ಕುಮಟಾ : ಕರ್ನಾಟಕ‌ ರಕ್ಷಣಾ ವೇದಿಕೆ ಮೊದಲಿನಿಂದಲೂ ಜನಪರ ಕಾಳಜಿ ತೋರುತ್ತಿದ್ದು ಇದೀಗ ಅವೈಜ್ಞಾನಿಕ ಚತುಷ್ಪತ ಕಾಮಗಾರಿ ವಿರುದ್ಧ ಹೋರಾಟ ಪ್ರಾರಂಭಿಸಿದೆ.

ಕರವೇ ಜಿಲ್ಲಾಧ್ಯಕ್ಷರಾದ ಭಾಸ್ಕರ ಪಟಗಾರ ಅವರ ನೇತ್ರತ್ವದಲ್ಲಿ  ತಾಲೂಕಿನ‌ ದೇವಗಿರಿ ವ್ಯಾಪ್ತಿಯ ಐ.ಆರ್.ಬಿ ಕಛೇರಿಗೆ ಇಂದು ಕ.ರ.ವೇ ಯಿಂದ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ಈ ಸಂದರ್ಭದಲ್ಲಿ ಜನತೆಗೆ ಆಗುತ್ತಿರುವ ಅನಾನುಕೂಲತೆ ಬಗ್ಗೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆಕ್ರೋಶ ಹೊರಹಾಕಿದರು.

RELATED ARTICLES  ಮುಂಡಗೋಡದ ಇಡಗುಂಜಿ ಮಹಾಗಣಪತಿ ದೇವಸ್ಥಾನ ವತಿಯಿಂದ ಸಾಹಿತಿ ಉಮೇಶ ಮುಂಡಳ್ಳಿಯವರಿಗೆ ಸನ್ಮಾನ

ಅವೈಜ್ಞಾನಿಕ ಕಾಮಗಾರಿಯಿಂದ ಅದೆಷ್ಟೋ ಜೀವಗಳು ಬಲಿಯಾಗಿವೆ, ಐ ಆರ್.ಬಿ ಯವರು ಜನತೆಯ ಪ್ರಾಣವನ್ನೂ ಬಲಿ ಪಡೆಯುವ ಟೆಂಡರ್ ಪಡೆದಿರುವಂತಿದೆ ಎಂದು ಅವರು ಜನತೆಯ ನೋವನ್ನು ತಮ್ಮ‌ಮಾತುಗಳ ಮೂಲಕ ಹೊರಹಾಕಿದರು.

RELATED ARTICLES  ಸಂಸ್ಕೃತವು ವಿಶ್ವಮಾನ್ಯವಾದ ಭಾಷೆ: ವಿನೋದ ನಾಯಕ

   ರಸ್ತೆಯ ದುರಸ್ತಿ,ಮಾರ್ಗಸೂಚಿ ಹಾಗೂ ಇನ್ನಿತರ ಅನೇಕ ಸಮಸ್ಯೆಗಳನ್ನು ಒಂದುವಾರದೊಳಗೆ ಮಾಡುವ ಲಿಖಿತ ಭರವಸೆಯನ್ನು ಐ.ಆರ್.ಬಿ ಯ  ಮುಖ್ಯ ಅಧಿಕಾರಿಗಳಿಂದ  ಕುಮಟಾ ತಹಶಿಲ್ದಾರರು ,ಸಿ.ಪಿ.ಐ ಹಾಗೂ ಪಿ.ಎಸ್.ಐ ಯವರ ಸಮ್ಮುಖದಲ್ಲಿ ಸ್ವೀಕರಿಸಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ಎಸ್.ಟಿ.ನಾಯ್ಕ, ಕೃಷ್ಣಾನಂದ ವರ್ಣೇಕರ್ ಇನ್ನಿತರರು ಇದ್ದರು.