ಶಿರಸಿ: ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡ ಯುವಕನೋರ್ವ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕಸ್ತೂರ ಬಾ ನಗರದ ವಡ್ಡರ ಓಣಿಯಲ್ಲಿ ನಡೆದಿದೆ.

RELATED ARTICLES  ದೀಪಿಕಾ ಪಡುಕೋಣೆ ತಲೆ ಕಡಿದರೆ ಐದು ಕೋಟಿ ರೂ. ಬಹುಮಾನ !

ವಡ್ಡರ ಓಣಿಯ ವಿಷ್ಣುಪ್ರಸಾದ ವಡ್ಲೂರ (30) ಮೃತ ಯುವಕನಾಗಿದ್ದಾನೆ. ಸ್ವಪ್ನ ಇಂಡಿಸ್ಟ್ರೀಸ್ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಈತ ಎಂದಿನಂತೆ ಟಿವಿ ನೋಡಿ ಮಲಗಲು ಹೋದವನು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜಂತಿಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ ಗೊತ್ತೇ? 22/04/2019 ರ ದಿನ ಭವಿಷ್ಯ ಇಲ್ಲಿದೆ.