ಮೇಷ ರಾಶಿ

ನಿಮ್ಮ ಕೆಲಸದಲ್ಲಿ ನಿಮಗೆ ನಂಬಿಕೆ ಇರಲಿ. ಯಾವುದೇ ಕಾರಣಕ್ಕೂ ನಿಮ್ಮ ಹುಮ್ಮಸ್ಸು ಕಳೆದುಕೊಳ್ಳಬೇಡಿ. ನಿಮ್ಮ ಯೋಜನೆಗಳಿಗೆ ಜನಗಳು ವಿರುದ್ಧವಾದುದನ್ನು ಹೇಳುತ್ತಾರೆ ಆದರೆ ನೀವು ಹೋಗುತ್ತಿರುವ ದಾರಿ ಸರಿಯಾಗಿದೆ ಖಂಡಿತ ಧನಲಾಭವಿದೆ ಚಿಂತಿಸದಿರಿ.

ವಿಚಾರಗಳಲ್ಲಿ ನಿಮ್ಮ ನಿಲುವು ಒಳ್ಳೆಯದೇ ಇರುತ್ತದೆ, ಆದರೆ ನಿಮ್ಮ ನಿಲುವಿನಿಂದ ಪರರಿಗೆ ಮನಸ್ತಾಪ ಆಗಬಹುದು, ಯೋಚಿಸದಿರಿ ಮುಂದೆ ಎಲ್ಲವೂ ಸರಿ ಹೋಗುವುದು.

ಬೇರೆಯಾಗಿರುವ ದಂಪತಿಗಳು ಮತ್ತೆ ಒಂದಾಗಿ ಬಾಳುವ ಶುಭ ದಿನ. ಮಕ್ಕಳಿಗಾಗಿ ಹಣಕಾಸಿನಲ್ಲಿ ಖರ್ಚು ಸಾಧ್ಯತೆ. ನಿಮ್ಮ ದಾರಿ ತಪ್ಪಿಸಲು ಕೆಲವು ಜನಗಳು ಕುತಂತ್ರ ಮಾತನ್ನು ಹೇಳಿ ಕೊಡುತ್ತಾರೆ ಅದನ್ನು ನಿರ್ಲಕ್ಷಿಸಿ. ಸುಖ ಸಂಸಾರಕ್ಕಾಗಿ ಏನೆಲ್ಲಾ ಸಾಧ್ಯವೋ ಅದನ್ನು ಪ್ರಯತ್ನಿಸಿ. ಧನಾತ್ಮಕ ಚಿಂತೆ ಇರಲಿ.

ಅದೃಷ್ಟ ಸಂಖ್ಯೆ : 5

ವೃಷಭ ರಾಶಿ

ಉದ್ಯೋಗದಲ್ಲಿ ಹಿತೈಷಿಗಳ ಸಹಕಾರ. ಕೆಲಸದ ನಿಮಿತ್ತ ಪ್ರವಾಸದ ಒತ್ತಡ. ಸಂಗಾತಿಯಲ್ಲಿ ಕೆಲವು ವಿಚಾರಗಳ ವಿನಿಮಯ ಮಾಡಿಕೊಳ್ಳುತ್ತೀರಿ. ಸಂಗಾತಿಯ ಮಾತನ್ನು ಕೇಳುವುದರಿಂದ ಕಷ್ಟದಾಯಕ ಕೆಲಸವು ಕೂಡ ಸುಲಭವಾಗುತ್ತದೆ. ನಿಮ್ಮಲ್ಲಿನ ಆಯಾಸ ಹಾಗೂ ಆರೋಗ್ಯ ಸಮಸ್ಯೆಯಿಂದ ವಿರಾಮವನ್ನು ಬಯಸುತ್ತೀರಿ.

ಆರ್ಥಿಕವಾಗಿ ಲಾಭವನ್ನು ಗಳಿಸುವ ನಿರೀಕ್ಷೆ. ನಿಮ್ಮ ಆಪ್ತ ವರ್ಗದವರು ನಿಮಗೆ ಸಹಾಯ ನೀಡುವರೆಂದು ನಿರೀಕ್ಷಣೆ ಇಡಬೇಡಿ. ದಾಖಲೆಗಳ ಬಗ್ಗೆ ಆಗಲಿ, ತೆರಿಗೆ ಅಥವಾ ಜೀವ ವಿಮೆ ಬಗ್ಗೆ ಅಗತ್ಯ ಗಮನ ನೀಡಿ. ಪುಸ್ತಕಗಳನ್ನು ಓದಿ ಚೈತನ್ಯದಿಂದ ಇರುವಿರಿ. ಇಂದು ಅನಿರೀಕ್ಷಿತವಾಗಿ ಕೆಲವು ಸತ್ಯಗಳು ಗೊತ್ತಾಗಲಿದೆ ಅದು ನಿಮ್ಮನ್ನು ದಿಗ್ಭ್ರಮೆಗೊಳಿಸಲಿದೆ.

ಅದೃಷ್ಟ ಸಂಖ್ಯೆ : 3

ಮಿಥುನ ರಾಶಿ

ನಿಮ್ಮ ಮನಸ್ಸು ಕೆಲವು ವಿಭಿನ್ನ ವಿಚಾರಗಳಲ್ಲಿ ಆಕರ್ಷಣೆ ಬರಬಹುದು. ಆರ್ಥಿಕ ವ್ಯವಹಾರದಲ್ಲಿ ಸತ್ಯಾಸತ್ಯತೆ ಪರಾಮರ್ಶಿಸಿ. ನಿಮ್ಮ ಪ್ರಾಮಾಣಿಕತೆಗೆ ಫಲ ದೊರಕುತ್ತದೆ.

ವ್ಯವಹಾರದಲ್ಲಿ ದುಡುಕಿನ ನಿರ್ಧಾರ ಸಲ್ಲದು. ಪ್ರೇಮಿಗಳು ವಸ್ತುಗಳ ಖರೀದಿಗೆ ಬೇಡಿಕೆ ಇಡಬಹುದು. ಸ್ನೇಹಿತರ ಸಂಪಾದನೆಯಿಂದ ಹಲವು ಮೋಜಿನ ಚಟುವಟಿಕೆಗಳು ಪಾಲ್ಗೊಳ್ಳುವ ನಿರೀಕ್ಷೆ.

ಅದರ ಸಂಖ್ಯೆ : 4

ಕರ್ಕಾಟಕ ರಾಶಿ

ವಿಸ್ಮಯ ಸಂಗತಿಗಳು ಹಾಗೂ ರಹಸ್ಯಕರ ಸಂಗತಿಗಳಲ್ಲಿ ಹೆಚ್ಚು ಆಸಕ್ತಿ ವಹಿಸುವರು. ಪತ್ನಿಯ ತವರು ಮನೆಯಿಂದ ನಿರೀಕ್ಷೆಗಳ ಮಹಾಪೂರ. ಆರ್ಥಿಕತೆಯಲ್ಲಿ ಸಬಲತೆ ಕಾಣುವಿರಿ.

RELATED ARTICLES  ನಾಳೆ ಉತ್ತರಕನ್ನಡದಲ್ಲಿ ಅತೀ ಹೆಚ್ಚು ಕೊರೋನಾ ಲಸಿಕೆ‌ ಲಭ್ಯ

ವ್ಯವಹಾರದಲ್ಲಿ ಅನಿರೀಕ್ಷಿತವಾಗಿ ದೊಡ್ಡ ಮಟ್ಟದ ಆರ್ಥಿಕ ಯೋಜನೆಗೆ ಕೈ ಹಾಕುವ ಸಾಧ್ಯತೆ. ನಿರೀಕ್ಷೆಗೆ ತಕ್ಕ ಹಾಗೆ ಸಾಲ ವಸೂಲಾತಿ ಮಾಡುವಿರಿ.

ಅದೃಷ್ಟ ಸಂಖ್ಯೆ : 2

ಸಿಂಹ ರಾಶಿ

ನೀವು ನಿಜವಾಗಿಯೂ ಆಕರ್ಷಣೆಯ ವ್ಯಕ್ತಿ. ನಿಮ್ಮನ್ನು ಕೆಲವು ಜನರು ಹೊಗಳಿ ಅಟ್ಟಕ್ಕೇರಿಸುವ ಸಾಧ್ಯತೆ ಇದೆ. ನಿಮ್ಮ ಆದಾಯಕ್ಕಿಂತ ವೆಚ್ಚವು ಹೆಚ್ಚಾಗುವ ಸಾಧ್ಯತೆ.

ಉದ್ಯೋಗ ಸ್ಥಳದಲ್ಲಿ ವ್ಯವಸ್ಥಿತ ಪಿತೂರಿಗೆ ಬಲಿಯಾಗಬೇಡಿ. ಆದಷ್ಟು ಎಚ್ಚರಿಕೆಯಿಂದ ಇರಿ. ಪತ್ನಿಯಿಂದ ನಿಮ್ಮ ಯೋಜನೆಗೆ ಅಸಹಕಾರ. ಆದಷ್ಟು ಸಂಸಾರದಲ್ಲಿ ಸಾಮರಸ್ಯದಿಂದ ಕೂಡಿರಲು ಪ್ರಯತ್ನಿಸಿ.

ಅದೃಷ್ಟ ಸಂಖ್ಯೆ : 2

ಕನ್ಯಾ ರಾಶಿ

ಇಂದು ನಿಮ್ಮ ಜೀವನದಲ್ಲಿ ಧಾರ್ಮಿಕ ಕಾರ್ಯ ವಿಧಿ-ವಿಧಾನಕ್ಕೆ ತೊಡಗಿಸಿಕೊಳ್ಳುವಿರಿ. ಭಕ್ತಿಯು ನಿಮ್ಮನ್ನು ಸಂತೋಷದಿಂದಿರಲು ಸಹಕರಿಸುವುದು. ಸಂಗಾತಿಯ ಪ್ರೇಮ-ಪ್ರೀತಿಗೆ ಮನ ಸೋಲುತ್ತದೆ.

ಮನೆಯಲ್ಲಿನ ಹಿರಿಯರ ಬೇಕು-ಬೇಡಗಳನ್ನು ಪೂರೈಸಲು ಶ್ರಮಿಸಬೇಕಾಗಿದೆ. ನಿಮ್ಮ ಕುಟುಂಬ ವರ್ಗದಲ್ಲಿ ಉಪಯೋಗವಾಗುವಂತಹ ವಸ್ತುಗಳ ಖರೀದಿ ಸಾಧ್ಯತೆ.

ಅದೃಷ್ಟ ಸಂಖ್ಯೆ : 9

ತುಲಾ ರಾಶಿ

ನಿಮ್ಮ ಉದ್ದೇಶಿತ ಯೋಜನೆಯ ನಿಮಿತ್ತ ಸಾಲ ಕೇಳುವ ಪ್ರಸಂಗ ಬರಬಹುದು. ನಿಮ್ಮನ್ನು ನೀವು ಬಲಿಷ್ಠವಾಗಿಸಿಕೊಳ್ಳಲು ಹಲವಾರು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ. ಕ್ರೀಡಾಪಟುಗಳಿಗೆ ಇಂದು ಉತ್ತಮವಾದ ದಿನ.

ಕುಟುಂಬದ ವೈಯಕ್ತಿಕ ಸಮಸ್ಯೆಗೆ ನಿಮ್ಮ ವಿವೇಚನೆಯಿಂದ ಪರಿಹಾರ ದೊರಕಿಸಿಕೊಡಲು ಶ್ರಮಿಸುವಿರಿ. ಹಳೆಯ ಸಾಲಗಳ ವಸೂಲಾತಿಗೆ ಇಂದು ಹೋಗದಿರಿ ಇದರಿಂದ ನಿಮಗೆ ತೊಂದರೆ ಖಚಿತ.

ಅದೃಷ್ಟ ಸಂಖ್ಯೆ : 5

ವೃಶ್ಚಿಕ ರಾಶಿ

ನಿಮ್ಮ ನಡವಳಿಕೆಯು ಸಮಾಜಕ್ಕೆ ಚರ್ಚಾಸ್ಪದವಾಗಿದೆ ಕಾಣಿಸುತ್ತದೆ. ಮಹತ್ವದ ವಿಚಾರಗಳಲ್ಲಿ ಆಲಕ್ಷತನ ಅಥವಾ ಉಪೇಕ್ಷೆ ಮಾಡುವುದು ನಿಲ್ಲಿಸಬೇಕಾಗಿದೆ. ಜಗತ್ತನ್ನು ನಿಮ್ಮ ನೇರಕ್ಕೆ ನೋಡುವುದು ಬಹಳ ಸುಲಭ ಅದರ ಅಂತರಾಳವನ್ನು ತಿಳಿಯುವುದು ಬಲು ಕಷ್ಟ ಎಂಬುದನ್ನು ನೆನಪಿಡಿ.

ವಿಷಯಗಳ ಸಂಪೂರ್ಣ ಮಟ್ಟಿಗೆ ತಿಳಿದುಕೊಂಡು ಚರ್ಚೆಯಲ್ಲಿ ಪಾಲ್ಗೊಳ್ಳಿ. ಕೆಲಸ ಹಾಗೂ ಗೃಹ ಸ್ಥಳಗಳಲ್ಲಿ ಆದಷ್ಟು ಗಂಭೀರವಾಗಿ ವರ್ತಿಸಿ.

RELATED ARTICLES  ಕುಮಟಾದಲ್ಲಿ ಯಸ್ವಿಯಾಗಿ ನಡೆದ ಗೋ ಸಂಜೀವಿನಿ ಜೋಳಿಗೆ ಅಭಿಯಾನ

ಅದೃಷ್ಟ ಸಂಖ್ಯೆ : 5

ಧನಸ್ಸು ರಾಶಿ

ಇಂದು ಲೇವಾದೇವಿಗಾರರರಿಗೆ ಲಾಭದಾಯಕ ದಿನ. ಗೃಹ ಸಾಲ ಅಥವಾ ಬೇರೆ ರೂಪದ ಸಾಲಗಳನ್ನು ಪಡೆಯುವ ಯೋಜನೆ ಪೂರ್ಣಗೊಳ್ಳುವ ಸಂಭವ. ಮನೆ ಮಾರಾಟ ಮಾಡುವವರಿಗೆ ಲಾಭದಾಯಕ ದಿನ.

ಹಳೆಯ ವಸ್ತುಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಸೌಭಾಗ್ಯ. ನಿಮ್ಮ ಪತ್ನಿಯಲ್ಲಿ ವಿಶೇಷವಾದದ್ದನ್ನು ಕಾಣುತ್ತೀರಿ.

ಅದೃಷ್ಟ ಸಂಖ್ಯೆ : 9

ಮಕರ ರಾಶಿ

ಇಷ್ಟು ದಿನದಿಂದಲೂ ಬಲು ಕಷ್ಟ ಎನ್ನುವ ಕೆಲಸ ಇಂದು ನೀವು ಮಾಡಿ ತೋರಿಸುವಿರಿ. ಆಪ್ತ ಬಂಧು-ಬಳಗದಿಂದ ಮನಸ್ತಾಪಗಳು ಕಾಣಲಿದೆ. ಕೋರ್ಟು ಕಚೇರಿ ವ್ಯವಹಾರದಲ್ಲಿ ನಿಮ್ಮಂತೆ ನಿಶ್ಚಿತ ಗೆಲುವು.

ಪ್ರಯೋಜನವಿಲ್ಲದ ಕೆಲಸದಲ್ಲಿ ಹೆಚ್ಚು ಹೊತ್ತು ಸಮಯ ಕಳೆಯದೇ ಇರುವುದು ಸೂಕ್ತ. ನಿಮ್ಮ ಪತ್ನಿಯ ಆರೋಗ್ಯದ ಮೇಲೆ ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ಹೊಸದಾಗಿ ಜ್ಞಾನಾರ್ಜನೆ ತರಬೇತಿಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ : 8

ಕುಂಭ ರಾಶಿ

ಇಂದು ಹಿಡಿದ ಕೆಲಸ ಪೂರ್ಣ ಮಾಡಿದ ತೃಪ್ತಿ ನಿಮ್ಮಲ್ಲಿ ಇದೆ. ಬಯಸದೆ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದು ವ್ಯವಹಾರಸ್ಥರ ಲಕ್ಷಣ. ಬೇಡವಾದ ಮಾತುಗಳಲ್ಲಿ ಕಾಲಹರಣ ಮಾಡಬೇಡಿ. ಪತ್ನಿಯ ಮನೆ ಇಂದ ನಿರೀಕ್ಷಿತ ಲಾಭ ನಿರೀಕ್ಷೆ.

ಬಹುದಿನದ ಕನಸಿನಂತೆ ನವ ಉದ್ಯಮ ಪ್ರಾರಂಭ ಮಾಡಲು ಇಂದು ಶುಭ ದಿನವಾಗಿದೆ. ಹಿರಿಯರ ಮಾರ್ಗದರ್ಶನದಿಂದ ಹಣಕಾಸಿನ ನೆರವು ಸಿಗಲಿದೆ. ಉದ್ಯೋಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದರಿಂದ ಆರ್ಥಿಕತೆಯಲ್ಲಿ ಲಾಭದಾಯಕ ಸ್ಥಿತಿ ಇಂದು ನಿಮ್ಮದಾಗಲಿದೆ.

ಅದೃಷ್ಟ ಸಂಖ್ಯೆ : 3

ಮೀನ ರಾಶಿ

ಪ್ರಥಮಾರ್ಧದಲ್ಲಿ ಉತ್ಸಾಹ ಹೆಚ್ಚಾಗಿರಬಹುದು, ಆದರೆ ನಂತರ ಕ್ರಮೇಣವಾಗಿ ನಿರುತ್ಸಾಹದ ಕಾರ್ಮೋಡ ಆವರಿಸುತ್ತದೆ. ಇಲ್ಲ ಸಲ್ಲದ ವಿಚಾರಗಳಲ್ಲಿ ಮಗ್ನರಾಗಿ ಚಿಂತೆಯನ್ನು ಪಡುವುದು ಮೊದಲು ನಿಲ್ಲಿಸಿ.

ಸಂಗಾತಿಯಲ್ಲಿನ ಅಥವಾ ಸ್ನೇಹಿತರಲ್ಲಿನ ಭಿನ್ನಾಭಿಪ್ರಾಯವನ್ನು ಕೆಲಸದ ಜಾಗದಲ್ಲಿ ತೋರಿಸದಿರಿ. ನಿಮ್ಮನ್ನು ನೀವು ಸಂತುಷ್ಟಗೊಳಿಸಲು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಕುಲದೇವತಾ ಆರಾಧನೆಯಿಂದ ಸರ್ವ ಸಂಕಷ್ಟಗಳು ದೂರವಾಗುತ್ತದೆ.

ಅದೃಷ್ಟ ಸಂಖ್ಯೆ : 1