ದಿನಾಂಕ 11/8/17 ರಂದು ಹಿರೇಗುತ್ತಿ ಗ್ರಾಮದ ಮೊರಬದಲ್ಲಿ ಹಳ್ಳೇರ ಜಾತಿಗೆ ಸೇರಿದ ಭಾಗದಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿ 2011 ಕ್ಕೂ ಪೂರ್ವದಲ್ಲಿ ನೋಂದಣಿಯಾದ, ಇದುವರೆಗೂ ಎಲ್.ಪಿ.ಜಿ. ಗ್ಯಾಸ್ ಸಂಪರ್ಕ ಹೊಂದಿರದ ಅರ್ಹ ಬಿಪಿಎಲ್ ಕಾರ್ಡದಾರರಾದ ಯಮುನಾ ಹಳ್ಳೇರ, ಮಂಗಲಾ ಹಳ್ಳೇರ, ನಾಗಮ್ಮ ಹಳ್ಳೇರ, ಮಾದೇವಿ ಹಳ್ಳೇರ, ಸುಮಿತ್ರಾ ಬಾಂದೇಕರ, ಲಲಿತಾ ನಾಯ್ಕ, ಕುಮಾರಿ ಹರಿಕಾಂತ, ನಿರ್ಮಲಾ ಹರಿಕಾಂತ, ಜಟ್ಟಿ ಹರಿಕಾಂತ ಇವರುಗಳಿಗೆ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಸಹಕಾರದೊಂದಿಗೆ ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅರ್ಹ ಫಲಾನುಭವಿಗಳ ಮನೆಬಾಗಿಲಿಗೆ ತೆರಳಿ ಅವರಿಂದ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಗ್ಯಾಸ್ ವಿತರಕರಿಗೆ ತಲುಪಿಸುವ ಕಾರ್ಯ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಸಿಬ್ಬಂದಿವರ್ಗ ಮತ್ತು ಆ ಭಾಗದ ಬಿಜೆಪಿ ಕಾರ್ಯಕರ್ತರಿಂದ ನಡೆದಿದ್ದು ನಂತರ ಗ್ಯಾಸ್ ಏಜೆನ್ಸಿಯವರಿಂದ ಅರ್ಹ ಫಲಾನುಭವಿಗಳಿಗೆ ಮಂಜೂರಾತಿಯನ್ನು ಪಡೆದು ಪ್ರತಿ ಫಲಾನುಭವಿಗಳ ಮನೆಮನೆಗೆ ಗ್ಯಾಸ್ ಸಿಲಿಂಡರ, ಒಲೆ, ರೆಗ್ಯುಲೇಟರಗಳನ್ನು ಉಚಿತವಾಗಿ ತಲುಪಿಸಿದ್ದಲ್ಲದೇ ಅದಕ್ಕೆ ಅಗತ್ಯವಿರುವ ಲೈಟರನ್ನು ಸಹ ಟ್ರಸ್ಟ್ ವತಿಯಿಂದ ಉಚಿತವಾಗಿ ಕೊಡುವುದರ ಮೂಲಕ ಫಲಾನುಭವಿಗಳು ಹಣವ್ಯಯ, ಸಮಯ ವ್ಯರ್ಥ, ಅಲೆದಾಟವಿಲ್ಲದೇ ಈ ಯೋಜನೆಯ ಅನುಕೂಲತೆಯನ್ನು ಪಡೆದುಕೊಳ್ಳುವಂತೆ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಹಕರಿಸಿ ಯಶಸ್ವಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರೂ ಹಾಗೂ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಇದೊಂದು ಜನಪರ ಯೋಜನೆಯಾಗಿದ್ದು ಕಟ್ಟಿಗೆ ಒಲೆಗಳಿಂದ ತಾಯಂದಿರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಪ್ಪಿಸುವ ಹಾಗೂ ಉರುವಲಿಗಾಗಿ ಅರಣ್ಯನಾಶವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ವಾಸ್ಥ್ಯ ಮತ್ತು ಪರಿಸರ ರಕ್ಷಣೆಯ ಚಿಂತನೆಯೊಂದಿಗೆ ಈ ಯೋಜನೆಯು ಅನುಷ್ಠಾನಗೊಂಡಿದೆ. ಈ ಯೋಜನೆಯ ಕುರಿತು ಅಪಪ್ರಚಾರ ನಡೆಯುತ್ತಿದ್ದು ಈ ಬಗ್ಗೆ ಸಾರ್ವಜನಿಕರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು. ಮಜುನಾಥ ಜನ್ನು ಅವರು ಮಾತನಾಡಿ ಈ ಯೋಜನೆಯ ಅನುಕೂಲತೆಯನ್ನು ಸಾರ್ವಜನಿಕರು ಪಡೆಯಬೇಕು. ಇನ್ನುಳಿದ ಅರ್ಹ ಫಲಾನುಭವಿಗಳಿಗೂ ಮುಂದಿನ ದಿನಗಳಲ್ಲಿ ಈ ಯೋಜನೆಯ ಫಲ ಲಭಿಸಲಿದೆ ಎಂದರು.
ಎಲ್.ಪಿ.ಜಿ. ಗ್ಯಾಸ್ ವಿತರಕರು ಮನೆಮನೆಗೆ ಹೋಗಿ ಗ್ಯಾಸ್ ಕುರಿತಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಇನ್ನು ಹೆಚ್ಚಿನ ಸಹಕಾರದ ಅಗತ್ಯ ವಿದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಕೋರಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವಮೋರ್ಚದ ಅಧ್ಯಕ್ಷರಾದ ಮಂಜುನಾಥ ಜನ್ನು, ಮಿರ್ಜಾನ ಶಕ್ತಿಕೇಂದ್ರದ ಅಧ್ಯಕ್ಷ ವೆಂಕಟ್ರಮಣ ಕವರಿ, ವಿಷ್ಣು ಹಳ್ಳೇರ, ಪಾಂಡು ಪಟಗಾರ, ಹೊನ್ನಪ್ಪ ಹಳ್ಳೇರ, ಹುಲಿಯಾ ಹಳ್ಳೇರ, ಆನಂದು ನಾಯ್ಕ, ರಮೇಶ ಶೆಟ್ಟಿ, ರಾಮು ಕೆಂಚನ, ಲಕ್ಷ್ಮಿಧರ ನಾಯ್ಕ, ಸಣ್ಣಪ್ಪ ನಾಯ್ಕ, ಮಂಜು ಮರಾಠಿ, ಅನಂತ ಹಳ್ಳೇರ, ರಾಮು ಹಳ್ಳೇರ ಮುಂತಾದವರು ಉಪಸ್ಥಿತರಿದ್ದರು.