ಮೇಷ ರಾಶಿ
ಇಂದು ಪ್ರವಾಸದ ಯೋಜನೆಯನ್ನು ಹಾಕುವಿರಿ. ನಿಮ್ಮ ಆಪ್ತ ನಂಬಿಕಸ್ಥ ವಲಯದಲ್ಲಿ ವಂಚನೆ ಸಾಧ್ಯತೆ. ಹೊಸದಾಗಿ ಪರಿಚಯವಾಗುವ ವ್ಯಕ್ತಿಗಳಿಂದ ಎಚ್ಚರವಾಗಿರಿ.

ಸಾಲ ಬಾಧೆ ನಿಮ್ಮನ್ನು ಚಿಂತಾಕ್ರಾಂತರನ್ನಾಗಿ ಮಾಡುತ್ತಿದೆ. ದುಡಿಮೆಯಲ್ಲಿ ವ್ಯವಸ್ಥಿತವಾದ ಲಾಭವನ್ನು ಕಂಡುಕೊಳ್ಳಲು ಕೆಲವು ಮಾರ್ಗಗಳು ಉಪಯೋಗದಿಂದ ಸಮಸ್ಯೆ ನಿವಾರಿಸಬಹುದು. ಆಕಸ್ಮಿಕವಾದ ಕೆಲವು ಘಟನೆಗಳು ಅದ್ಭುತವಾದದನ್ನೆ ಸೃಷ್ಟಿಸುತ್ತದೆ.

ಅದೃಷ್ಟ ಸಂಖ್ಯೆ : 9

ವೃಷಭ ರಾಶಿ

ವ್ಯಾಪಾರ-ವ್ಯವಹಾರ ಉದ್ಯಮಿಗಳಿಗೆ ಲಾಭದಾಯಕ ದಿನವಾಗಿದೆ. ಪಶು ಸಂಗೋಪನೆ ಮಾಡುವವರಿಗೆ ಹಲವು ಸೌಕರ್ಯ-ಸವಲತ್ತು ದೊರಕಬಹುದಾಗಿದೆ. ಆರ್ಥಿಕತೆಯಲ್ಲಿ ಉತ್ತಮ ಮಟ್ಟದಲ್ಲಿ ಇದ್ದರೂ ಕೆಲವು ಹೂಡಿಕೆಗಳ ಮೇಲೆ ನಿಗಾ ವಹಿಸುವುದು ಸೂಕ್ತ.

ಅಪ್ರಯೋಜಕರ ಮಾತುಗಳಿಗೆ ಮರುಳಾಗಬೇಡಿ. ಗೃಹ ಸಂಬಂಧಿ ಕೆಲಸದಲ್ಲಿ ನಿರಾಸಕ್ತಿ. ಮಕ್ಕಳ ಬೆಳವಣಿಗೆ ಬಗ್ಗೆ ಸ್ವಲ್ಪ ಸಮಯ ಯೋಚನೆ ಮಾಡಿ. ಸ್ನೇಹ ಒಳ್ಳೆಯದು ಆದರೆ ಅದೇ ಸರ್ವಸ್ವವಲ್ಲ. ನಿಮ್ಮ ಮನೆ ಮಡದಿಯ ಜೊತೆ ಕಾಲ ಕಳೆಯುವುದು ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ.

ಅದೃಷ್ಟ ಸಂಖ್ಯೆ : 3

ಮಿಥುನ ರಾಶಿ

ನಿಮ್ಮ ದಾರಿಯು ಉತ್ತಮವಾಗಿದ್ದು, ನೀವು ಇಡುವ ಹೆಜ್ಜೆ ಸೂಕ್ತ ರೀತಿಯಲ್ಲಿದ್ದರೆ ನಿಮ್ಮ ಕನಸು ನನಸಾಗುವುದು ನಿಶ್ಚಿತ. ಕೆಲಸದಲ್ಲಿ ಹೊಸ ಬದಲಾವಣೆ, ಹೊಸ ಪರಿಸರ ಕಾಣಲಿದೆ.

ಮನೆಯಲ್ಲಿನ ಹಿರಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಂಭವ. ನಿಮ್ಮ ಕೆಲಸವು ಆದಷ್ಟು ತಪ್ಪು ನಡೆಯದಂತೆ ಮಾಡಿ. ಏಕೆಂದರೆ ಸಣ್ಣ ತಪ್ಪನ್ನು ದೊಡ್ಡದಾಗಿ ಬಿಂಬಿಸಿ ಆವಾಂತರ ಸೃಷ್ಟಿಸುವ ಜನರಿದ್ದಾರೆ.

ಅದೃಷ್ಟ ಸಂಖ್ಯೆ : 4

ಕರ್ಕಾಟಕ ರಾಶಿ

ನಿಮ್ಮಲ್ಲಿನ ಪ್ರಾಮಾಣಿಕತೆಯನ್ನು ಸಹ ಪ್ರಶ್ನಿಸುವ ಜನರಿದ್ದಾರೆ, ಅದರ ಬಗ್ಗೆ ಭಯ ಬೇಡ, ಸತ್ಯ ಖಂಡಿತ ಗೆಲ್ಲುವುದು. ಸಂಗಾತಿಯ ಕೆಲವು ಆಶೋತ್ತರಗಳನ್ನು ಪೂರೈಸಲು ಬೇಕಾಗಿರುವುದು ಪತಿ ಧರ್ಮ ಎಂಬುದನ್ನು ಮರೆಯದಿರಿ.

ನಿಮ್ಮ ಅಲಕ್ಷ್ಯತನದಿಂದ ಸಂಸಾರದಲ್ಲಿ ಸಮಸ್ಯೆ ಬರಬಹುದು. ಆರ್ಥಿಕ ಸ್ಥಿತಿಯು ಮಂದಗತಿಯಾಗಿದೆ. ಕೆಲಸದ ನಿಮಿತ್ತ ಅಲೆದಾಟ ಹೆಚ್ಚಾಗುತ್ತದೆ. ಆಲಸ್ಯ ಹಾಗೂ ಜಂಜಾಟಗಳಿಂದ ಯೋಜನೆಗಳಲ್ಲಿ ನಿರುತ್ಸಾಹ ಸಾಧ್ಯತೆ. ಕೆಲವು ಕಡತಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವುದು.

ಅದೃಷ್ಟ ಸಂಖ್ಯೆ : 1

ಸಿಂಹ ರಾಶಿ

ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹಳೆಯ ಮಿತ್ರರ ಭೇಟಿಯಿಂದ ದುಂದುವೆಚ್ಚ ಆಗಬಹುದು. ಕೆಲವು ಆರೋಪಗಳಿಂದ ನಿಮ್ಮ ಆತ್ಮಸ್ಥೈರ್ಯ ಕಡಿಮೆ ಆಗುವಂತೆ ಮಾಡಲು ಸ್ವಂತ ಬಳಗದಲ್ಲಿ ಜನರಿದ್ದಾರೆ, ಆದಷ್ಟು ಎಚ್ಚರ ವಹಿಸಿ.

RELATED ARTICLES  ಇಂದಿನ ದಿನ ನಿಮಗೆ ಹೇಗಿದೆ ಗೊತ್ತಾ? ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ದಿನಾಂಕ 21-12-2018ರ ದಿನ ಭವಿಷ್ಯ ಇಲ್ಲಿದೆ

ಮನೆಯಲ್ಲಿ ಶುಭ ಕಾರ್ಯ ಜರುಗುವ ಮುನ್ಸೂಚನೆ ಸಿಗುತ್ತದೆ. ನಿಮ್ಮ ಉತ್ಸಾಹವನ್ನು ಕಡಿಮೆಗೊಳಿಸಲು ಆರ್ಥಿಕವಾಗಿ ಬಳಲುವಿಕೆ ಕಾರಣವಾಗುತ್ತದೆ. ಆದಷ್ಟು ಬೇಗನೆ ನೀವು ಹಣ ಉಳಿಕೆ ಕಾರ್ಯದಲ್ಲಿ ಮಗ್ನರಾಗಿ.

ಅದೃಷ್ಟ ಸಂಖ್ಯೆ : 9

ಕನ್ಯಾ ರಾಶಿ

ಇಂದಿನ ದಿನ ಅವಕಾಶಗಳ ಸುರಿಮಳೆ ಸುರಿಯಲಿದೆ. ಉತ್ಸಾಹ ಮತ್ತು ಚೈತನ್ಯ ಕಡಿಮೆಯಾಗದಂತೆ ನೋಡಿಕೊಳ್ಳಿ. ನಿಮ್ಮ ಸ್ವಯಂಕೃತ ಕೆಲವು ತಪ್ಪುಗಳು ನಿಮ್ಮ ಯೋಜನೆಗಳನ್ನು ಬುಡಮೇಲು ಮಾಡಬಹುದು ಅಗತ್ಯ ಜಾಗ್ರತೆ ವಹಿಸಿ. ನಿಮ್ಮ ಕೆಲಸಗಳ ವ್ಯವಸ್ಥೆಯು ಸರಿಯಾದ ಸಮಯಕ್ಕೆ ಆಗಲಿ ಏಕೆಂದರೆ ಶುಭ ಗ್ರಹಗಳ ಫಲ ಶುಭವನ್ನು ಕೊಡುತ್ತದೆ.

ಕೆಲವು ಅಶುಭ ಗ್ರಹಗಳು ನಿಮಗೆ ಉದಾಸೀನತೆ, ತಾತ್ಸಾರ, ಅಹಂಕಾರ ಮುಂತಾದವುಗಳು ರೂಢಿಸಿಕೊಳ್ಳಬಹುದು. ಆದ್ದರಿಂದ ಇಂದಿನ ದಿನ ತಾವು ಹಿಡಿದ ಕೆಲಸ ಪೂರ್ಣಗೊಳ್ಳುವವರೆಗೂ ಶ್ರಮವಹಿಸಿ. ಸೇವಾ ವಲಯದಲ್ಲಿ ಅತಿ ಹೆಚ್ಚು ಲಾಭಕಾರಿ ಹಾಗೂ ಆರ್ಥಿಕತೆ ಬಲಿಷ್ಠತೆ ಇಂದ ಕೂಡಿದೆ.

ಅದೃಷ್ಟ ಸಂಖ್ಯೆ : 3

ತುಲಾ ರಾಶಿ

ಅಂದುಕೊಂಡ ಕೆಲಸವು ಪೂರ್ಣವಾಗುವ ಸ್ಥಿತಿಯಲ್ಲಿದೆ. ಕೆಲವು ಅತ್ಯಮೂಲ್ಯ ಕಡತಗಳ ಜೋಪಾನವಾಗಿ ಇಟ್ಟುಕೊಳ್ಳಿ. ನಿಮ್ಮ ಕೆಲಸದ ಪ್ರಾಮಾಣಿಕತೆಯು ಎಲ್ಲರ ಬಾಯಿಂದ ಹೊಗಳಿಕೆ ಮಾತು ಪಸರಿಸುತ್ತದೆ.

ಇಂದು ದಿನದ ಕಾರ್ಯ ಬೇಗನೆ ಮುಗಿಸಿ ಮನೆಗೆ ಬಂದು ಆನಂದವಾಗಿರಬೇಕು. ಸಂಗಾತಿಯೊಡನೆ ಚೇಷ್ಟೆ, ಪ್ರೇಮ, ಪ್ರಣಯ ಇವೆಲ್ಲವೂ ಜೀವನೋತ್ಸಾಹ ತರಿಸುತ್ತದೆ. ಇಂದು ಭೋಜನ ಕೂಟಕ್ಕೆ ಅಥವಾ ವಸ್ತು ಖರೀದಿಗೆ ಕುಟುಂಬ ಸಮೇತ ಪ್ರಯಾಣ ಬೆಳೆಸಲಿದ್ದೀರಿ.

ಅದೃಷ್ಟ ಸಂಖ್ಯೆ : 8

ವೃಶ್ಚಿಕ ರಾಶಿ

ನಿಮ್ಮ ಅಪಾರ ಶ್ರಮದಿಂದ ವಿಶೇಷವಾದದ್ದು ಸಂಪಾದಿಸುವಿರಿ. ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಬಂದರೂ ಸರಿಪಡಿಸುವ ವ್ಯವಧಾನ ನಿಮ್ಮಲ್ಲಿದೆ. ಇದೇ ನಿಮ್ಮ ದಾಂಪತ್ಯ ಜೀವನದ ಗುಟ್ಟು. ನಿಮ್ಮ ಕುಟುಂಬದಲ್ಲಿ ಬೇರೆಯವರ ಹಸ್ತಕ್ಷೇಪವನ್ನು ಆದಷ್ಟು ತಡೆಯಿರಿ.

ಅನಿರೀಕ್ಷಿತವಾಗಿ ಬಂದಂತಹ ಕೆಲಸಗಳು ನಿಮ್ಮನ್ನ ಹೊಸ ಮಾರ್ಗಕ್ಕೆ ಕೊಂಡೊಯ್ಯಲಿದೆ. ಕೆಲವು ಮೋಸದ ಒಪ್ಪಂದಗಳು ಬೆಲೆ ತೆರಬೇಕಾದೀತು, ವ್ಯವಹಾರದಲ್ಲಿ ಜಾಗೃತೆ ಅವಶ್ಯಕವಾದದ್ದು. ಬಂಧುವರ್ಗದ ಹಣದ ಬೇಡಿಕೆ ನಿಮ್ಮನ್ನು ಕಸಿವಿಸಿಗೊಳಿಸಬಹುದು ಉಪಾಯದಿಂದ ಸಾಗಹಾಕಿ.

ಅದೃಷ್ಟ ಸಂಖ್ಯೆ : 4

ಧನಸ್ಸು ರಾಶಿ

ಮಕ್ಕಳ ಶೈಕ್ಷಣಿಕ ದೃಷ್ಟಿಕೋನದಲ್ಲಿ ನಿಮ್ಮದೇ ವಿಚಾರಗಳನ್ನು ತುಂಬಬೇಡಿ. ಆಯ್ಕೆಯು ಅವರ ಆದ್ಯತೆ ಮೇರೆಗೆ ಇರಲಿ. ಕೆಲವು ವ್ಯಕ್ತಿಗಳಿಗೆ ನಿಮ್ಮ ವ್ಯಾಪಾರ ಸೂಕ್ಷ್ಮ ವಿಷಯಗಳನ್ನು ತಿಳಿಸದೇ ಇರುವುದು ಸೂಕ್ತ. ಪ್ರೇಮಿಗಳಿಗೆ ಇಂದು ಒಳ್ಳೆಯ ಫಲಿತಾಂಶವನ್ನು ಕಾಣಬಹುದು, ಹಾಗೆಯೇ ಸಫಲತೆ ಕೂಡ ನಿಮ್ಮ ಮುಂದೆ ಇದೆ.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 25-11-2018 ರ ರಾಶಿ ಭವಿಷ್ಯ ಇಲ್ಲಿದೆ.

ನೀರಿನ ಪ್ರವಾಸ ಸ್ಥಳಗಳಲ್ಲಿ ಜಾಗ್ರತೆ ವಹಿಸಿ. ಪ್ರವಾಸವನ್ನು ಮುಂದೂಡುವುದು ಒಳ್ಳೆಯದು. ಉದ್ಯೋಗದಲ್ಲಿ ಉತ್ತಮ ವಹಿವಾಟು. ಆರ್ಥಿಕವಾಗಿ ಸಬಲರಾಗುವಿರಿ. ಇಂದು ಉಡುಗೊರೆ, ಕಾಣಿಕೆಗಳು ನಿಮ್ಮ ಕೆಲಸದ ಶ್ರದ್ಧೆಗೆ ಸಿಗಲಿದೆ.

ಅದೃಷ್ಟ ಸಂಖ್ಯೆ : 2

ಮಕರ ರಾಶಿ

ವಿಶೇಷವಾದ ಸಂಗತಿಗಳಲ್ಲಿ ಕುತೂಹಲ ಹೆಚ್ಚಾಗುತ್ತದೆ. ಆಲಸ್ಯದಿಂದ ಮಾಡುವ ಕೆಲಸ ವಿಳಂಬವಾಗುತ್ತದೆ. ಸಹೋದ್ಯೋಗಿಗಳ ಕಿರಿಕಿರಿಗೆ ಸರಿಯಾದ ಉತ್ತರವನ್ನೇ ನೀಡುವಿರಿ. ಅಪ್ರಾಮಾಣಿಕ ವ್ಯಕ್ತಿಗಳ ಸಹವಾಸದಿಂದ ಬೇಡದ ಕೆಲಸಕ್ಕೆ ಕೈ ಹಾಕಿ ನಷ್ಟ ಅನುಭವಿಸಬಹುದು.

ನಿಮ್ಮ ಸ್ನೇಹಿತ ಹಾಗೂ ಬಂಧು-ವರ್ಗಗಳ ಸಹಕಾರದಿಂದ ಆರ್ಥಿಕ ಪರಿಸ್ಥಿತಿಗೆ ಕೊಂಚ ಮಟ್ಟಿಗೆ ಸಮಾಧಾನಕರವಾದ ಶುಭ ಮುನ್ಸೂಚನೆ ಕಾಣಿಸುತ್ತದೆ. ಕೆಲವು ಅನುಪಯುಕ್ತ ಖರ್ಚುಗಳು ಹೆಚ್ಚಾಗುತ್ತದೆ. ನಿಮ್ಮ ನಿರ್ಧಾರಕ್ಕಿಂತಲೂ ಸಂಗಾತಿಯ ಹಿತ ನುಡಿಗಳನ್ನು ಕೇಳಿ ಅದರಂತೆ ನಡೆಯಿರಿ ಒಳ್ಳೆಯದಾಗುತ್ತದೆ.

ಅದೃಷ್ಟ ಸಂಖ್ಯೆ : 6

ಕುಂಭ ರಾಶಿ

ಶತ್ರುಗಳ ಮೇಲೆ ನಿಗಾ ಇಟ್ಟಿರಿ, ಸಮಯ ಸಾಧಕರು ನಿಮ್ಮ ವಿರುದ್ಧ ತಿರುಗಿ ಬೀಳಲು ಕಾಯುತ್ತಿರುತ್ತಾರೆ. ಕೆಲವು ಮೂಲಗಳಿಂದ ಹಲವು ದಿನಗಳ ಕನಸು ಈಡೇರಲಿದೆ. ನೀವು ಸುಖಾಸುಮ್ಮನೆ ಭರವಸೆಯನ್ನು ನೀಡಬೇಡಿ ಇದರಿಂದ ತೊಂದರೆಗೆ ಸಿಲುಕಬಹುದು.

ಆರ್ಥಿಕ ಚೈತನ್ಯದಿಂದ ನಿಮ್ಮಲ್ಲಿ ಆತ್ಮ ಸ್ಥೈರ್ಯ ಹಾಗೂ ಶಕ್ತಿ ಸಂವರ್ಧನೆ ಆಗಲಿದೆ. ಸಿಗುವ ಚಿಕ್ಕ ಅವಕಾಶವನ್ನು ಪಡೆದು ಯಶಸ್ಸಿನತ್ತ ದಾಪುಗಾಲು ಇಡುವುದು ಒಳಿತು. ಕೆಲಸದಲ್ಲಿ ಋಣಾತ್ಮಕ ಚಿಂತನೆಗಳು ಗಾಬರಿ ಪಡಿಸುತ್ತದೆ. ಇಷ್ಟ ದೇವತಾರಾಧನೆ ನಿಮ್ಮೆಲ್ಲಾ ಸಂಕಷ್ಟಗಳಿಗೆ ಪರಿಹಾರ.

ಅದೃಷ್ಟ ಸಂಖ್ಯೆ : 7

ಮೀನ ರಾಶಿ

ನಿಮ್ಮ ವಂಶದಲ್ಲಿ ಯಾರು ಮಾಡಿರದ ಸಾಧನೆಯನ್ನು ಮಾಡಿ ತೋರಿಸುವಿರಿ. ಇದರಿಂದ ನಿಮ್ಮ ಹೆಸರು ಉತ್ತುಂಗದಲ್ಲಿ ಇರುವುದು. ಸಮಾಜದಲ್ಲಿ ಒಳ್ಳೆಯ ಸ್ಥಾನ ಹಾಗೂ ಹಣಕಾಸಿನಲ್ಲಿ ಉತ್ತಮ ಸ್ಥಿತಿ ಇರುವುದು. ನೌಕರರಿಗೆ ಉದ್ಯೋಗದಲ್ಲಿ ಉನ್ನತಿ ಅಥವಾ ಯೋಗ್ಯ ಕೆಲಸವು ಹುಡುಕಿಕೊಂಡು ಬರಲಿವೆ.

ಹಳೆಯ ಋಣಸಂದಾಯ ಇಂದು ಪೂರ್ಣಗೊಳ್ಳಲಿದೆ. ಕುಟುಂಬದಲ್ಲಿನ ಜಂಜಾಟಗಳು ಇಂದು ಸಮಾಪ್ತಿ ಆಗಲಿದೆ. ಎಲ್ಲವೂ ಶುಭಕರವಾಗಿದೆ. ಇವೆಲ್ಲ ನಿಮ್ಮ ಶ್ರದ್ಧೆ, ಪ್ರಾಮಾಣಿಕತೆ, ಬುದ್ಧಿವಂತಿಕೆ ಇದರ ಮೇಲೆ ನಿಂತಿದೆ.

ಅದೃಷ್ಟ ಸಂಖ್ಯೆ : 5