ಕುಮಟಾ: ದೇವಾಲಯಗಳಲ್ಲಿ ಕಳ್ಳತನ ಪ್ರಕರ್ಣ ಹೆಚ್ಚುತ್ತಿದ್ದು ಕುಮಟಾದಲ್ಲಿ ಮತ್ತೊಂದು ಪ್ರಕರಣ ನಡೆದಿದೆ. ಕುಮಟಾ ತಾಲೂಕಿನ ಕಾಗಾಲ್ ನ ದೇವಕಿ ಕೃಷ್ಣ ದೇವಸ್ಥಾನ ದಲ್ಲಿ ದೇವಸ್ಥಾನದ ಬಾಗಿಲು ಒಡೆದು ಬಾಗಿಲಿನ ಬೆಳ್ಳಿ ಹೊದಿಕೆ ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ನಗ ನಾಣ್ಯ ಕಳ್ಳತನ ಮಾಡಿದ ಘಟನೆ ನಡೆದಿದೆ.

RELATED ARTICLES  ಕುಮಟಾದ ದೀವಗಿಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಣೆ.

ದೇವಾಲಯದ ಮುಂಭಾಗದ ಬಾಗಿಲು ಒಡೆದು ಒಳ ಹೊಕ್ಕ ಕಳ್ಳರು ದೇವಸ್ಥಾನ ಗರ್ಭಗುಡಿಗೆ ಲೇಪಿಸಿದ್ದ ಬೆಳ್ಳಿ ಬಾಗಲು,ಕಾಣಿಕೆ ಹುಂಡಿಯಲ್ಲಿದ್ದ ನಗ ನಾಣ್ಯ ದೋಚಿ ಪರಾರಿಯಾಗಿದ್ದಾರೆ.

ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಶ್ವಾನದಳ ಹಾಗೂ ಕುಮಟಾ ಪೂಲೀಸರು ಆಗಮಿಸಿ ಪರಿಶೀಲನೆ ಮಾಡಿದ್ದು ಅಂದಾಜು ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತು ಹಾಗು ಹಣ ಕಳ್ಳತನವಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದ್ದು

RELATED ARTICLES  ಕುಮಟಾದಲ್ಲಿ ಕರೋನಾ ವೈರಸ್ : ಸತ್ಯಾ ಸತ್ಯತೆ ತಿಳಿಯದೆ ಜನತೆ ಕಂಗಾಲು.

ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಕಳ್ಳರಿಗಾಗಿ ಶೋಧ ನಡೆಸಲಾಗುತ್ತಿದೆ. ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಜನತೆಗೆ ಸೂಚನೆ ನೀಡಲಾಗಿದೆ.