ಕಾರವಾರ: ಕಳೆದ ಲೋಕಸಭೆ ಚುನಾವಣೆಯ ಬಳಿಕ ಕಾರವಾರ ವಲಯ ವ್ಯಾಪ್ತಿಯಲ್ಲಿ ಅಬಕಾರಿ ಅಧಿಕಾರಿಗಳು ವಿವಿಧ ಭಾಗದಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡ ಗೋವಾದ ಅಕ್ರಮ ಮದ್ಯವನ್ನು ಮಂಗಳವಾರ ಇಲ್ಲಿನ ಅಬಕಾರಿ ಕಚೇರಿಯ ಹಿಂಭಾಗದಲ್ಲಿ ಅಬಕಾರಿ ಇಲಾಖೆ ಉಪಾಯುಕ್ತ ಎಲ್. ಎ. ಮಂಜುನಾಥ ಅವರು ಸಮ್ಮುಖದಲ್ಲಿ ನಾಶ ಪಡಿಸಲಾಯಿತು.

RELATED ARTICLES  ಕಾರು ಹಾಗೂ ಪ್ಯಾಸೆಂಜರ್ ಆಟೋ ನಡುವೆ ನಡೆದ ಅಪಘಾತ

ಕಾರವಾರ ವಿಭಾಗದಲ್ಲಿ ವಿವಿಧ ಕಡೆಗಳಲ್ಲಿ ಒಟ್ಟು 109 ಪ್ರಕರಣಗಳನ್ನು ದಾಖಲಿಸಿಕೊಂಡು 22,50,866 ರೂ. ಮೌಲ್ಯದ ವಿವಿಧ ಬ್ರ್ಯಾಂಡಿನ ಮದ್ಯ, ಸ್ಪಿರಿಟ್, ಬಿಯರ್ ಸೇರಿದಂತೆ ವಿವಿಧ ಸಾರಾಯಿಗಳನ್ನು ಅಧಿಕಾರಿ ಅಧಿಕಾರಿಗಳು ಗಟಾರಕ್ಕೆ ಚೆಲ್ಲಿದರು. ಈ ಸಂದರ್ಭದಲ್ಲಿ ಗೋವಾ ಮದ್ಯ 3319.075, ಗೋವಾ ಫೆನ್ನಿ 5110.130, ಗೋವಾ ಬಿಯರ್ 224.600 ಸೇರಿ ಒಟ್ಟೂ 8654.442 ಲೀಟರ್ ಮದ್ಯ ನಾಶ ಮಾಡಲಾಯಿತು.

RELATED ARTICLES  ಮಾರ್ಚ.13 ರವರೆಗೆ ಮಳೆ ಸಾಧ್ಯತೆ : ಇಲಾಖೆಯ ಸೂಚನೆ