಗ್ಯದಿಂದ ಯೋಜಿತ ಕಾರ್ಯಗಳು ಮುಂದೂಡಲ್ಪಡುತ್ತದೆ. ಹಳೆಯ ಮನಸ್ತಾಪಗಳಿಗೆ ಇತಿಶ್ರೀ ಹಾಕುವಿರಿ. ಕುಟುಂಬದಲ್ಲಿನ ಒಬ್ಬ ವ್ಯಕ್ತಿಯಿಂದ ಹಣಕಾಸಿನ ನೆರವು ಸಿಗಲಿದೆ.

ಅದೃಷ್ಟ ಸಂಖ್ಯೆ : 7

ಮಿಥುನ ರಾಶಿ

ನಿಮ್ಮ ಎದುರಾಳಿಗಳ ವಿಶೇಷತೆಯನ್ನು ತಿಳಿದುಕೊಂಡು ಹೋರಾಟದಲ್ಲಿ ಪಾಲ್ಗೊಳ್ಳಿ. ನಿಮ್ಮಲ್ಲಿನ ಉದಾಸೀನತೆ ನಿಮ್ಮ ಶತ್ರು. ಕುಟುಂಬದಲ್ಲಿ ಜೀವನಶೈಲಿ ಸುಧಾರಣೆಗೆ ಒತ್ತು ನೀಡಿ. ದುಂದು ವೆಚ್ಚದಿಂದ ಆರ್ಥಿಕ ಮುಗ್ಗಟ್ಟು ಕಾಡುತ್ತದೆ.

ಉದ್ಯೋಗದಲ್ಲಿ ಕೆಲವು ಆಮಿಷಗಳಿಗೆ ಕಿವಿಗೊಡಬೇಡಿ. ನಿಮ್ಮಿಂದ ಇಂದು ಧರ್ಮಕಾರ್ಯ, ದೇವತಾ ಕಾರ್ಯ ಜರುಗುವುದು. ಶತ್ರುಗಳ ಪ್ರಾಬಲ್ಯದಿಂದ ಆಘಾತ. ನಿಮ್ಮ ಸಂಗಾತಿಯ ಹಿತ ಮಾತುಗಳನ್ನು ಕೇಳುವಂತರಾಗಿ ಬರುವ ಸಮಸ್ಯೆ ಕರಗಿ ಹೋಗುವುದು.

ಅದೃಷ್ಟ ಸಂಖ್ಯೆ : 2

ಕರ್ಕಾಟಕ ರಾಶಿ

ವಿವಾಹ ಹಾಗೂ ಸಂತಾನ ಶುಭ ಸುದ್ದಿಯು ಬರಲಿದೆ. ಕೆಲವು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಯಾರದೋ ಇಷ್ಟಕ್ಕೆ ಅಥವಾ ಒತ್ತಾಯಕ್ಕೆ ಮಣಿಯಬೇಡಿ. ಸ್ವಂತ ನಿರ್ಧಾರ, ಬುದ್ಧಿವಂತಿಕೆಯಿಂದ ಆಯ್ದುಕೊಳ್ಳಿ. ಇಂದು ನೀವು ವಿದ್ಯಾರ್ಥಿಗಳಂತೆ ಹೊಸ ವಿಷಯ ಕಲಿಕೆ ಯೋಗ ನಿಮ್ಮಲ್ಲಿದೆ.

ಉದ್ಯೋಗ ನಿಮಿತ್ತ ವಿದೇಶ ಪ್ರವಾಸ ಯೋಗ. ನಿಮ್ಮ ಸಂಗಾತಿಯ ತವರು ಮನೆಯಿಂದ ಹಣಕಾಸು ಆಸ್ತಿಪಾಸ್ತಿಯನ್ನು ನಿರೀಕ್ಷಿಸಬಹುದು. ಜಮೀನು ಖರೀದಿ ಹಾಗೂ ಗೃಹ ಖರೀದಿ ಯೋಜನೆ ರೂಪಿಸಲಿದ್ದಿರಿ. ಆತ್ಮೀಯ ಮಿತ್ರರು ದೂರ ಹೋಗುವ ಸಂದರ್ಭ ಬರಬಹುದು.

ಅದೃಷ್ಟ ಸಂಖ್ಯೆ : 2

ಸಿಂಹ ರಾಶಿ

ವಿರೋಧಿ ವರ್ಗಗಳ ಸಂಚಿಗೆ ಸೂಕ್ತ ಪ್ರತಿಕ್ರಿಯೆ ನೀಡಲಿದ್ದೀರಿ. ಮುಂಜಾನೆ ಬೇಗ ಏಳುವುದನ್ನು ರೂಢಿಸಿಕೊಳ್ಳಿ. ವ್ಯಾಯಾಮ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ, ಆರೋಗ್ಯವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ.

RELATED ARTICLES  ಶಾಲೆಯಲ್ಲಿ ಊಟದ ಸಮಯದಲ್ಲಿ ಮಹತ್ವದ ಬದಲಾವಣೆ..!

ನಿಮ್ಮಲ್ಲಿರುವ ಕೆಲವು ಹಣಕಾಸಿನ ಚಿಂತೆಗಳಿಂದ ಹೊರಬರಲು ತಯಾರಾಗಿ, ಹಾಗೆಯೇ ಕೆಲವು ವ್ಯವಹಾರ ಪಟುತ್ವ ಕಲಿಯಲು ಪ್ರಯತ್ನಿಸಿ. ಇದು ನಿಮ್ಮ ಮುಂದಿನ ಯೋಜನೆಗಳಿಗೆ ದಾರಿದೀಪವಾಗುತ್ತದೆ. ಮನೆ ಮಾರಾಟ ಮಾಡಲು ಇದು ಸೂಕ್ತ ಸಮಯವಲ್ಲ.

ಅದೃಷ್ಟ ಸಂಖ್ಯೆ : 9

ಕನ್ಯಾ ರಾಶಿ

ನಷ್ಟದ ಉದ್ದಿಮೆಯಿಂದ ಹೊರಬರಲು ಕಂಕಣಬದ್ಧರಾಗಿ. ದುಡಿಮೆ ಮಾಡಲು ಹಲವಾರು ದಾರಿಗಳಿವೆ ಎಂಬುದನ್ನು ಮರೆಯದಿರಿ. ಸೋಮಾರಿತನ ವಿಷದಂತೆ ಅದು ನಮ್ಮನ್ನು ನಾಶಗೊಳಿಸುತ್ತದೆ, ಚಟುವಟಿಕೆಯಿಂದಿರಿ ಗೆಲುವು ಸಾಧ್ಯ. ಕೆಲವು ಗುರುತರ ಆಪಾದನೆ-ಅಪವಾದಗಳು ನಿಮ್ಮನ್ನು ಜರ್ಜರಿತರಾಗಿಸುತ್ತದೆ. ಸತ್ಯಮೇವ ಜಯತೇ ಎಂಬ ವಾಕ್ಯವು ಮರೆಯದಿರಿ.

ಇಂತಹ ಪರಿಸ್ಥಿತಿ ತಂದುಕೊಳ್ಳಲು ನೀವೇ ಕಾರಣಕರ್ತರಾಗಿರುತ್ತೀರಿ. ಆದಷ್ಟು ಸರಿಪಡಿಸಿಕೊಳ್ಳಿ. ಮನೆಯಲ್ಲಿನ ಹಿರಿಯರ ಮಾತುಗಳನ್ನು ಪಾಲಿಸಿ.ನಿಮ್ಮ ದೃಷ್ಟಿಯಂತೆ ಜೀವನ ಕಠಿಣ ಮಾಯವಾಗಿರುತ್ತದೆ. ಗ್ರಹಗತಿಗಳ ಶುಭ ಫಲಗಳು ಸಂಜೆಯೊಳಗೆ ಮಹತ್ಕಾರ್ಯ ಸಾಧನೆಗೆ ಪ್ರೇರೇಪಣೆ ನೀಡುತ್ತದೆ.

ಅದೃಷ್ಟ ಸಂಖ್ಯೆ : 6

ತುಲಾ ರಾಶಿ

ಇಂದು ನಿಮ್ಮ ವ್ಯಾಪಾರದಲ್ಲಿ ಚಾಕಚಕ್ಯತೆ ಕಾಣಿಸುತ್ತದೆ. ವ್ಯಾಪಾರ ಧರ್ಮದಲ್ಲಿ ಲಾಭ ಗಳಿಕೆಯೊಂದೇ ಉದ್ದೇಶ, ಎಂಬ ಮಾತಂತೆ ಇಂದು ಅಧಿಕ ಲಾಭ ಪಡೆಯುವ ಯೋಗಗಳು ಕಾಣುತ್ತಿವೆ. ಯಾವುದೇ ವಸ್ತುಗಳನ್ನು ಆಗಲಿ ಮನುಷ್ಯರನ್ನಾಗಲಿ ಉತ್ಪ್ರೇಕ್ಷೆ ಮಾಡಬಾರದು, ಇದರಿಂದ ನಷ್ಟ ನಿಮಗೆ.

ಸಾಲದ ವ್ಯಾಪಾರವು ನಿಮಗೆ ಹಾನಿಯನ್ನು ತಂದುಕೊಡಬಹುದು, ಜಾಗ್ರತೆ ಇರಲಿ. ಉನ್ನತ ಹುದ್ದೆಯಲ್ಲಿರುವವರು ಹೊಸ ಜವಾಬ್ದಾರಿ ಹಾಗೂ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಇಂದು ವ್ಯಾಜ್ಯಗಳಲ್ಲಿ ಗೆಲುವು ನಿಮ್ಮ ಪಕ್ಷ.

ಅದೃಷ್ಟ ಸಂಖ್ಯೆ : 2

ವೃಶ್ಚಿಕ ರಾಶಿ

ಸಂಘಟನೆ ಚತುರರು ನೀವು. ಸದಾ ಜನಗಳ ಮಧ್ಯೆ ಇರಲು ಬಯಸುವಿರಿ. ಅಧಿಕಾರ, ಸಮಾಜ ಸೇವೆ ಇವುಗಳ ಮೇಲೆ ಆಸಕ್ತಿ ಹೆಚ್ಚು. ಇಂದು ಹೆಸರು ಗಳಿಸುವ ದಿನವಿದು. ಸಮಾಜ ಪರ ಚಿಂತನೆ ಅದೇ ರೀತಿ ಕುಟುಂಬ ಚಿಂತೆಯು ಸ್ವಲ್ಪ ಮಾಡುವುದು ಒಳಿತು.

ಮಕ್ಕಳಿಗಾಗಿ, ಬಾಳ ಸಂಗಾತಿಗಾಗಿ ಸ್ವಲ್ಪ ಹೊತ್ತು ಮೀಸಲಿಟ್ಟರೆ ನಿಮ್ಮ ಸಂಪತ್ತು ಹಾರಿ ಹೋಗುವುದಿಲ್ಲ. ಆರ್ಥಿಕತೆಯಲ್ಲಿ ಲಾಭ ಅನಿಶ್ಚಿತತೆಯಿಂದ ಕೂಡಿದೆ. ಸ್ಪರ್ಧೆಗಳಲ್ಲಿ ಪ್ರಬಲವಾದ ಪ್ರತಿರೋಧವನ್ನು ಒಡ್ಡುತ್ತಾರೆ. ಕುಲದೇವತಾ ಆರಾಧನೆಯಿಂದ ಗೆಲುವು ನಿಮ್ಮದೇ.

ಅದೃಷ್ಟ ಸಂಖ್ಯೆ : 4

RELATED ARTICLES  ದಿನಾಂಕ 14/06/2019 ರ ದಿನ ಭವಿಷ್ಯ ಇಲ್ಲಿದೆ.

ಧನಸ್ಸು ರಾಶಿ

ಇಂದು ವಿಶಿಷ್ಟ ಭೋಜನಗಳು ನಿಮ್ಮ ಪಾಲಾಗುತ್ತದೆ. ಆರೋಗ್ಯಯುತ ಆಹಾರ ಸೇವಿಸಿ. ಕ್ರೀಡಾಪಟುಗಳಿಗೆ ಸಾಧನೆಯ ದಿನವಿದು. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಕೆಲವು ಮಾರ್ಪಾಡುಗಳು ನಡೆಯಲಿವೆ. ದಿನಸಿ ವ್ಯಾಪಾರಿಗಳಿಗೆ ಪೂರ್ಣ ಪ್ರಮಾಣದ ಲಾಭ.

ನಿಮ್ಮ ಮಡದಿಯ ಬಳಗದಿಂದ ಕೆಲವು ವಾರ್ತೆಗಳು ಆಲಿಸಲಿದ್ದಿರಿ. ತೆರಿಗೆ ಹಾಗೂ ಹೂಡಿಕೆಗಳನ್ನು ಆದಷ್ಟು ನಿಪುಣರ ಸಲಹೆ ಪಡೆದು ಮುಂದುವರಿಯಿರಿ. ಮೋಸದ ಉದ್ದಿಮೆಯಲ್ಲಿ ನಿಮ್ಮನ್ನು ಸಿಲುಕಿಸಬಹುದಾಗಿದೆ ಜಾಗ್ರತೆ ವಹಿಸಿ.

ಅದೃಷ್ಟ ಸಂಖ್ಯೆ : 9

ಮಕರ ರಾಶಿ

ಆರೋಗ್ಯದ ಕಡೆ ಹೆಚ್ಚು ಗಮನ ವಹಿಸಿ, ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ತಲೆದೋರಬಹುದು. ಕೆಲಸದ ಒತ್ತಡ ಹಾಗೂ ಮನೆಯಲ್ಲಿನ ಕೆಲವು ಪ್ರಸಂಗಗಳು ನಿಮ್ಮನ್ನು ಖಿನ್ನತೆಗೆ ದೂಡುತ್ತದೆ.

ಅಧಿಕಾರ ವರ್ಗದಿಂದ ಕಚೇರಿ ಕೆಲಸಗಳಲ್ಲಿ ನಷ್ಟ. ಉದ್ಯೋಗದಲ್ಲಿ ಅಭಿವೃದ್ಧಿ ಕ್ಷೀಣ. ಇಂದು ವಾಹನ ಸವಾರಿಯಲ್ಲಿ ಜಾಗ್ರತೆ ವಹಿಸಿ. ಕೆಲವು ಸಂಗತಿಗಳಲ್ಲಿ ಗೊತ್ತಿರುವ ವಿಷಯವನ್ನು ಗೊತ್ತಿಲ್ಲದಂತೆ ಇದ್ದುಬಿಡಿ. ಹನುಮಾನ್ ಚಾಲೀಸ್ ಹೇಳಿಕೊಳ್ಳುವುದರಿಂದ ಸಂಕಷ್ಟಗಳು ದೂರವಾಗುತ್ತದೆ.

ಅದೃಷ್ಟ ಸಂಖ್ಯೆ : 6

ಕುಂಭ ರಾಶಿ

ಕೆಲವರು ನೀಡಿರುವ ಭರವಸೆಗಳು ಭರವಸೆಯಾಗಿಯೇ ಇರುತ್ತದೆ. ನೀವು ಯಾವುದೇ ವ್ಯಕ್ತಿಗಳನ್ನು ಅವಲಂಬಿತವಾಗಿ ಜೀವನ ಮಾಡುವುದು ಕಷ್ಟ. ನಿಮ್ಮ ಶ್ರಮ, ನಿಮ್ಮ ಶ್ರದ್ಧೆ ನಿಮ್ಮನ್ನು ಕಾಪಾಡುತ್ತದೆ. ಇಂದು ಬಹುತೇಕವಾಗಿ ಹಳೆಯ ಪರಿಚಿತರು ಎದುರಾಗುವರು.

ಮೋಜು ಕೂಟಗಳಲ್ಲಿ ಪಾಲ್ಗೊಳ್ಳುವ ಸನ್ನಿವೇಶಗಳು ಬರುತ್ತದೆ. ಕೆಲವು ವಿಷಯದಲ್ಲಿ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಣೆ ಮಾಡಲಿದ್ದೀರಿ. ಸಂಗಾತಿಯು ನಿಮ್ಮ ಚಿಕ್ಕ ಮಾತಿಗೆ ಮುನಿಸಿಕೊಂಡಿರಬಹುದು ಆದಷ್ಟು ಬೇಗ ಸಮಾಧಾನ ಪಡಿಸಿ. ಹಣಕಾಸಿನ ವಿಷಯಕ್ಕಾಗಿ ದೂರದೂರಿಗೆ ಹೋಗುವ ಪ್ರಸಂಗ ಬರಬಹುದು.

ಅದೃಷ್ಟ ಸಂಖ್ಯೆ : 7

ಮೀನ ರಾಶಿ

ವಿಶಿಷ್ಟ ಚಟುವಟಿಕೆಗಳಲ್ಲಿ ಇಂದು ಆಸಕ್ತಿ ಬೆಳೆಯುತ್ತದೆ, ಬಂಡವಾಳದ ಕೊರತೆಯಿಂದ ಕಾರ್ಯ ಹಾನಿ ಸಾಧ್ಯತೆ. ವ್ಯಾಪಾರದಲ್ಲಿ ಲಾಭವಿದ್ದರೂ ಕೆಲವು ಅಗತ್ಯ ಖರ್ಚುಗಳಿಂದ ಆರ್ಥಿಕ ಅಸ್ಥಿರತೆ ಕಾಡಬಹುದು.

ನೀವು ಭಾವನಾ ಜೀವಿ ಹಾಗೆಯೇ ಎಲ್ಲರಲ್ಲೂ ಪ್ರೇಮ ಬಯಸುವಿರಿ ಕೆಲವು ಅನಿರೀಕ್ಷಿತ ಘಟನೆಗಳಿಂದ ಖಿನ್ನತೆ ಆಗುವುದೂ ಉಂಟು. ಕೆಲವು ಸೂಕ್ಷ್ಮ ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿತರೆ ಉತ್ತಮ. ಇಂದಿನ ಸಂಜೆ ಸುಮಧುರ ಹಾಗೂ ಸೌಂದರ್ಯಯುತವಾಗಿರುತ್ತದೆ. ಪ್ರೇಮ ಜೀವನದ ವಿಶಿಷ್ಟ ಅನುಭವವನ್ನು ಪಡೆಯುವಿರಿ.

ಅದೃಷ್ಟ ಸಂಖ್ಯೆ : 2