ಕುಮಟಾ: ಹವ್ಯಕ ರತ್ನ ಬಿರುದಾಂಕಿತ ದಿವಂಗತ ಡಾ.ಟಿ.ಟಿ ಹೆಗಡೆಯವರ ಶ್ರದ್ಧಾಂಜಲಿ ಸಭೆಯನ್ನು ಜು. 31 ರಂದು ಬುಧವಾರ ಸಾಯಂಕಾಲ 4 ಗಂಟೆಗೆ ಪಟ್ಟಣದ ಹವ್ಯಕ ಸಭಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ಹವ್ಯಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಮ್.ಎಮ್ ಹೆಗಡೆ ಹೊಲನಗದ್ದೆ ತಿಳಿಸಿದ್ದಾರೆ.

ವೈದ್ಯವೃತ್ತಿಯ ಮೂಲಕ ಸಮಾಜದ ಎಲ್ಲ ಸ್ತರದ ಜನರ ಸೇವೆ ಮಾಡಿದ, ಅಡಿಕೆ ಬೆಳೆಗಾರರ ಹಿತ ಕಾಯುವಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ, ಹವ್ಯಕ ಸಭಾಮಂಟಪ, ವೃದ್ಧಾಶ್ರಮ, ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ, ಶಂಕರ ತತ್ವ ಪರಿಪಾಲಕ, ಭಾರತೀಯ ಜನತಾ ಪಕ್ಷ ಹಾಗೂ ಆರ್‍ಎಸ್‍ಎಸ್ ಮೂಲಕ ಸಮಾಜದ ಸೇವೆ ಮಾಡಿದ, ಛಲವಾದಿ, ಪ್ರಾಮಾಣಿಕ, ನಿಸ್ವಾರ್ಥ ಸೇವೆಗೆ ಹೆಸರಾದ ಡಾ.ಟಿ.ಟಿ ಹೆಗಡೆಯವರಿಗೆ ಶ್ರದ್ಧಾಂಜಲಿ ಸಲ್ಲಿಸುವದು ನಮ್ಮ ಆದ್ಯ ಕರ್ತವ್ಯ. ಅವರ ನಿಧನ ಹವ್ಯಕ ಸಮಾಜಕ್ಕೆ ದೊಡ್ಡ ನಷ್ಟ ಉಂಟು ಮಾಡಿದೆ. ಹವ್ಯಕ ಸಮಾಜ ಬಾಂಧವರು, ಡಾ.ಟಿ.ಟಿ ಹೆಗಡೆ ಅಭಿಮಾನಿ ಬಳಗದವರು, ಸಾರ್ವಜನಿಕರು ಈ ಸಭೆಗೆ ಆಗಮಿಸಿ, ಅಗಲಿದ ಮಹಾ ಚೇತನಕ್ಕೆ ಶೃದ್ಧಾಂಜಲಿ ಸಲ್ಲಿಸಬೇಕೆಂದು ಅವರು ವಿನಂತಿಸಿದ್ದಾರೆ.

RELATED ARTICLES  ಬೈಕ್ ಸ್ಕಿಡ್ : ಸವಾರ ಸಾವು