ಅಂಕೋಲಾ : ತಾಲೂಕಿನ ಅವರ್ಸಾದ ಕಾತ್ಯಾಯನಿ ಪ್ರೌಢಶಾಲೆಯ ಪೂರ್ವ ವಿದ್ಯಾರ್ಥಿಗಳ ಸಂಘ ಸ್ಥಾಪನೆ ಕುರಿತು ಇತ್ತೀಚೆಗೆ ನಡೆದ ಸಭೆಯಲ್ಲಿ ಅಧ್ಯಕ್ಷ ತುಳಸಿದಾಸ ಎಸ್. ಕಾಮತ ಮಾತನಾಡಿ ಬರುವ ಜುಲೈ 28 ಭಾನುವಾರ ಪ್ರೌಢಶಾಲೆಯಲ್ಲಿ ಪೂರ್ವ ವಿದ್ಯಾರ್ಥಿಗಳ ಸಂಘ ಸ್ಥಾಪನೆಯ ಕುರಿತು ಸಭೆ ಹಮ್ಮಿಕೊಳ್ಳಲಾಗಿದೆ. ಕಾರಣ ನಮ್ಮ ಶಾಲೆಯಲ್ಲಿ ಕಲಿತ ಪೂರ್ವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದಸ್ಯರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಉಲ್ಲಾಸ ರೇವಣಕರ, ಮುಖ್ಯಾಧ್ಯಾಪಕ ಗಂಗಾಧರ ಸಿ. ನಾಯ್ಕ ಹಾಗೂ ನಿವೃತ್ತ ಮುಖ್ಯಾಧ್ಯಾಪಕರಾದ ಎಮ್ ಎಸ್. ಪ್ರಭು, ಡಿ ಆರ್. ಹಿಚ್ಕಡ , ಶಾಲೆಯ ಸಹ ಶಿಕ್ಷಕರಾದ ಶ್ರೀಧರ ಮೇತ್ರಿ, ನಾವಡಾ, ರಮೇಶ ಕಳ್ಳಿಮನಿ, ಪೂರ್ವ ವಿದ್ಯಾರ್ಥಿಗಳಾದ ಗಿರೀಶ ಗೌಡ, ಶ್ರೀನಿವಾಸ ನಾಯ್ಕ, ಶರದ ಟಾಕೇಕರ, ಅನಂತ ಭಟ್ಟ, ಮೋಹನದಾಸ ಪೈ, ಮಹೇಶ ಪೈ, ಪ್ರವೀಣ ಶೇಟ ಹಾಗೂ ಪ್ರಶಾಂತ ರೇವಣಕರ ಉಪಸ್ಥಿತರಿದ್ದರು.