ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಎಂಟನೆಯ ತರಗತಿ ಓದುತ್ತಿರುವ 84 ಮಕ್ಕಳು ಸರಕಾರ ಪ್ರಾಯೋಜಿತ ಸೈಕಲ್ ಸ್ವೀಕರಿಸಿ ಸಂತೋಷದ ಕ್ಷಣಗಳನ್ನು ಅನುಭವಿಸಿದರು. ಸೈಕಲ್ ವಿತರಣಾ ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ, ಶಾಲಾ ಓದನ್ನು ಹಿಗ್ಗಿಸುವ ನಿಟ್ಟಿನಲ್ಲಿ ಸರಕಾರದ ಯೋಜನೆಯ ಸದುಪಯೋಗವಾಗಬೇಕೆಂದು ತಿಳಿಸಿದರು. ಕೆನರಾ ಎಜ್ಯುಕೇಶನ್ ಸೊಸೈಟಿಯ ಸದಸ್ಯ ಕೃಷ್ಣದಾಸ ಪೈ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಬಾರದು ಸಮಯಕ್ಕೆ ಸರಿಯಾಗಿ ಹಾಜರಿರಬೇಕು ಎಂಬ ಒಳ್ಳೆಯ ಆಶಯ ಸರಕಾರದ್ದಾಗಿದೆ. ರಸ್ತೆ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕಾದ ಹೊಣೆಗಾರಿಕೆ ವಿದ್ಯಾರ್ಥಿಗಳಿಗೆ ಇರಬೇಕು ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಸೈಕಲ್ ಸಂರಕ್ಷಣೆ ಹಾಗೂ ಸವಾರಿಯ ಕುರಿತು ಇಲಾಖಾ ಆದೇಶಗಳ ಮುಖ್ಯಾಂಶಗಳನ್ನು ನೆರೆದ ಪೋಷಕ ವರ್ಗದವರಿಗೆ ವಿವರಿಸಿದರು. ಮುರಲೀ ಮಾಸ್ತರ್ ಮಾತನಾಡಿ ಸೈಕಲ್ ಮಕ್ಕಳಿಗೆ ಹೊರೆಯಾಗದೇ ಅವಶ್ಯಕ ಸಾಧನವಾಗಿ ಪರಿಗಣಿತವಾಗಲಿ ಎಂದು ಶುಭಹಾರೈಸಿದರು. ಶಿಕ್ಷಕ ವಿ.ಎನ್.ಭಟ್ಟ ಸ್ವಾಗತಿಸಿದರು. ಶಿಕ್ಷಕ ಕಿರಣ ಪ್ರಭು ವಂದಿಸಿದರು. ಶಿಕ್ಷಕ ಎಸ್.ಪಿ.ಪೈ ವಿತರಣಾ ವ್ಯವಸ್ಥೆಗೆ ಸಹಕರಿಸಿದರು. ಎಲ್ಲ ಮಕ್ಕಳೂ ತಮ್ಮ ತಮ್ಮ ಪಾಲಕರೊಂದಿಗೆ ಮೊದಲ ಸ್ವಂತ ಸೈಕಲ್ ಹೊಂದಿದ ಅನುಭವದಿಂದ ಬೀಗಿದ್ದು ಖುಷಿ ಕೊಟ್ಟಿತು.

RELATED ARTICLES  ಅಪ್ಸರಕೊಂಡ ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿ: ಕೆಲ‌ಕಾಲ ಭಯಗೊಂಡ ಜನತೆ.