ಕುಮಟಾ : ನಗರದ ಹವ್ಯಕ ಸಭಾಭವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಬಗ್ಗೆ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಶ್ರೀ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ಹಾಗೂ ಕ್ಲಾಸಿಕ್ ಸ್ಟಡಿ ಸರ್ಕಲ್ ಧಾರವಾಡ ಇವರ ಸಹಯೋಗದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು..
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಮುರಳೀಧರ ಪ್ರಭು ನಮ್ಮ ಕುಮಟಾದ ಹಾಗೂ ಜಿಲ್ಲೆಯ ಜನಪ್ರಿಯ ವೈದ್ಯರು ಡಾ ಟಿ ಟಿ ಹೆಗಡೆ ಯವರು ಇಂದು ನಿಧನರಾಗಿದ್ದು ಅವರ ಆತ್ಮಕ್ಕೆ ಶಾಂತಿ ಕೋರುತ್ತ ಅವರ ಶಿಕ್ಷಣ ಪ್ರೇಮವನ್ನು ಸ್ಮರಿಸಿದರು..
ಇವತ್ತಿನ ಕಾರ್ಯಾಗಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸುರಿಯುತ್ತಿರುವ ಮಳೆಯಲ್ಲಿಯೂ ಆಗಮಿಸಿದ ಯುವಕ ಯುವತಿಯರನ್ನು ಮೊದಲು ಅಭಿನಂದಿಸುತ್ತೇನೆ ಯಾಕಂದರೆ ನೀವು ಏನಾದರೂ ಜೀವನದಲ್ಲಿ ಸಾಧಿಸಬೇಕು ಎಂಬ ಛಲದಿಂದ ಒಂದು ಹೆಜ್ಜೆ ಮುಂದಿಟ್ಟಿದ್ದೀದಿ ಎಂದು ಅರ್ಥ.. ನಮ್ಮ ಭಾಗದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಹಿನ್ನಡೆ ಅನುಭವಿಸುತ್ತಾರೆ ಮುಖ್ಯ ಕಾರಣ ಅಂದ್ರೆ ಅವರಲ್ಲಿ ಇಂದು ಸಂತೃಪ್ತಿ ಇದೆ ಅಂತ ಅರ್ಥ ಇನ್ನು ಕೆಲವರಿಗೆ ಅಲ್ಪ ತೃಪ್ತಿ ಸಾಕು ಎಂದು ಸುಮ್ಮನೆ ಇರುವವರು ಇದ್ದಾರೆ.. ಯಾವತ್ತೂ ಹೊಟ್ಟೆಯಲ್ಲಿ ಬೆಂಕಿ ಇರಬೇಕು ಅಂದ್ರೆ ಏನಾದರೂ ಸಾಧನೆ ಮಾಡಬೇಕು ಜೀವನದಲ್ಲಿ ಕಷ್ಟ ಪಟ್ಟು ಮುಂದೆ ಬರಬೇಕು ಎಂದು ಎಲ್ಲರಲ್ಲಿಯೂ ಮನಸ್ಸಿನಲ್ಲಿ ಬರಬೇಕು.. ಇಂತಹ ಕೋಚಿಂಗ್ ಹೆಚ್ಚು ಅನುಕೂಲ ಮಾಡಿಕೊಡುತ್ತದೆ ಎಂದರು..
ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ನ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮಾತನಾಡಿ ನಮ್ಮ ಜಿಲ್ಲೆಯ ಯುವ ಜನತೆಗೆ ಮಾಹಿತಿಯ ಕೊರತೆ ಇದೆ.. ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಹೊರ ಜಿಲ್ಲೆಯ ಅಧಿಕಾರಿಗಳೇ ಹೆಚ್ಚು ಕಾಣ ಸಿಗುತ್ತಾರೆ.. ನಮ್ಮ ಜಿಲ್ಲೆಯ ಜನ ತುಂಬಾ ವಿರಳ.. ಇದಕ್ಕೆ ಕಾರಣ ಸರಿಯಾದ ಮಾರ್ಗದರ್ಶನ ಸಿಗದೇ ಪೋಲಿಸ್ ಅಥವಾ ಸರ್ಕಾರಿ ನೌಕರಿಗೆ ಸೇರಬಯಸುವವರಿಗೆ ತೊಂದರೆ ಆಗುತ್ತಿದೆ ಇದನ್ನು ಮನಗಂಡು ನಮ್ಮ ಟ್ರಸ್ಟ್ ಜಿಲ್ಲೆಯ ಯುವ ಜನತೆಗೆ ನೆರವಾಗಲು ಈ ಕಾರ್ಯಾಗಾರ ಹಮ್ಮಿಕೊಂಡಿದೆ.. ಇಲ್ಲಿ ಕಾರ್ಯಾಗಾರದ ನಂತರ ಒಂದು ಚಿಕ್ಕ ಟೆಸ್ಟ್ ನಡೆಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಮುಂದಿನ ಹಂತದಲ್ಲಿ ಹಳಿಯಾಳ ಮತ್ತು ಧಾರವಾಡ ದಲ್ಲಿ ವಿಶೇಷ ತರಬೇತು ಗೊಳಿಸಿ ಸರ್ಕಾರಿ ಇಲಾಖೆಗಳ ಪರಿಕ್ಷೆಗಳಲ್ಲಿ ತೇರ್ಗಡೆ ಆಗಲು ಸಜ್ಜುಗೊಳಿಸಲಾಗುವುದು ಎಂದರು..
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಮಟಾ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಇ ಸಿ ಸಂಪತ್ ಮಾತನಾಡಿ ಈ ಕಾರ್ಯಾಗಾರ ಕುಮಟಾ ದಲ್ಲಿ ನಡೆಸುವಂತೆ ನಾನು ವಿನಂತಿಸಿದ್ದೆ ಅದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರು ಆಗಮಿಸಿದ್ದು ನಿಮ್ಮ ಸಾಧಿಸುವ ಛಲ ಮೆಚ್ಚುವಂಥದ್ದು. ನಾವೂ ಕೂಡ ಪೋಲಿಸ್ ಇಲಾಖೆ ಗೆ ಸೇರುವಾಗ ಈ ರೀತಿಯ ಮಾರ್ಗದರ್ಶನ ಪಡೆದಿದ್ದು ಅನುಕೂಲ ಆಗಿತ್ತು ಎಂದು ತಮ್ಮ ವೃತ್ತಿ ಜೀವನಕ್ಕೆ ಹೆಜ್ಜೆ ಇಟ್ಟ ಸಮಯ ನೆನಪಿಸಿಕೊಂಡರು.. ಹೆಚ್ಚಿನ ಸಮಯ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣ ಟಿಕ್ ಟೆಕ್ ನಲ್ಲಿ ಮುಳುಗಿರದೇ ಪರೀಕ್ಷೆ ಯ ಅಭ್ಯಾಸ ದ ಜೊತೆಗೆ ಇಂತಹ ಮಾರ್ಗದರ್ಶನ ಪಡೆದಲ್ಲಿ ನೀವು ಉತ್ತೀರ್ಣರಾಗುವ ಜೊತೆಗೆ ಪೋಲಿಸ್ ಹಾಗೂ ಸರ್ಕಾರಿ ನೌಕರಿಗೆ ಸೇರಲು ತುಂಬಾ ಅನುಕೂಲವಾಗಲಿದೆ ಎಂದರು ಜೊತೆಗೆ ಜಿಲ್ಲೆಯ ಯುವ ಜನತೆಗೆ ಈ ಮಾರ್ಗದರ್ಶನ ದ ವ್ಯವಸ್ಥೆ ಮಾಡಿಕೊಟ್ಟ ಶ್ರೀ ವಿ ಆರ್ ದೇಶಪಾಂಡೆ ಟ್ರಸ್ಟ್ ಹಾಗೂ ಕ್ಲಾಸಿಕ್ ಸ್ಟಡಿ ಸರ್ಕಲ್ ನವರನ್ನು ಅಭಿನಂದಿಸಿದರು
ಇನ್ನೂರಕ್ಕೂ ಹೆಚ್ಚು ಯುವಕ ಯುವತಿಯರು ಈ ಕಾರ್ಯಾಗಾರ ದ ಪ್ರಯೋಜನ ಪಡೆದುಕೊಂಡರು..