ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕಾರವಾರಕ್ಕೆ 2019-20ನೇ ಸಾಲಿಗಾಗಿ ಪ್ರವೇಶ ಬಯಸುವ ಪಿ.ಯು.ಸಿ, ಡಿಗ್ರಿ, ಡಿಪ್ಲೋಮಾ, ಐ.ಟಿ.ಐ ಇತ್ಯಾದಿ ಕೋರ್ಸುಗಳಲ್ಲಿ ಓದುತ್ತಿರುವ ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿ, ತೆಲಿರಾಮಜಿ ರಸ್ತೆ, ಕಾರವಾರ ಹಾಗೂ ತಾಲ್ಲೂಕಾ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಚೇರಿ, ಕಾರವಾರ ಇವರಿಂದ ಉಚಿತವಾಗಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜು. 31 ರ ಒಳಗಾಗಿ ಸಂಬಂಧಪಟ್ಟ ತಾಲೂಕಿನ ವಿಸ್ತರಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

RELATED ARTICLES  ದೇಶಾದ್ಯಂತ ಡಿ: 21ರಿಂದ 25ತನಕ ಐದು ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ.

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಬಾಂಡಿಶಿಟ್ಟಾ, ಕಾರವಾರ ಇಲ್ಲಿ ಒಟ್ಟು 50 ವಿದ್ಯಾರ್ಥಿಗಳ ಸಂಖ್ಯೆಯ ನಿಲಯವಾಗಿದ್ದು 37 ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಗೂ 13 ಇತರೆ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುವುದು.ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 2018-19 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಅಂಕಪಟ್ಟಿಯ ದೃಢೀಕರಣ ಮಾಡಿದ ನಕಲು ಪ್ರತಿಯನ್ನು ಅರ್ಜಿಯ ಜೊತೆಗೆ ಲಗ್ತು ಇಡಬೇಕು. 2018-19 ನೇ ಸಾಲಿನಲ್ಲಿ ಇಲಾಖಾ ವಸತಿ ನಿಲಯದಲ್ಲಿದ್ದು, ಉತ್ತಮ ಹಾಜರಾತಿ ಮತ್ತು ನಡತೆ ಉಳ್ಳವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು.

RELATED ARTICLES  ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ: ವಾಕ್ ಇನ್ ಇಂಟರ್ವ್ಯೂ

ಪ್ರವರ್ಗ -1 ಕ್ಕೆ ಸೇರಿದವರು ನಮೂನೆ “ಇ” ದಲ್ಲಿ ತಹಸೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.(ಆದಾಯದ ಮಿತಿ ರೂ.1.00 ಲಕ್ಷ.)ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ವಿದ್ಯಾರ್ಥಿಗಳು ನಮೂನೆ ಎಫ್ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು (ಆದಾಯ ಮಿತಿ ರೂ.44500) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ತಹಶೀಲ್ದಾರರಿಂದ ಪಡೆದ ಜಾತಿ ಪ್ರಮಾಣ ಪತ್ರವನ್ನು ಲಗ್ತ ಲಗತಿಸಬೇಕು. (ಆದಾಯ ಮಿತಿ ಪ.ಜಾತಿ ಹಾಗೂ ಪ.ಪಂ ರೂ.2.00ಲಕ್ಷ).