ನಮ್ಮೂರ್ ಡೆಸ್ಕ್: ಬೆಂಗಳೂರು
ಪೊಲೀಸರಿಗೆ ನೀಡುತ್ತಿರುವ ವೇತನ ಶ್ರೇಣಿ ಮತ್ತು ಸೇವಾ – ಸವಲತ್ತುಗಳು ತಮಗೂ ಸಿಗಬೇಕೆಂದು ಆಗ್ರಹಿಸಿ ಆನೆ ಕಾವಡಿಗರು, ಮಾವುತರು,ಅರಣ್ಯ ವೀಕ್ಷಕರು,ಅರಣ್ಯ ರಕ್ಷಕರು ಮತ್ತು ಉಪ ವಲಯ ಅರಣ್ಯಾಧಿಕಾರಿಗಳು ಸೇರಿ ಜುಲೈ 31ರಂದು ಒಂದು ದಿನ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ಸೈನಿಕರಂತೆ ನಾವು ಕೂಡ ಕಾಡುಗಳ್ಳರಿಂದ ಕಾಡನ್ನು , ಕಾಡು ಪ್ರಾಣಿಗಳನ್ನು ಮತ್ತು ಕಾಡು ಪ್ರಾಣಿಗಳಿಂದ ಜನರ ಜಮೀನನ್ನು ನಮ್ಮ ಜೀವ ಒತ್ತೆ ಇಟ್ಟು ದಿನದ 24 ಗಂಟೆ ಮತ್ತು 365 ದಿನವೂ ಕೂಡ ರಕ್ಷಿಸುತ್ತೇವೆ. ನಾವೂ ಕೂಡ ಹಸಿರು ಸೈನಿಕರು ಆದರೆ ನಮಗೆ ಪೊಲೀಸ್ ಇಲಾಖೆಯಲ್ಲಿ ಸಿಗುತ್ತಿರುವ ಸೌಲಭ್ಯಗಳು ಯಾಕೆ ಸಿಗುತ್ತಿಲ್ಲ ಎಂಬುವುದೇ ಅವರ ಅಳಲಾಗಿದೆ.

RELATED ARTICLES  ನಾಳೆ ಕರ್ನಾಟಕ ಬಂದ್! ಎನೇನು ಇರುತ್ತೆ? ಎನೇನು ಇರಲ್ಲ?

ಪ್ರತಿಭಟನೆಯ ಬೇಡಿಕೆಗಳು:
1.ಅರಣ್ಯ ರಕ್ಷಕರಿಗೆ ವಿದ್ಯಾಹರ್ತೆಗೆ ತಕ್ಕಂತೆ ಈಗಿರುವ ವೇತನ ಶ್ರೇಣಿ 21400-42000 ನ್ನು 27650-52650 ಗೆ ಹೆಚ್ಚಿಸುವುದು.

  1. ಅರಣ್ಯ ರಕ್ಷಕರ ಪದನಾಮವನ್ನು ಗಸ್ತು ಅರಣ್ಯ ಅಧಿಕಾರಿ (ಬೀಟ್ ಫಾರೆಸ್ಟ್ ಆಫೀಸರ್) ಎಂದು ಬದಲಾವಣೆ ಮಾಡಬೇಕು.ಮತ್ತು ಅರಣ್ಯ ವೀಕ್ಷಕ ಪದನಾಮವನ್ನು ಇಂಗ್ಲಿಷ್ ನಲ್ಲಿ ಫಾರೆಸ್ಟ್ ಅಬ್ಜರ್ವರ್ ಎಂದು ಬದಲಾವಣೆ ಮಾಡಬೇಕು.
  2. ಅರಣ್ಯ ರಕ್ಷಕರಿಂದ ಉಪವಲಯ ಅರಣ್ಯಾಧಿಕಾರಿ ಯಾಗಿ ಮುಂಬಡ್ತಿಯ ಅನುಪಾತವನ್ನು ಶೇಕಡಾ 50:50 ರಿಂದ ಶೇಕಡಾ 80:20 ರಷ್ಟು,ಅರಣ್ಯ ವೀಕ್ಷಕರಿಂದ ಅರಣ್ಯ ರಕ್ಷಕರಿಗೆ ಶೇಕಡಾ 50:50 ರಷ್ಟು ಮುಂಬಡ್ತಿಯ ಮೂಲಕ ಭರ್ತಿ ಮಾಡಿಕೊಳ್ಳಬೇಕು.
    4.ಈಗಿರುವ ರಜೆ ಭತ್ಯೆಯನ್ನು ರೂ 30 ರಿಂದ ರೂ 500 ಕ್ಕೆ ಹೆಚ್ಚಿಸಬೇಕು.
    5.ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿಗೆ ಉಚಿತ ಪಡಿತರ ಚೀಟಿ ಮತ್ತು ಕ್ಯಾಂಟೀನ್ ಸೌಲಭ್ಯ ಒದಗಿಸಬೇಕು.
  3. ಸೇವಾ ನಿರತ ಅರಣ್ಯ ಇಲಾಖಾ ಸಿಬ್ಬಂದಿಗೆ ಉನ್ನತ ಹುದ್ದೆಗಳ ನೇರ ನೇಮಕಾತಿಯಲ್ಲಿ ಶೇ 10 ರಷ್ಟು ಮೀಸಲಾತಿಯನ್ನು ನೀಡಬೇಕು.
  4. ಅರಣ್ಯ ರಕ್ಷಕರಿಗೆ ದ್ವಿಚಕ್ರ ವಾಹನವನ್ನು ನೀಡಬೇಕು.
  5. ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಏಕರೂಪ ಸಮವಸ್ತ್ರ ಜಾರಿಗೊಳಿಸಬೇಕು.
  6. ವಿವಿಧ ವೃತ್ತಗಳಲ್ಲಿ ಮುಂಬಡ್ತಿಯಲ್ಲಿ ತಾರತಮ್ಯ ವಾಗುತ್ತಿದ್ದು ,ಸದರಿ ತಾರತಮ್ಯವನ್ನು ಸರಿಪಡಿಸಿ ಏಕರೂಪ ಜೇಷ್ಟತೆ ಪಾಲಿಸಲು ನಿರ್ದೇಶನ ನೀಡಬೇಕು.
RELATED ARTICLES  ಚಳಿಗಾಲದಲ್ಲೇ ವಿದ್ಯುತ್‌ ಬರ: ಜನತೆಗೆ ಶಾಕ್

ವರದಿ: ಪ್ರೀತಮ್ ಹೆಬ್ಬಾರ್.