ಹೊನ್ನಾವರ: ಪಟ್ಟಣದ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ 2019-20 ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭ ಜು.31ಬುಧವಾರ ದಿ. ಆರ್.ಎಸ್.ಹೆಗಡೆ ಸಭಾಭವನದಲ್ಲಿ ನಡೆಯಲಿದೆ.

   ಕಾರ್ಯಕ್ರಮವನ್ನು ಹೊನ್ನಾವರ ಪೊಲೀಸ್ ವೃತ್ತ ನಿರೀಕ್ಷಕ ಚೆಲುವರಾಜ ಬಿ. ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಖ್ಯಾತ ಯಕ್ಷಗಾನ ಕಲಾವಿದ ನೀಲ್ಕೋಡ ಶಂಕರ ಹೆಗಡೆ, ಎಂ‌.ಪಿ.ಇಮ್ ಸೊಸೈಟಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ, ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್, ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಡಾ.ಎಂ.ಆರ್.ನಾಯಕ ಉಪಸ್ಥಿತರಿರಲಿದ್ದು, ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮೀ ಎಂ. ನಾಯ್ಕ ವಹಿಸಲಿದ್ದಾರೆ.

RELATED ARTICLES  ಹಿರಿಯ ಯಕ್ಷಗಾನ ಕಲಾವಿದ, ಖ್ಯಾತ ಮೂರ್ತಿ ತಯಾರಕ ಬಿ.ವಿ ಭಂಡಾರಿ ಇನ್ನಿಲ್ಲ.

  ಈ ಸಮಯದಲ್ಲಿ ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಸಂಜೀವ ವಿ. ನಾಯ್ಕ, ಕಲಾ ವಿಭಾಗ ಕಾರ್ಯದರ್ಶಿ ಅಮೋಘ ಸಾಳೇಹಿತ್ತಲ್, ಒಳಾಂಗಣ ಕ್ರೀಡಾ ಕಾರ್ಯದರ್ಶಿ ವಿಘ್ನೇಶ ಭಟ್ಕಳ, ಹೊರಾಂಗಣ ಕ್ರೀಡಾ ಕಾರ್ಯದರ್ಶಿ ಲತೇಶ ಎಂ. ನಾಯ್ಕ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

RELATED ARTICLES  ಈಗಲಾದರೂ ಪೂರ್ತಿಯಾಗುತ್ತಾ ಮೂರೂರು ರಸ್ತೆ..?