ಭಟ್ಕಳ : ನಮ್ಮ ದೇಶವು ಕಾರ್ಗಿಲ್ ಯುದ್ಧದಲ್ಲಿ ಗಳಿಸಿದ ವಿಜಯದ ಸಂಭ್ರಮದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಎಬಿವಿಪಿ ಕಾರ್ಗಿಲ್ ವಿಜಯ ದಿವಸವನ್ನು ಇಲ್ಲಿನ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಲಾಗಿ ಉಪಸ್ಥಿತರಿದ್ದ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಂಜುನಾಥ ಹೆಗಡೆ ಮಾತನಾಡಿ ದೇಶ ಇದ್ದರೆÉ ನಾವು, ದೇಶ ಅತಂತ್ರವಾದರೆ ನಮಗೆ ನೆಲೆಯಿಲ್ಲ. ದೇಶಾಭಿಮಾನವೇ ಎಲ್ಲಕ್ಕಿಂತ ದೊಡ್ಡದು ಎಂದು ನುಡಿದರಲ್ಲದೇ ಸೇನೆಯಲ್ಲಿ ಸೇವೆ ಸಲ್ಲಿಸಿದ ತಮ್ಮ 16 ವರ್ಷಗಳ  ಅನುಭವವನ್ನು ಹಂಚಿಕೊಂಡು ಯುವಜನತೆಯಲ್ಲಿ ದೇಶಪ್ರೇಮವನ್ನು ಉತ್ತೇಜಿಸುವ ಎಬಿವಿಪಿಯ ಕಾರ್ಯಕ್ರಮ ಸಂಘಟನೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಇಂದಿನ ಯುವಜನತೆ ಸೇನೆಗೆ ಸೇರುವ ಅವಕಾಶವನ್ನು ಬಳಸಿಕೊಂಡು ದೇಶಸೇವೆಗೆ ಮುಂದಾಗಬೇಕು ಎಂದರಲ್ಲದೇ ಮೊಬೈಲನ್ನು ಜಾÐನ ಹೆಚ್ಚಿಸಿಕೊಳ್ಳಲು ಸಮರ್ಪಕವಾಗಿ ಬಳಸುವಂತೆ ಕರೆ ನೀಡಿದರು. ಕಾರ್ಯಕ್ರಮವನ್ನು ಮಾಜಿ ಹಿರಿಯ ಸೈನಿಕ ನಾರಾಯಣ ನಾಯ್ಕ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯ್ಷತೆ ವಹಿಸಿದ್ದ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಭಾರತದ ಇತಿಹಾಸ ನೋಡಿದರೆ ದೇಶ ಎಂದಿಗೂ ಯಾವ ದೇಶದ ಮೇಲೆ ಯುದ್ಧ ಸಾರಿಲ್ಲ ಆದರೆ ಬದಲಾಗಿ ದೇಶದ ಸ್ವಾಭಿಮಾನಕ್ಕೆ, ಭದ್ರತೆಗೆ ಧಕ್ಕೆ ಬಂದಾಗ ನಮ್ಮ ಸೈನ್ಯ ದಿಟ್ಟತನದಿಂದ ಸಮರ್ಥವಾದ ಉತ್ತರವನ್ನು ನೀಡಿದೆ. ಕಾರ್ಗಿಲ್ ಯುದ್ಧದಲ್ಲಿ 527 ಸೈನಿಕರಲ್ಲಿ ಹುತಾತ್ಮರಾಗಿದ್ದಾರೆ.  ಪರಮವೀರ ಚಕ್ರ ಪಡೆಯಬೇಕೆಂಬ ಕಾರಣಕ್ಕೇ ಸೇನೆ ಸೇರುತ್ತದ್ದೇನೆ ಎಂದು  ಸೇನೆಗೆ ಆಯ್ಕೆ ಮಡುವ ಸಂದರ್ಶನದಲ್ಲಿ ನುಡಿದ ಹುತಾತ್ಮ  ಮನೋಜ ಕುಮಾರ ಪಾಂಡೆಯ ಅಪ್ರತಿಮ ದೇಶಪ್ರೇಮ, ಹಾಗೂ ಜೀವಿತಾವಧಿಯಲ್ಲೇ ಪರಮವೀರ ಚಕ್ರ ಪಡೆದ ಯೋಗೀದ್ರ ಸಿಂಗ್ ಯಾದವ್ ಅವರ ದಿಟ್ಟ ಹೋರಾಟ ಮತ್ತು ತಾನು ಸತ್ತರೂ ಕಣ್ಣೀರು ಸುರಿಸಬಾರದೆಂದು ತನ್ನ ತಂದೆ ತಾಯಿಗೆ ಪತ್ರ ಬರೆದಿಟ್ಟು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಪದ್ಮಪಾಣಿ ಆಚಾರ್ಯ ಮುಂತಾದ ಸೈನಿಕರ ದೇಶಪ್ರೇಮದ ಕಿಚ್ಚು, ಕೆಚ್ಚಿನ ಕುರಿತು ಮಾತನಾಡಿದರಲ್ಲದೇ ಯುವಜನತೆ ದೇಶವನ್ನು ಕಟ್ಟುವ ಸಮರ್ಥ ವ್ಯಕ್ತಿಗಳಾಗಿ ರೂಪುಗೊಳ್ಳಬೇಕೆಂದು ವಿಧ್ಯಾರ್ಥಿಗಳಿಗೆ ಕರೆನೀಡಿದರು.

RELATED ARTICLES  ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಪಾಸಿಟಿವ್ ಪತ್ರಿಕೋದ್ಯಮ ಕಾರ್ಯಾಗಾರ!

ಎ.ಬಿ.ವಿ.ಪಿ. ಭಟ್ಕಳ ಶಾಖೆ ವಕ್ತಾರ ಕೃಷ್ಣ ನಾಯ್ಕ ಬಲಸೆ ಮಾತನಾಡಿ ಕಾರ್ಗಿಲ್ ವಿಜಯೋತ್ಸವ ದಿನದ ಹಿನ್ನೆ¯ಯಲ್ಲಿ ಕಳೆದ ನಾಲ್ಕುವರ್ಷದಿಂದ ಹೆಮ್ಮೆಯಿಂದ ಆಚರಿಕೊಂಡು ಬರುತ್ತಿರುವುದನ್ನು ತಿಳಿಸಿದರು. ಇದೇ ಸಂಧರ್ಭದಲ್ಲಿ ಮಾಜಿ ಸೈನಿಕರಾದ ನಾರಾಯಣ ನಾಯ್ಕ, ಮಂಜುನಾಥ ಹೆಗಡೆ, ಉಮೇಶ ನಾಯ್ಕ ಹಾಗೂ ಅಣ್ಣಪ್ಪ ನಾಯ್ಕ ಅವರನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭಟ್ಕಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ, ದೇಶಪ್ರೇಮ ಬಿಂಬಿಸುವ ಗೀತೆಗೆ ಸಮೂಹ ನೃತ್ಯ  ಹಾಗೂ ಕಾರ್ಗಿಲ ಯುದ್ದದಲ್ಲಿ ಸೈನಿಕರ ಪರಾಕ್ರಮದ ಕುರಿತಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಬಿವಿಪಿಯ ಕಾರ್ಯಕರ್ತರು, ವಿವಿಧ ಕಾಲೇಜಿಗಲ ವಿಧ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂಪೂರ್ವದಲ್ಲಿ  ಸರ್ಕಾರಿ ಪದವಿ ಕಾಲೇಜು, ಗುರುಸುಧಿಂದ್ರ ಕಾಲೇಜು, ಸಿಧ್ಧಾರ್ಥ ಪದವಿ ಕಾಲೇಜು, ನ್ಯೂ ಇಂಗ್ಲೀಷ ಪ.ಪೂ. ಕಾಲೇಜುಗಳ ಸಾವಿರಾರು ವಿದ್ಯಾಥಿಗಳು ಮಳೆಯನ್ನೂ ಲೆಕ್ಕಿಸದೇ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ತ್ರಿವರ್ಣ ಧ್ವಜವನ್ನು ಹೊತ್ತು ದೇಶ ಪ್ರೇಮದ ಘೋಷಣೆಯೊಂದಿಗೆ ಶಂಸುದ್ದೀನ್ ಸರ್ಕಲನಿಂದ ಪೇಟೆ ಮುಖ್ಯ ರಸ್ತೆಯಿಂದ ನಗರ ಠಾಣೆ ರಸ್ತೆ ಮಾರ್ಗವಾಗಿ ಆಸರಕೇರಿ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ಸಭಾಭವನಕ್ಕೆ ಮೆರವಣಿಗೆಯ ಮೂಲಕ ಬಂದು ತಲುಪಿದರು. ಸಂಪೂರ್ಣ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದು ವಿಶೇಷವಾಗಿತ್ತು.

RELATED ARTICLES  ಹಣತೆ ಬೆಳಕಿನಲ್ಲಿ ರಮ್ಜಾನ್ ಕವಿಗೋಷ್ಠಿ ಕರ್ನಾಟಕಕ್ಕೇ ಮಾದರಿ : ಡಾ. ಷರೀಫ್