ಶಿರಸಿ : ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಹಾಗೂ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಾತೃಮಂಡಳಿ ಸಹಯೋಗದಲ್ಲಿ ಸಂಘದ ಆವಾರದಲ್ಲಿ ದಿನಾಂಕ: 27 ಮತ್ತು 28 ನೇ ಜುಲೈ 2019 ರಂದು ಡೇರೆ ಮೇಳ ಆಯೋಜಿಸಲಾಗಿದ್ದು, ಈ ಮೇಳದಲ್ಲಿ ವಿವಿಧ ಬಗೆಯ ಡೇರೆ, ಸೇವಂತಿಗೆ ಹಾಗೂ ಅನೇಕ ಅಲಂಕಾರಿಕ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ. ಸದಸ್ಯರು ಹಾಗೂ ಗ್ರಾಹಕರು ಈ ಮೇಳದಲ್ಲಿ ಪಾಲ್ಗೊಂಡು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ವೇದಾ ಸೀತಾರಾಮ ಹೆಗಡೆ ನೀರ್ನಳ್ಳಿ ಇವರನ್ನು ಸಂಪರ್ಕಿಸುವುದು (ಮೊಬೈಲ್ ನಂ.9449993304). ಹಾಗೂ ಈಗಾಗಲೇ ಸಂಘದ ಆವಾರದಲ್ಲಿ ನಡೆಯುತ್ತಿರುವ ಪುಷ್ಪ ಮೇಳವೂ ಸಹ ದಿ:28.07.2019ರ ವರೆಗೆ ಮುಂದುವರೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.