ಕಾರವಾರ: ತಾಲೂಕಿನಾದ್ಯಂತ 3 ದಿನಗಳಿಂದ ಮಳೆ ಜೋರಾದ್ದು ತಾಲೂಕಿನ ಮಾಜಾಳಿಯ ಮಾಡಿಸಿಟ್ಟಾದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ನೀರು ತುಂಬಿತ್ತು ಮತ್ತು ತರಗತಿಯ ಕೊಠಡಿಗಲಿಗೂ ಕೂಡ ನೀರು ಹೋಗಿತ್ತು.

ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಅನಾನುಕೂಲ ಉಂಟಾಗಿತ್ತು. ಶಾಲೆಯಲ್ಲಿ ಮಳೆಗಾಲ ಸಮಯದಲ್ಲಿ ತುಂಬಾ ಮಳೆ ಬಿದ್ದರೆ ನಾಲ್ಕು ಕಡೆ ನೀರು ತುಂಬಿತಿತ್ತು. ಇದನ್ನು ಗಮನಿಸಿದ ಸ್ಥಳವನ್ನು ಪರಿಶೀಲಿಸಿದ ಕುಮಾರ್ ಪ್ರಜ್ವಲ್ ಶೇಟ ಮತ್ತು ಅಭಿಷೇಕ ಕಳಸ ಇವರು ತಮ್ಮ ನೇತೃತ್ವದಲ್ಲಿ ಇದ್ದ ಕಡಲ ಸಿರಿ ಯುವ ಸಂಘ ಎಂಬ ವತಿಯಿಂದ ಸ್ವಚ್ಛ ಭಾರತ ಸಮರ ಇಂಟರ್ ಶಿಪ್ ಅಡಿಯಲ್ಲಿ ಶಾಲಾ ಆವರಣದಲ್ಲಿ ಮುಂದೆ ಇದ್ದ ನಾಲ್ಕು ಕಡೆಯ ಗಲೀಜು ನೀರನ್ನು ಮತ್ತು ಶಾಲಾಕೊಠಡಿಯ ಒಳಗೆ ಇದ್ದ ನೀರನ್ನು ಸ್ವಚ್ಛಗೊಳಿಸಿದ್ದಾರೆ.

RELATED ARTICLES  ಮತ್ತೆ ಕೇಳಿತು ಬೈಪಾಸ್ ವಿರೋಧದ ಮಾತು: ಮುಖ್ಯ ಮಂತ್ರಿಯವರಿಗೆ ಸಲ್ಲಿಕೆಯಾಯ್ತು ಮನವಿ.

ಕೂಡ ಕಡಲ ಸಿರಿ ಯುವ ಸಂಘದವರಿಂದ ನಡೆದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಮಾಜಾಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀತಲ ಪವಾರ ಪಂಚಾಯತ್ ಸದಸ್ಯ ದೀಪಕ್ ಗಡ್ಕರ ಮತ್ತು ಗ್ರಾಮಸ್ಥರಾದ ಲಕ್ಷ್ಮೀ ನಾರಾಯಣ ಕುಡ್ತರಕರ, ಸಂತೋಷ ನಾಯ್ಕರವರು ಈ ಕಡಲ ಸಿರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು..

RELATED ARTICLES  ಬೂತ್ ಮಟ್ಟದಲ್ಲಿ ಪಕ್ಷ ಸಶಕ್ತಗೊಳಿಸುವ ಮೂಲಕ ಗೆಲುವಿಗೆ ಪ್ರಯತ್ನ; ಕುಮಟಾದಲ್ಲಿ ಶ್ರೀನಿವಾಸ ಪೂಜಾರಿ ಹೇಳಿಕೆ