ಕುಮಟಾ: ವಿನಾಯಕ ಬ್ರಹ್ಮೂರು ನಿರ್ದೇಶನದ ಖ್ಯಾತ ಕಲಾವಿದ ರವಿ ಮುರೂರು ಅವರ ಸಂಗೀತದಲ್ಲಿ ಮೂಡಿಬಂದ ಕಡಲತೀರದ ತಂಗಾಳಿಯಲ್ಲಿ ಎಂಬ ನೂತನ ಆಲ್ಬಮ್ ಸಾಂಗ್ ಯೂಟ್ಯೂಬ್‍ನಲ್ಲಿ ಈಗ ಬಿಡುಗಡೆಗೊಂಡು ಜನ ಮೆಚ್ಚುಗೆ ಗಳಿಸಿದೆ.

ಉತ್ತರಕನ್ನಡ ಜಿಲ್ಲೆಯ ಪ್ರತಿಭೆಗಳಿಂದ ನಿರ್ಮಾಣವಾದ ಈ ಸುಮಧುರವಾದ ವಿಡಿಯೋ ಸಾಂಗ್ ಎಲ್ಲರ ಮೆಚ್ಚುಗೆಯನ್ನು ಪಡೆಯುತ್ತಿದೆ. ಈಗಾಗಲೇ ಸಾಕಷ್ಟು ಕಿರುಚಿತ್ರ, ಸೆಮಿಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ವಿನಾಯಕ ಬ್ರಹ್ಮೂರು, ತಮ್ಮ ಬ್ರಹ್ಮ ಕ್ರಿಯೇಶನ್ಸ್ ಮೂಲಕ ಈ ಆಲ್ಬಮ್ ಸಾಂಗ್ ನಿರ್ಮಾಣ ಮಾಡಿದ್ದಾರೆ. ಕಲ್ಪನಾ ಹೆಗಡೆ ಅವರ ಗೀತೆ, ಸಾಹಿತ್ಯ ಒಂದೆಡೆ ಇಷ್ಟವಾದರೆ, ರವಿ ಮುರೂರು ಅವರ ಸಂಗೀತ ಮುದ ನೀಡುತ್ತದೆ. ಗೋಪಿ ಜಾಲಿ ಕ್ಯಾಮೆರಾ ಕೈಚಳಕ ಮೈನವಿರೇಳಿಸುವಂತಿದೆ. ಜಿಲ್ಲೆಯ ಸುಂದರ ಪರಿಸರಗಳನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ರಾಜೇಶ ಗಾವಡಿ ಇವರಿಗೆ ಸಾಥ್ ನೀಡಿದ್ದಾರೆ.

RELATED ARTICLES  ಬಾಡಿಗೆ ಮನೆಯಲ್ಲಿ ವೇಲ್ ಬಿಗಿದುಕೊಂಡು ಸ್ಯೂಸೈಡ್ ಮಾಡಿಕೊಂಡ ನರ್ಸ

ಚಿಕ್ಕ ವಯಸ್ಸಿನಿಂದಲೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದ ಕಲ್ಪನಾ ಹೆಗಡೆ ಈಗಾಗಲೇ ಹತ್ತು ಹಲವಾರು ಪುಸ್ತಕಗಳನ್ನ ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಅವರು ಈ ಆಲ್ಬಮ್ ಸಾಂಗ್‍ಗೆ ನಿರ್ಮಾಪಕಿಯೂ ಆಗಿದ್ದಾರೆ. ಇನ್ನು ಶಿರಸಿಯ ಸುಮಾ ಶೆಟ್ಟಿ ಈ ಆಲ್ಬಮ್ ಸಾಂಗ್‍ನಲ್ಲಿ ನಟಿಸಿದ್ದು ಗಮನ ಸೆಳೆದಿದ್ದಾರೆ. ಅನುಷಾ ಭಟ್ಟ ಅವರ ಗಾಯನಕ್ಕೆ ವೀಕ್ಷಕರಿಗೆ ಮುದ ನೀಡಿದೆ. ಕಡ್ಲೆ ಬೀಚ್, ಹೊಲನಗದ್ದೆ ಬೀಚ್ ಹಾಗೂ ಬ್ರಹ್ಮೂರಿನಲ್ಲಿ ಶೇಕಡಾ 70ರಷ್ಟು ಚಿತ್ರೀಕರಣ ಕಂಡಿದೆ.

RELATED ARTICLES  ಮಿರ್ಜಾನಿನ ಸಮೀಪ ಬೈಕ್ ಅಪಘಾತ : ಸವಾರನ ಕೈ ಕಾಲಿನ ಮೇಲೆ ಹರಿದ ಲಾರಿ.