ಸ್ವಾತಂತ್ರ್ಯದಿನದಂದು ಎಲ್ಲಾ ಕಡೆ ಧ್ವಜವಂದನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ ಅದೇ ದಿನ ಮಧ್ಯಾಹ್ನದಿಂದಲೇ ಮಾರ್ಗಗಳಲ್ಲಿ ಮತ್ತು ಚರಂಡಿಗಳಲ್ಲಿ ಕಾಗದದ ಅಥವಾ ಪ್ಲಾಸ್ಟಿಕಿನ ರಾಷ್ಟ್ರಧ್ವಜಗಳು ಅದೇ ದಿನ ಛಿದ್ರಛಿದ್ರವಾಗಿ ಬಿದ್ದಿರುತ್ತವೆ. ಅದಲ್ಲದೇ ಪ್ಲಾಸ್ಟಿಕ್ ತಕ್ಷಣ ನಾಶವಾಗದ ಕಾರಣ ಬಹಳ ದಿನಗಳ ತನಕ ರಾಷ್ಟ್ರಧ್ವಜದ ಅವಮಾನವನ್ನು ಕಾಣಬೇಕಾಗುತ್ತದೆ.
ಹಿಂದೂ ಜನಜಾಗೃತಿ ಸಮಿತಿಯು ಕಳೆದ 15 ವರ್ಷಗಳಿಂದ ರಾಷ್ಟ್ರಧ್ವಜದ ಗೌರವ ಕಾಪಾಡುವ ಅಭಿಯಾನವನ್ನು ಮಾಡುತ್ತಿದೆ. ಈ ಅಭಿಯಾನದ ಮಾಧ್ಯಮದಿಂದ ರಸ್ತೆಬದಿ ಬಿದ್ದಿರುವ ರಾಷ್ಟ್ರಧ್ವಜಗಳನ್ನು ಸಂಗ್ರಹಿಸುವುದು, ಪ್ಲಾಸ್ಟಿಕ್ ಧ್ವಜದ ಬಳಕೆ ಮಾಡದಂತೆ ಸಮಾಜ ಮತ್ತು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದು, ಸರಕಾರಕ್ಕೆ ಈ ಬಗ್ಗೆ ಮನವಿಪತ್ರ ನೀಡುವುದು, ಕರಪತ್ರ ವಿತರಿಸುವುದು ಮುಂತಾದ ರೀತಿಯಲ್ಲಿ ಅಭಿಯಾನವನ್ನು ನಡೆಸುತ್ತಿದೆ.
ಕೇಂದ್ರೀಯ ಗೃಹಮಂತ್ರಾಲಯದ ಆದೇಶದಂತೆ ರಾಷ್ಟ್ರಧ್ವಜ ಮತ್ತು ಬಿಲ್ಲೆಗಳಿಗಾಗಿ ಪ್ಲಾಸ್ಟಿಕ್ ಉಪಯೋಗಿಸಬಾರದು ಎಂಬ ನಿಯಮವಿದೆ, ಈ ನಿರ್ಣಯವನ್ನು ಯೋಗ್ಯ ರೀತಿಯಲ್ಲಿ ಕಾರ್ಯರೂಪಕ್ಕೆ ತರುವ ಅವಶ್ಯಕತೆಯಿದೆ. ಭಾರತೀಯ ಸಂವಿಧಾನದಲ್ಲಿನ ಕಲಮ್ 51(ಅ) ಇದಕ್ಕನುಸಾರ ರಾಷ್ಟ್ರಧ್ವಜದ ಗೌರವ ಕಾಪಾಡುವುದು ನಾಗರಿಕರ ಹಾಗೂ ಸರಕಾರದ ಮೂಲಭೂತ ಕರ್ತವ್ಯಗಳಾಗಿವೆ. ರಾಷ್ಟ್ರಧ್ವಜದ ಅವಮಾನ, ರಾಷ್ಟ್ರೀಯ ಗೌರವದ ಪ್ರತೀಕಗಳ ದುರುಪಯೋಗವನ್ನು ತಡೆಯುವ ಕಾಯ್ದೆ 1950, ಕಲಮ್ 2 ಮತ್ತು 5 ಕ್ಕನುಸಾರ ಹಾಗೂ ರಾಷ್ಟ್ರಗೌರವ ಅವಮಾನ ನಿರ್ಬಂಧ ಅದಿನಿಯಮ 1971ರ ಕಲಂ 2 ಕ್ಕನುಸಾರ ಹಾಗೂ ಬೋಧಚಿಹ್ನೆ ಹಾಗೂ ಹೆಸರುಗಳನ್ನು (ಅಯೋಗ್ಯವಾಗಿ ಉಪಯೋಗಿಸಲು ನಿರ್ಬಂಧ) ಅದಿನಿಯಮ 1950 ಇತ್ಯಾದಿ ಈ ಮೂರು ಕಾಯಿದೆಗನುಸಾರ ಇದು ದಂಡನಾತ್ಮಕ ಅಪರಾಧವಾಗಿದೆ.

RELATED ARTICLES  ದೇಶಕ್ಕೆ ಕೀರ್ತಿ ತಂದ ಉತ್ತರಕನ್ನಡದ ಬಾಲಕ.

ಹಾಗಾಗಿ ರಾಷ್ಟ್ರಧ್ವಜದ ಅವಮಾನವಾಗಬಾರದೆಂದು ಸರಕಾರವು ತೆಗೆದುಕೊಂಡ ನಿರ್ಣಯವನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಪ್ಲಾಸ್ಟಿಕಿನ ರಾಷ್ಟ್ರಧ್ವಜ, ಬಿಲ್ಲೆ, ಹಾಗೂ ಇತರ ವಸ್ತುಗಳನ್ನು ಉತ್ಪಾದನೆ ಮಾಡುವ ಉತ್ಪಾದಕರು ಹಾಗೂ ವಿತರಕರು ಮತ್ತು ಮಾರಾಟಗಾರರು ಒಂದು ವೇಳೆ ಈ ರೀತಿಯ ವಸ್ತುಗಳನ್ನು ವಿತರಣೆ ಅಥವಾ ಮಾರಾಟಕ್ಕೆ ಇಟ್ಟಲ್ಲಿ ಅವರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಬೇಕು. ಮಾತ್ರವಲ್ಲದೇ ಕಾಯಿದೆಯ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರ ವಿರುದ್ಧ ಕಾನೂನು ಕಾರ್ಯಾಚರಣೆ ನಡೆಸಬೇಕೆಂದು ಸರಕಾರಕ್ಕೆ ಮನವಿಯನ್ನು ನೀಡುವುದರ ಜೊತೆಗೆ ಹಿಂದೂ ಜನಜಾಗೃತಿ ಸಮಿತಿಯು ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸುತ್ತಿದೆ. ಈ ಸಂಬಂದ ಮನವಿ ನೀಡಲಾಯಿತು.

RELATED ARTICLES  ಮಂಕಾಳ ವೈದ್ಯರ ಪರ ದೇಶಪಾಂಡೆ ಪ್ರಚಾರ: ಭಟ್ಕಳದಲ್ಲಿ ಬಲ ತಂದ ಆರ್.ವಿ.ಡಿ

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸೌ.ವಾಸಂತಿ ಮುರ್ಡೇಶ್ವರ, ಸೌ.ಮೋಹಿನಿ ಶೇಟ, ಸೌ.ಪಾರ್ವತಿ ಭಟ್, ಸೌ.ಜಯಲಕ್ಷೀ ಕಲ್ಗಲ್, ಚಂದ್ರಶೇಖರ್ ಮೇಸ್ತ, ವಿವೇಕ ಶೇಟ ಹಾಗೂ ಇತರರು ಉಪಸ್ಥಿತರಿದ್ದರು.