ಕರ್ನಾಟಕ ಸರಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಟ್ರಾನ್ಸಪ್ಲಾಂಟ್ ಅಥೋರಿಟಿ ಆಪ್ ಕರ್ನಾಟಕ-ಜೀವಸಾರ್ಥಕತೆ ಮತ್ತು ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು ಭಟ್ಕಳ ರವರ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮನೋಜ ನಾಯಕ, ಅಂಗಾಂಗ ಕಸಿ ಸಂಯೋಜಕರು(ಹುಬ್ಬಳ್ಳಿ ವಿಭಾಗ) ಜೀವಸಾರ್ಥಕ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆರವರು ಅಥಿತಿ ಉಪನ್ಯಾಸ ನೀಡಿ ಮಾತನಾಡುತ್ತಾ ಅಂಗಾಂಗ ದಾನ ಅಮೂಲ್ಯವಾದುದು. ಸಾವಿನ ನಂತರ ಸಾರ್ಥಕತೆ ಮೆರೆಯಬಹುದು. ಮನುಷ್ಯ ಸತ್ತ ನಂತರ ಸುಡುವಅಥವಾ ಹುಳುವ ಬದಲು ದೇಹದಲ್ಲಿರುವ ಅಂಗಾಂಗಗಳನ್ನು ಮೆದುಳು ಸಾವಿನ ನಂತರದಾನ ಮಾಡಿದಲ್ಲಿ ಸುಮಾರು 8 ಜನಜೀವ ಉಳಿಸ ಬಹುದು ಎಂದರು.
ಎಲ್ಲಾಜನರು ಪ್ರತಿಜ್ಞೆ ಮಾಡಿ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜು ಸಂಯೋಜಕರಾದ ಪಿ.ಎಸ್.ಹೆಬ್ಬಾರ ವಹಿಸಿ ಮಾತನಾಡುತ್ತ ವಿದ್ಯಾರ್ಥಿಗಳು ಈ ಮಾಹಿತಿಯನನ್ನು ಎಲ್ಲಕಡೆಯಲ್ಲೂ ಪ್ರಸಾರ ಮಾಡಲು ನೇರವಾಗಲು ತಿಳಿಸಿದರು. ಮತ್ತು ಅಂಗಾಂಗದಾನದ ಕುರಿತು ಅರಿವನ್ನು ಮೂಡಿಸಲು ಮಂಜುನಾಥ ನಾಗರಾಜ ಎಂಬ ಬೆಂಗಳೂರಿನ ಯುವಕ, ಸಾಪ್ಟವೇರ್ ಎಂಜಿನಿಯರ್ ನಡೆಸುತ್ತಿರುವ ಅಭಿಯಾನಕ್ಕೆ ಶುಭಕೋರಿದರು.
ಉಪನ್ಯಾಸಕಿ ಸಮ್ರಧ್ಧಿ ನಾಯ್ಕ ಸ್ವಾಗತಿಸಿದರು. ಕುಮಾರಿ ದಿವ್ಯಾ ಕೋಡಿಯಾ ವಂದಿಸಿದರು. ವಿದ್ಯಾರ್ಥಿಗಳು ಉಪಸ್ಥಿತರಿದ್ದು ಮಾಹಿತಿ ಪಡೆದುಕೊಂಡರು.