ಉಪ್ಪಳ: ಕೇರಳ ಭಾರತ್ ಸ್ಕೌಟ್ ಮತ್ತು ಗೈಡ್ ನ ಮಂಜೇಶ್ವರ ಸ್ಥಳೀಯ ಸಂಸ್ಥೆಯ ಮಹಾಸಭೆಯು ಇತ್ತೀಚೆಗೆ ಉಪ್ಪಳ ದ ಶಿಕ್ಷಣಾಧಿಕಾರಿಗಳ ಕಛೇರಿ ಯಲ್ಲಿ ಜರುಗಿತು. ಈ ಮಹಾಸಭೆಯ ಅಧ್ಯಕ್ಷ ಸ್ಥಾನವನ್ನು ಮಂಜೇಶ್ವರ ಉಪ ಶಿಕ್ಷಣಾಧಿಕಾರಿಯು, ಸ್ಥಳೀಯ ಸಂಸ್ಥೆಯ ಚೇಯರ್ಮೇನ್ ಆದ ಶ್ರೀ ದಿನೇಶ್. ವಿ ವಹಿಸಿದ್ದರು . ಕೇರಳ ಭಾರತ್ ಸ್ಕೌಟ್ ಮತ್ತು ಗೈಡ್ ನ ಜಿಲ್ಲಾ ಆಯುಕ್ತರಾದ ಶ್ರೀ ಗುರುಮೂರ್ತಿ. ಜಿಲ್ಲಾ ಉಪ ಆಯುಕ್ತ ಶ್ರೀ ಚೇವಾರು ವಿನೋದ್ , ಗೈಡ್ ನ ಜಿಲ್ಲಾ ಉಪ ಆಯುಕ್ತೆ ಶ್ರೀ ಮತಿ ಶ್ರೀಕುಮಾರಿ ಟೀಚರ್ ,ಜಿಲ್ಲಾ ತರಬೇತಿ ಆಯುಕ್ತೆ ಶ್ರೀ ಮತಿ ಆಶಾಲತ ,ಬುಲ್ ಬುಲ್ ಘಟಕದ ಶ್ರೀ ಮತಿ ಜ್ಯೋತಿಲಕ್ಷ್ಮಿ, ಹಾಗೂ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರು ಆದ ಶ್ರೀ ಟಿ.ಡಿ ಸದಾಶಿವ ರಾವ್, ಕೋಶಾದಿಕಾರಿ ಶ್ರೀ ಆದಿನಾರಾಯಣ ಭಟ್ ಉಪಸ್ತಿತರಿದ್ದರು.
ಪ್ರಸಕ್ತ ವರ್ಷದ ವರದಿಯನ್ನು ಕಾರ್ಯದರ್ಶಿ ಶ್ರೀ ಶಿವಪ್ರಸಾದ್ ಚೆರುಗೋಳಿ ಮಂಡಿಸಿದರು.
ಶ್ರೀ ಆದಿನಾರಾಯಣ ಭಟ್ ಲೆಕ್ಕ ಪತ್ರ ಮಂಡನೆ ಮಾಡಿದರು .
ಮುಂದಿನ ದಿನಗಳಲ್ಲಿ ನಡೆಸಲು ಉದ್ದೇಶಿಸಿ ರುವ ಕಾರ್ಯ ಚಟುವಟಿಕೆಗಳಾದ ಪಟಾಲಂ ನಾಯಕರ ಶಿಬಿರ, ನಾಯಕರ ಮೀಟ್, ಕಬ್ ಬುಲ್ ಬುಲ್ ಉತ್ಸವ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಮಂಜೇಶ್ವರ ಸ್ಥಳೀಯ ಸಂಸ್ಥೆಯಲ್ಲಿ ಅತೀ ಹೆಚ್ಚಿನ ಯೂನಿಟ್ ಪ್ರಾರಂಭಿಸಿದ ಹೆಗ್ಗಳಿಕೆ ಪಾತ್ರವಾಗಿತ್ತು.
ಆನೆಕಲ್ಲು ಶಾಲೆಯ ಸ್ಕೌಟ್ ಅಧ್ಯಾಪಕ ಶ್ರೀ ನಾರಾಯಣ ರಾಜ್ ಸ್ವಾಗತಿಸಿ ಎಸ್ ಎ ಟಿ ಮಂಜೇಶ್ವರ ಶಾಲೆಯ ಗೈಡ್ ಅಧ್ಯಾಪಿಕೆ ಶ್ರೀ ಮತಿ ಸುಕನ್ಯ ಕೆ.ಟಿ ಧನ್ಯವಾದಗಳನ್ನು ಹೇಳಿ ದರು.