ಬೆಂಗಳೂರು : ವಿಧಾನಸಭಾ ಸ್ಪೀಕರ್ ಆಗಿ 14 ತಿಂಗಳುಗಳಿಂದ ಕಾರ್ಯನಿರ್ವಹಿಸಿದ್ದ ಕೆ.ಆರ್. ರಮೇಶ್ ಕುಮಾರ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ತಿಳಿದುಬಂದಿದೆ.

ನಾನು ಈ ಜವಾಬ್ದಾರಿಯಿಂದ ಬಿಡುಗಡೆ ಹೊಂದಬೇಕು ಎಂದು ನಿಶ್ಚಯ ಮಾಡಿದ್ದೇನೆ. ಸಾಮಾನ್ಯ ಕುಟುಂಬದಿಂದ ಬಂದಿದ್ದೇನೆ. ವಿದ್ಯಾರ್ಥಿ ಚಳುವಳಿಯಿಂದ ಬಂದವನು ನಾನು. ಇಂತಹ ಹಿನ್ನಲೆಯಿಂದ ಬಂದ ನಾನು ನನ್ನ ಕರ್ತವ್ಯದ ಅನುಸಾರ ನಾನು ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದೇನೆ. ನನ್ನ ಕೆಲಸ ತೃಪ್ತಿ ತಂದಿದೆ. ನನ್ನ ನಡೆಯಿಂದ ಯಾರಿಗಾದರೂ ಬೇಸರ ಆಗಿದ್ದರೇ ಕ್ಷಮಿಸಬೇಕು ಎಂದರು.

RELATED ARTICLES  ಬ್ಲಾಕ್ ಮೈಲ್ ಪ್ರಕರಣ - ಶ್ರೀರಾಮಚಂದ್ರಾಪುರ ಮಠಕ್ಕೆ ಮತ್ತೊಂದು ಜಯ.

ನಾನು ಈ ಸ್ಥಾನಕ್ಕೆ ಚಿಕ್ಕವನು, ಆದರೇ ನನಗೆ ನೀಡಿರುವ ಸ್ಥಾನ ದೊಡ್ಡದು. ಆ ಸ್ಥಾನಕ್ಕೆ ಗೌರವ ಕೊಟ್ಟು ನನ್ನ ಕೆಲಸವನ್ನು ಮಾಡಿದ್ದೇನೆ. ನನ್ನ ಸ್ಥಾನಕ್ಕೆ ಯಾವುದೇ ಚ್ಯುಚಿ ಬಾರದಂತೆ ಕೆಲಸ ಮಾಡಿದ್ದೇನೆ. ಇಂತಹ ಸ್ಥಾನಕ್ಕೆ ನನ್ನ ಕರ್ತವ್ಯ ತೃಪ್ತಿಗೊಂಡಿದೆ ಎಂದು ಕೆ ಆರ್ ರಮೇಶ್ ಕುಮಾರ್ ಎಂದು ಹೇಳಿದರು ಎನ್ನಲಾಗಿದೆ.

RELATED ARTICLES  ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮುಕುಲ್ ರಾಯ್ ಗುಡ್ ಬೈ!

ಈ ದೇಶದ ಭ್ರಷ್ಟಾಚಾರದ ಮೂಲಕ ಚುನಾವಣಾ ವ್ಯವಸ್ಥೆ. ಈ ವ್ಯವಸ್ಥೆ ಬದಲಾವಣೆಯಾಗಬೇಕು. ಇದು ಬದಲಾವಣೆಯಾದರೇ ಮಾತ್ರ ಭ್ರಷ್ಟಾಚಾರ ನಿರ್ಮೂಲನೆಯಾಗುತ್ತದೆ. ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಕೆಲ ಲೋಪದೋಷಗಳಿವೆ. ಆ ಬಗ್ಗೆ ತಿದ್ದುಪಡಿಯಾಗುವ ಕಾರ್ಯ ನಡೆಯಬೇಕಿದೆ. ಅದಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಿ ಸರಿ ಪಡಿಸುವ ಕಾರ್ಯ ನಡೆಯಬೇಕಿದೆ. ಲೋಕಾಯುಕ್ತದಲ್ಲೂ ಕೆಲವು ಲೋಪದೋಷಗಳಿವೆ. ಆ ಬಗ್ಗೆಯೂ ಸರಿ ಪಡಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು ಎಂದು ವರದಿಯಾಗಿದೆ.