ಅಂಕೋಲಾ: ‘ಶ್ರಾವಣ ಕಾವ್ಯ-ಕಥಾ ಸಂಗಮ’ ಕಾರ್ಯಕ್ರಮವು ಇಲ್ಲಿಯ ಕರ್ನಾಟಕ ಸಂಘದ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ನಡೆಯಲಿದ್ದು
ಕಾರ್ಯಕ್ರಮ ಅಂಗವಾಗಿ ಕರ್ನಾಟಕ ಸಂಘದ ಸದಸ್ಯರಿಂದ ಕವನ ಹಾಗೂ ಕಥೆಗಳನ್ನು ಆಹ್ವಾನಿಸಿದೆ. ಬಂದ ಬರಹಗಳಲ್ಲಿ ಆಯ್ದ 10 ಕವನ ಹಾಗೂ 2 ಕಥೆಗಳನ್ನು ಕಾವ್ಯ-ಕಥಾ ಸಂಗಮ ಕಾರ್ಯಕ್ರಮದಲ್ಲಿ ವಾಚಿಸಲು ಅವಕಾಶವಿದ್ದು, ಆಯ್ಕೆ ಸಮಿತಿ ಕವನ ಹಾಗೂ ಕಥೆಗಳನ್ನು ಆಯ್ಕೆ ಮಾಡಲಿದೆ. ಆಯ್ಕೆಯಾದ ಬರಹಗಾರರಿಗೆ ನಂತರದಲ್ಲಿ ಕಾರ್ಯಕ್ರಮದ ದಿನಾಂಕ ಹಾಗೂ ಸ್ಥಳ ಕುರಿತು ತಿಳಿಸಲಾಗುವುದು.
ಆಸಕ್ತ ಬರಹಗಾರ ಸದಸ್ಯರು ತಮ್ಮ ಈ ಹಿಂದೆ ಎಲ್ಲಿಯೂ ಪ್ರಕಟವಾಗಿರದ ಒಂದು ಕವನ ಅಥವಾ ಒಂದು ಕಥೆಯನ್ನು ತಮ್ಮ ಸಂಕ್ಷಿಪ್ತ ಪರಿಚಯದೊಂದಿಗೆ ಆ. 10 ರೊಳಗಾಗಿ ನಾಗಪತಿ ಹೆಗಡೆ, ಪಿ. ಎಮ್, ಹೈಸ್ಕೂಲ್ ಅಂಕೋಲಾ-581314, ಉತ್ತರ ಕನ್ನಡ ಜಿಲ್ಲೆ ಅಥವಾ [email protected] ಈವಿಳಾಸ ಕ್ಕೆ ಕಳುಹಿಸಬೇಕು.
ಮುಂದಿನ ದಿನಗಳಲ್ಲಿ ಆಯ್ದ ಕವನ ಹಾಗೂ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಈ ವರ್ಷವೂ ಪುಸ್ತಕ ಪ್ರಕಟಣೆಯ ಪ್ರಾಯೋಜಕತ್ವವನ್ನು
ಪ್ರೊ. ಕೆ.ವಿ. ನಾಯಕ ಅವರು ವಹಿಸಿಸುವರು. ಅಂಕೋಲಾ ಕರ್ನಾಟಕ ಸಂಘದ ಸದಸ್ಯರಿಗೆ ಮಾತ್ರ ಕಾರ್ಯಕ್ರಮ ಸೀಮಿತ ವಾಗಿದೆ ಎಂದು ಎಂದು ಸಂಘದ ಅಧ್ಯಕ್ಷ ನಾಗಪತಿ ಹೆಗಡೆ ತಿಳಿಸಿದ್ದಾರೆ.