ಹೊನ್ನಾವರ: ಭಾರೀ ಗಾಳಿ ಮಳೆಯಿಂದಾಗಿ ಇಲ್ಲಿನ ಕರ್ಕಿ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಆಲದಮರ ಹೆದ್ದಾರಿಯಲ್ಲಿ ಬಿದ್ದಿರುವ ಘಟನೆ ತಡರಾತ್ರಿ ನಡೆದಿದೆ.
ಹೆದ್ದಾರಿಯಲ್ಲಿ ಮರ ಬಿದ್ದಿರುವುದುದರಿಂದಾಗಿ ವಾಹನ ಓಡಾಟಕ್ಕೆ ತೊಂದರೆ ಆಗುತ್ತಿದ್ದೆ. ಇನ್ನೂ ಸಹ ತೆರವು ಕಾರ್ಯ ನಡೆಯುತ್ತಿದ್ದು. ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭವಾಗಿಲ್ಲ. ಕುಮಟಾದಿಂದ ಮುಂಗಳೂರಿನ ಕಡೆ ಹೋಗುವ ಹಾಗೂ ಮಂಗಳೂರಿನಿಂದ ಕುಮಟಕಡೆ ಬರುವ ಎಲ್ಲಾ ವಾಹನಗಳು ಹೆದ್ದಾರಿ ಮಧ್ಯೆದಲ್ಲೆ ನಿಂತುಕೊಂಡಿದೆ.
ಇದರಿಂದಾಗಿ ದೂರ ದೂರ ಹೋಗಬೇಕಾದ ಪ್ರಯಾಣಿಕರು ವಾಹನದಲ್ಲೆ ಕುಳಿತು ಕಾಲ ಕಳೆಯುತ್ತಿದ್ದಾರೆ. ಈಗಾಗಲೇ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಪೊಲೀಸರು ಭೇಟಿ ನೀಡಿದ್ದು ಸ್ಥಳೀಯರ ಸಹಾಯದಿಂದ ಮರ ತೆರವು ಕಾರ್ಯ ನಡೆಸುತ್ತಿದ್ದಾರೆ.