ಹೊನ್ನಾವರ : ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕವಲಕ್ಕಿಯಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. ಅತಿಥಿಗಳಾಗಿ ಸಂಸೃತ ಸವೇದ ಪಾಠಶಾಲೆಯ ಪ್ರಾಂಶುಪಾಲರಾದ ಶ್ರೀ ಗಣೇಶ ಭಟ್, ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಉಮೇಶ ವಿ ಹೆಗಡೆ ಅವರು ಉಪಸ್ಥಿತರಿದ್ದರು. ಗಣೇಶ ಭಟ್ ರವರು ಮಾತನಾಡಿ ಇಂದಿನ ದಿನಗಳಲ್ಲಿ ಕಾಡನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
RELATED ARTICLES ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ ಬೀಳ್ಕೊಡುಗೆ : ಕಲ್ಯಾಣಿ ವೆಂಕಟೇಶ ಕಾಂಬಳೆ ಅಧಿಕಾರ ಸ್ವೀಕಾರ.
ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಉಮೇಶ ವಿ ಹೆಗಡೆ ಅವರು ಮಾತನಾಡಿ ಇಂದಿನ ದಿನಗಳಲ್ಲಿ ನೀರಿನ ಅಭಾವವನ್ನು ನೀಗಿಸಲು ಮಳೆ ನೀರಿನ ಶೇಖರಣೆ ಮಾಡುವುದು ಅನಿವಾರ್ಯ. ಆ ದಿಶೆಯಲ್ಲಿ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ ಎಂದರು. ಅಲ್ಲದೇ ಪ್ರತಿಯೊಬ್ಬ ವಿದ್ಯಾರ್ಥಿಯು ಒಂದೊಂದು ಗಿಡ ನೆಡಬೇಕೆಂದು ಸೂಚನೆ ನೀಡಿದರು.
ಮುಖ್ಯಾಧ್ಯಾಪಕರಾದ ಶ್ರೀಮತಿ ವೈಲೆಟ್ ಕೆ ಫರ್ನಾಂಡಿಸ್ ರವರು ಮತ್ತು ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿಯಾದ ಶ್ರೀಮತಿ ಮಾನಸಾ ಹೆಗಡೆ ನಿರೂಪಿಸಿದರು.