ಯಲ್ಲಾಪುರ: ಶಿರಸಿ ರಸ್ತೆಯ ಸವಣಗೇರಿ ಬಳಿ ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿ ಕಾರ್ ನಲ್ಲಿ ಇದ್ದವರು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.
ಯಲ್ಲಾಪುರ ಕಡೆಯಿಂದ ಶಿರಸಿಗೆ ಹೊರಟಿದ್ದ ಬಸ್ ಮತ್ತು ಶಿರಸಿಯಿಂದ ಯಲ್ಲಾಪುರದ ಕಡೆಗೆ ಹೊರಟಿದ್ದ ಕಾರ್ ಮುಖಾಮುಖಿಯಾಗಿದ್ದು, ಅಪಘಾತ ತಪ್ಪಿಸಲು ಬಸ್ ಚಾಲಕ ಪ್ರಯತ್ನಿಸಿದ ಪರಿಣಾಮ ಬಸ್ ಧರೆಗೆ ಗುದ್ದಿದೆ.
ಕಾರು ಸಂಪೂರ್ಣ ನುಜ್ಜು- ಗುಜ್ಜಾಗಿದ್ದು, ಕಾರ್ ನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.