ಭಟ್ಕಳ: ಇಲ್ಲಿನ ಹೇಬಳೆ ಗ್ರಾಮದ ಹೊನ್ನೆಗದ್ದೆ ಸಮುದ್ರ ತೀರದಲ್ಲಿ ಅಕ್ರಮವಾಗಿ ಉಸುಕನ್ನು ತೆಗೆದು ಚೀಲದಲ್ಲಿ ತುಂಬಿರುವ ಖಚಿತ ಮಾಹಿತಿಯನ್ನಾಧಿರಿಸಿ ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ ಭಟ್ಕಳ ಆದೇಶದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

RELATED ARTICLES  ಕಾರವಾರದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಸಂಪನ್ನ.

ಸಹಾಯ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ,ತಹಶೀಲ್ದಾರರ ವಿ.ಪಿ.ಕೊಟ್ರಳ್ಳಿ ಅವರ  ಆದೇಶದಂತೆ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಲಾಯಿತು. ದಾಳಿಯಲ್ಲಿ 100 ಕ್ಕೂ ಅಧಿಕ ಉಸುಕಿನ ಚೀಲವನ್ನು ವಶಕ್ಕೆ ಪಡೆದು ದಾಸ್ತಾನು ಮಾಡಿ ಸಂಗ್ರಹಿಸಿಟ್ಟಿದ ಉಸುಕಿನ ಚೀಲವನ್ನೆಲ್ಲ ಹರಿದು ಹಾಕಿ ಉಸುಕನ್ನು ನೆಲಸಮ ಮಾಡಲಾಯಿತು.ಆರೋಪಿಗಳು ಪರಾರಿಯಾಗಿದ್ದಾರೆ.

RELATED ARTICLES  ಮನೆಗೆ ನುಗ್ಗಿ ಮಗುವನ್ನು ಹೊತ್ತೊಯ್ಯಲು ಯತ್ನಿಸಿದ ಚಿರತೆ..? ಸ್ವಲ್ಪದರಲ್ಲಿಯೇ ಮಗು ಬಚಾವ್..!