ಮೇಷ ರಾಶಿ
ವ್ಯವಹಾರ ನಿಮಿತ್ತ ಕಾರ್ಯದಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಡಿ. ನಿಮ್ಮ ವಿಷಯದಲ್ಲಿ ಜನ ಮಾನಸದಲ್ಲಿರುವ ತಪ್ಪು ಕಲ್ಪನೆ ದೂರವಾಗುತ್ತದೆ. ವಿನೂತನ ಕಾರ್ಯ ಶೈಲಿಯಿಂದ ಮೆಚ್ಚುಗೆ ಹಾಗೂ ಹೊಸ ಉದ್ಯಮದಲ್ಲಿ ಆಸಕ್ತಿ ಬೆಳೆಯುವುದು. ನಿಮ್ಮ ಕೆಲಸದಲ್ಲಿ ಪ್ರಶಂಸೆ ಎಷ್ಟೋ ಅಷ್ಟೇ ಟೀಕೆಗಳು ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೆ ನಿಮ್ಮ ಪ್ರಯತ್ನ ಮುಂದುವರಿಸಿ.
ನೀವು ಪರೋಪಕಾರಿ ಆಗಿರುವಿರಿ ಆದರೆ ಮನೆಯ ವಿಷಯದಲ್ಲಿ ನಿರುತ್ಸಾಹವಿದೆ ಸರಿಪಡಿಸಿಕೊಳ್ಳುವುದು ಉತ್ತಮ. ಕೆಲವು ಆತ್ಮೀಯ ವ್ಯಕ್ತಿಗಳ ಒಡನಾಟ ಸಂಘ ಸಂಸ್ಥೆಗಳ ಸೇವೆಗಳಿಗೆ ದಾರಿಯಾಗಿ ಕಾಣಿಸುತ್ತದೆ.
ಅದೃಷ್ಟ ಸಂಖ್ಯೆ : 6
ವೃಷಭ ರಾಶಿ
ನಿಮ್ಮ ಪಾಲುದಾರರ ಕೆಲವು ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಉದ್ಯೋಗದಲ್ಲಿ ಆಗುತ್ತಿರುವ ಕಷ್ಟವನ್ನು ತಡೆಗಟ್ಟಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಅಪಾತ್ರರಿಗೆ ದಾನ ಮಾಡುವುದನ್ನು ಮೊದಲು ನಿಲ್ಲಿಸಿ.
ನಿಮ್ಮ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುವ ಮಂದಿ ಇರುವರು. ಪರಸ್ಥಳ ವಾಸ ನಿಮ್ಮನ್ನು ಒತ್ತಡ ಮತ್ತು ಮಾನಸಿಕ ಅಶಾಂತಿ ತರುತ್ತದೆ. ಕುಟುಂಬ ಸೌಖ್ಯದ ಕಡೆಗೆ ಗಮನ ನೀಡಿ. ಮಕ್ಕಳ ಕೆಲವು ಕುತೂಹಲಕಾರಿ ವಿಷಯಗಳಿಗೆ ಆದಷ್ಟು ಪ್ರೇರೇಪಣೆ ನೀಡಿ.
ಅದೃಷ್ಟ ಸಂಖ್ಯೆ : 4
ಮಿಥುನ ರಾಶಿ
ಬದುಕಿನಲ್ಲಿ ಆದರ್ಶವನ್ನು ರೂಢಿಸಿಕೊಳ್ಳಿ ಹಾಗೆಯೇ ಹಿರಿಯರ ಮಾತುಗಳನ್ನು ಪಾಲಿಸುವುದು ನಿಮ್ಮ ಮುಂದಿನ ಯೋಜನೆಗಳ ಪರಿಪಕ್ವತೆಗೆ ರಾಜ ಮಾರ್ಗವಾಗುತ್ತದೆ. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ತಲೆದೋರಬಹುದು, ಅದರ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಬುದ್ಧಿ ಮಾತುಗಳು ಕೇಳುವಷ್ಟು ವ್ಯವಧಾನ ಇಲ್ಲ ಜನಕ್ಕೆ ಸುಮ್ಮನಿದ್ದು ಬಿಡಿ.
ಹಣಕಾಸಿನ ಸ್ಥಿತಿಯಲ್ಲಿ ಬಾಕಿ ವಸೂಲಿಗಾಗಿ ಕೆಲವರ ಹಿಂದೆ ಬೀಳಬೇಕಾದ ಸಂದರ್ಭ ಬರುತ್ತದೆ. ಯಾವುದೇ ಅಳುಕಿಲ್ಲದೆ ಕೆಲಸ ಸಾಧಿಸಿಕೊಳ್ಳುವ ಪ್ರಯತ್ನ ಪಡೆಯಬಹುದು. ಮಕ್ಕಳ ಭವಿಷ್ಯಕ್ಕಾಗಿ ಕೆಲವು ವಸ್ತುಗಳ ಖರೀದಿ ಮಾಡಬೇಕಾಗುತ್ತದೆ.
ಅದೃಷ್ಟ ಸಂಖ್ಯೆ : 6
ಕರ್ಕಾಟಕ ರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಗಳಿಸಿದವರು ಆದಷ್ಟು ಮಾತಿನಲ್ಲಿ ಹಾಗೂ ನಿಮ್ಮ ವಿಚಾರಗಳಲ್ಲಿ ಜಾಗ್ರತೆ ವಹಿಸಿ ಅನವಶ್ಯಕ ಅಪಪ್ರಚಾರ ನಿಮ್ಮ ಬೆನ್ನ ಹಿಂದೆಯೇ ನಡೆಯುತ್ತಿದೆ. ಹಣಕಾಸಿನ ಪರಿಸ್ಥಿತಿ ಮಂದಗತಿಲ್ಲಿದೆ.
ಬಾಜಿಗಳಲ್ಲಿ, ಜೂಜುಗಳಲ್ಲಿ ಇಂದು ದೊಡ್ಡ ಮಟ್ಟದ ನಷ್ಟವಿದೆ. ಕೆಲಸದ ನಿಮಿತ್ತ ತಿರುಗಾಟ ಸಾಧ್ಯತೆ. ಕುಟುಂಬದಲ್ಲಿ ಸೂಕ್ಷ್ಮ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬರಬಹುದು. ನೀವು ವಿವಾಹಕ್ಕೆ ತಯಾರಿ ನಡೆಸಿದ್ದರೆ ನಿಮ್ಮ ಸಂಗಾತಿಯನ್ನು ಸೂಕ್ಷ್ಮವಾಗಿ ಗಮನಿಸಿ.
ಅದೃಷ್ಟ ಸಂಖ್ಯೆ : 7
ಸಿಂಹ ರಾಶಿ
ಜಟಿಲವಾದ ಸಮಸ್ಯೆ ಇಂದು ಅನಾಯಾಸವಾಗಿ ಪರಿಹಾರ ಕಾಣಲಿದೆ. ಮಡದಿಯ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸ. ನಿಮ್ಮ ಬಂಧುವರ್ಗದ ಜನಗಳೊಂದಿಗೆ ಶುಭ ಕಾರ್ಯ ನಡೆಸುವ ಸಲುವಾಗಿ ಮಾತುಕತೆ ನೀಡುವಿರಿ. ಕೆಲಸದ ಸ್ಥಳಗಳಲ್ಲಿ ನಿಮ್ಮ ಕೆಲಸಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.
ಕುಶಲಕರ್ಮಿಗಳಿಗೆ ಹಾಗೂ ಬಟ್ಟೆ ವ್ಯಾಪಾರಿಗಳಿಗೆ ಲಾಭದಾಯಕವಿದೆ. ರಾಜಕೀಯ ಸಾಮಾಜಿಕ ಸೇವೆಯಲ್ಲಿ ಹಿನ್ನಡೆ. ಕುಟುಂಬದ ಜೊತೆ ಸಮಾರಂಭಕ್ಕೆ ಪಾಲ್ಗೊಳ್ಳುವ ನಿರೀಕ್ಷೆ. ಚಿಂತಕರ ಜೊತೆ ಸಮಾಲೋಚನೆ ಮಾಡುವಿರಿ. ಇಂದು ನೀವು ನಿಮ್ಮ ಸಹೋದರ, ಸಹೋದರಿಯರ ಯೋಗಕ್ಷೇಮವನ್ನು ಕೇಳಲು ಮರೆಯದಿರಿ.
ಅದೃಷ್ಟ ಸಂಖ್ಯೆ : 5
ಕನ್ಯಾ ರಾಶಿ
ಮನೆಯಲ್ಲಿನ ಹಿರಿಯರ ಅಣತಿಯಂತೆ ಕ್ಷೇತ್ರ ಪ್ರವಾಸ ಕೈಗೊಳ್ಳಲು ತಯಾರಾಗುವಿರಿ. ಮಿತ್ರರ ಸಹಾಯದಿಂದ ಉದ್ಯಮದಲ್ಲಿ ಆರ್ಥಿಕ ಚೇತರಿಕೆ. ನಿಮ್ಮ ಪ್ರಭಾವವನ್ನು ಬಳಸಿ ಕೆಲವು ಕ್ಷೇತ್ರಗಳಲ್ಲಿ ಗೆಲ್ಲುವಿರಿ.
ಮನೆಯಲ್ಲಿನ ಹಠಮಾರಿತನದಿಂದ ಸಂಸಾರದಲ್ಲಿ ಭಿನ್ನಾಭಿಪ್ರಾಯ. ನಿಮ್ಮ ವರ್ತನೆಯನ್ನು .ಹತೋಟಿಯಲ್ಲಿಡಿ. ಭೋಗದ ವಸ್ತುಗಳ ಖರೀದಿಯಲ್ಲಿ ಮುಂಜಾಗ್ರತೆ ವಹಿಸಿ.
ಅದೃಷ್ಟ ಸಂಖ್ಯೆ : 3
ತುಲಾ ರಾಶಿ
ದುಡುಕಿನ ನಿರ್ಧಾರ ಗಳು ಕಷ್ಟ ತರಿಸುತ್ತದೆ. ಗೃಹ ನಿರ್ಮಾಣ ಕಾರ್ಯವು ಯಶಸ್ವಿಯಾಗಿ ನಡೆಯಲಿದೆ. ಸರ್ಕಾರಿ ಕಚೇರಿಗಳಲ್ಲಿ ಗೆಲವು. ಆತ್ಮೀಯ ಜನರು ನಿಮ್ಮನ್ನು ಅಭಿಮಾನದಿಂದ ಕಾಣುವರು.
ನಿಮ್ಮ ಕೆಲವು ಸಲಹೆಗಳು ಉಪಯುಕ್ತತೆ ಇಂದ ಕೂಡಿರುತ್ತದೆ. ಅಲ್ಪಾವಧಿ ಹೂಡಿಕೆಗಳು ಲಾಭಾಂಶ ತರಿಸುತ್ತದೆ. ಲೇವಾದೇವಿ ವ್ಯವಹಾರ ನಿಲ್ಲಿಸುವುದು ಸೂಕ್ತ. ಬೇಡಿಕೆ ವಸ್ತುಗಳನ್ನು ಕೊಂಡುಕೊಳ್ಳುವ ಕೆಲಸಕ್ಕೆ ಕೈ ಹಾಕುವುದು. ಕ್ರೀಡಾ ಚಟುವಟಿಕೆ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಿದ್ದರಾಗಿ. ತಾಂತ್ರಿಕ ವರ್ಗದವರಿಗೆ ವಿಶೇಷ ಲಾಭದಾಯಕ ದಿನವಾಗಿದೆ.
ಅದೃಷ್ಟ ಸಂಖ್ಯೆ : 3
ವೃಶ್ಚಿಕ ರಾಶಿ
ಮನಸ್ಸಿನಲ್ಲಿ ಕೊರಗುತ್ತಿರುವ ಚಿಂತೆಯನ್ನು ಬದಿಗೊತ್ತಿ ಸಮಾಜದಲ್ಲಿ ಸಕ್ರಿಯರಾಗುವ ಸಂದರ್ಭ ಬಂದಿದೆ. ನಿಮ್ಮಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಪುಟಿದೇಳಿ. ಉದ್ಯೋಗದಲ್ಲಿ ನಯವಂಚಕರ ಜಾಲದಲ್ಲಿ ಬೀಳುವ ಸಂಭವ ಎಚ್ಚರ ವಹಿಸಿ.
ಯಾವುದೇ ವ್ಯವಹಾರದಲ್ಲಿ ಜಾಮೀನನ್ನು ನೀಡಬೇಡಿ. ಮಕ್ಕಳ ಶಿಕ್ಷಣದ ಬಗ್ಗೆ ಕೆಲವು ರೂಪುರೇಷೆಗಳನ್ನು ಸಿದ್ಧಪಡಿಸಿ. ಕಾರ್ಮಿಕ ವರ್ಗದವರು ಯಂತ್ರೋಪಕರಣಗಳಲ್ಲಿ ಜಾಗ್ರತೆ ಅತ್ಯವಶ್ಯಕ.
ಅದೃಷ್ಟ ಸಂಖ್ಯೆ : 8
ಧನಸ್ಸು ರಾಶಿ
ಐಷಾರಾಮಿ ವಸ್ತುಗಳ ಖರೀದಿಯನ್ನು ಸದ್ಯಕ್ಕೆ ನಿಲ್ಲಿಸಿ. ಹಣಕಾಸಿನಲ್ಲಿ ಸ್ವಲ್ಪ ಉಳಿತಾಯವನ್ನು ಮಾಡುವುದು ಮುಂದಿನ ಪ್ರಗತಿಗೆ ದಾರಿಯಾಗುತ್ತದೆ. ಮಕ್ಕಳ ಕೆಲವು ಅನುಚಿತ ವರ್ತನೆಯಿಂದ ಬೇಸರವಾಗಬಹುದು. ನಿಮ್ಮಲ್ಲಿ ಆವೇಶ-ಕೋಪವನ್ನು ಆದಷ್ಟು ನಿಯಂತ್ರಿಸಿಕೊಳ್ಳಿ.
ಕೆಲವು ಇಲ್ಲಸಲ್ಲದ ಮಾತುಗಳು ಅಥವಾ ದೊಡ್ಡಸ್ತಿಕೆ ಮಾತುಗಳನ್ನು ಆಡದಿರಿ ಇದರಿಂದ ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗಬಹುದು. ಸಂಬಂಧಿಕರ ಲೇವಾದೇವಿ ವ್ಯವಹಾರದಲ್ಲಿ ತಲೆ ಹಾಕಬೇಡಿ. ಉದ್ಯೋಗದಲ್ಲಿ ಸನ್ಮಾನ ಪ್ರತಿಷ್ಠೆ ಹೆಚ್ಚಲಿದೆ. ಕೆಲವು ಗಣ್ಯರ ಒಡನಾಟದಿಂದ ದೊಡ್ಡ ಮಟ್ಟದ ಯೋಜನೆಗೆ ತಯಾರಾಗುವಿರಿ.
ಅದೃಷ್ಟ ಸಂಖ್ಯೆ : 1
ಮಕರ ರಾಶಿ
ಸಂಗಾತಿಯ ನೆರವಿನಿಂದ ಉದ್ಯೋಗದಲ್ಲಿ ಏಳಿಗೆ. ಭವಿಷ್ಯದ ಹಿತದೃಷ್ಟಿಯಿಂದ ಉಳಿತಾಯ ಮತ್ತು ಹೂಡಿಕೆಗಳು ಲಾಭಕರವಾಗಿರುತ್ತದೆ.
ನಿಮ್ಮ ಇಚ್ಛೆಯಂತೆ ಕೆಲಸದಲ್ಲಿ ಗೆಲುವು ಸಂಪಾದನೆ. ಅವಕಾಶಗಳು ಬಂದಾಗ ಕಣ್ಮುಚ್ಚಿ ಕುಳಿತುಕೊಳ್ಳಬಾರದು. ಮಕ್ಕಳ ಸಾಂಗತ್ಯದಿಂದ ನವಚೈತನ್ಯ.
ಅದೃಷ್ಟ ಸಂಖ್ಯೆ : 3
ಕುಂಭ ರಾಶಿ
ಸಂಗಾತಿಯ ಪ್ರೀತಿಯ ಮಾತಿನಿಂದ ಸಂಕಷ್ಟಗಳು ದೂರವಾಗುತ್ತದೆ. ಇಂದು ನೀವು ಅನೇಕ ವಿಷಯಗಳಲ್ಲಿ ಆಸಕ್ತಿ ತೋರುವಿರಿ. ಕಷ್ಟದ ಕೆಲಸ ಕೂಡ ಒಳ್ಳೆಯ ಮಾರ್ಗದರ್ಶನದಿಂದ ಆರಾಮದಾಯಕವಾಗಿ ನಿರ್ವಹಿಸುವಿರಿ.
ಪ್ರೇಮಿಗಳು ನಾಟಕೀಯ ಪ್ರಸಂಗಗಳ ಅನುಭವ ಪಡೆಯಲಿದ್ದೀರಿ. ಕೆಲವು ಗುಪ್ತ ವಿಷಯಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಚ್ಚರ. ವ್ಯವಸ್ಥಿತ ಪಿತೂರಿಗಳು ಉದ್ಯೋಗ ಸ್ಥಳದಲ್ಲಿ ನಡೆಯಲಿದೆ. ಶ್ರದ್ಧೆ ಮತ್ತು ಪ್ರಾಮಾಣಿಕತೆ ನಿಮ್ಮ ಗೆಲುವಿಗೆ ಸಹಕಾರ ನೀಡಲಿದೆ.
ಅದೃಷ್ಟ ಸಂಖ್ಯೆ : 8
ಮೀನ ರಾಶಿ
ಅಪರಿಚಿತ ವ್ಯಕ್ತಿಗಳ ಬಗ್ಗೆ ಜಾಗೃತೆಯಿರಲಿ. ಕೆಲವು ಘಟನೆಗಳು ಹಿಂದೆ ನಡೆದಂತೆ ಭಾಸವಾಗುತ್ತದೆ. ಭಾವನಾಜೀವಿ ಆದ ನಿಮಗೆ ನಿಮ್ಮ ಭಾವನೆಯ ಜೊತೆ ಆಟವಾಡುವ ಜನರಿದ್ದಾರೆ ಆದಷ್ಟು ಅಂತಹ ಜನಗಳಿಂದ ಅಂತರ ಕಾಯ್ದುಕೊಳ್ಳಿ.
ವಿಜ್ಞಾನಕ್ಕೆ ಸಂಬಂಧಪಟ್ಟ ಜ್ಞಾನ ವೃದ್ಧಿ ಆಗಲಿದೆ. ಮಕ್ಕಳು ಕೆಲಸದಲ್ಲಿ ನಿಪುಣರು ಆಗುವ ಸೂಚನೆ. ಮಧ್ಯವರ್ತಿಗಳಿಗೆ ಲಾಭಕರ ದಿನ. ನೀವು ಇಂದು ಅಧ್ಯಾತ್ಮಿಕದ ಕಡೆ ಒಲವು ತೋರಲಿದ್ದಿರಿ.
ಅದೃಷ್ಟ ಸಂಖ್ಯೆ : 3