ಸಿದ್ದಾಪುರ:ಬಾರಿ ಮಳೆ ಗಾಳಿಗೆ ಮರ ಬಿದ್ದು ಅರಣ್ಯ ರಕ್ಷಕ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಾವಿನಗುಂಡಿ ರಸ್ತೆಯ ಕುಳಿಬಿಡು ಬಳಿ ನಡೆದಿದೆ.
ಅರಣ್ಯ ರಕ್ಷಕ ಶಶಿಧರ್ ಸಾವುಕಂಡ ದುರ್ದೈವಿ. ಇಂದು ಕರ್ತವ್ಯದ ನಿಮಿತ್ತ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ದ್ವಿಚಕ್ರ ವಾಹನದ ಮೆಲೆ ಮರಬಿದ್ದು ಮರದಡಿಗೆ ಸಿಲುಕಿ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಇನ್ನು ಬೃಹದಾಕಾರದ ಮರ ಬಿದ್ದಿದ್ದರಿಂದ ರಸ್ತೆ ಸಂಚಾರ ಬಂದ್ ಆಗಿದ್ದು ಭಾರಿ ಗಾತ್ರದ ಮರದ ತೆರವು ಕಾರ್ಯ ನಡೆಸಲಾಗುತ್ತಿದೆ.
ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.