ಶಿರಸಿ: ಶಿರಸಿಯ ಆಳ್ವಾ ಫೌಂಡೇಶನ್ ಸಹಯೋಗದಲ್ಲಿ ಮೆರಿಟ್ಯೂಡ್ ಉದ್ಯೋಗ್ ಆಯೋಜನೆಯಲ್ಲಿ ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಆ.3 ರಂದು ಬೃಹತ್ ಉದ್ಯೋಗ ಮೇಳ ಆಯೋಜನೆಗೊಂಡಿದೆ.

ಉದ್ಯೋಗ ಮೇಳಕ್ಕೆ ಸಂಬಂಧಿಸಿ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅರುಣೋದಯ ಸಂಸ್ಥೆಯ ಸತೀಷ ನಾಯ್ಕ್, ಉದ್ಯೋಗ ಮೇಳವನ್ನು ಆಳ್ವಾ ಫೌಂಡೇಶನ್‌ನ ನಿವೇದಿತ್ ಆಳ್ವಾ ಉದ್ಘಾಟಿಸಲಿದ್ದಾರೆ. ಉತ್ತರಕನ್ನಡ ಹಾಗೂ ಹೊರ ಜಿಲ್ಲೆಗಳಿಂದ ಸುಮಾರು 2,500ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿಷ್ಠಿತ 25ಕ್ಕೂ ಅಧಿಕ ಕಂಪನಿಗಳಲ್ಲಿ 1500ದಷ್ಟು ಉದ್ಯೋಗಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು.

RELATED ARTICLES  ಜುಲೈ 15 ರ ವರೆಗೆ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ

ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ಪಡೆದು ಪ್ರತಿಭಾವಂತ ಯುವಜನತೆಯ ಒಳಿತಿಗಾಗಿ ಮೇಳ ಆಯೋಜನೆ ಮಾಡಲಾಗಿದೆ. ಮೇಳದಲ್ಲಿ ಉದ್ಯೋಗ ದೊರಕದ ಯುವಕರಿಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾದ ವಿವಿಧ ಯೋಜನೆಯಡಿಯಲ್ಲಿ ಬೃಹತ್ ಉದ್ದಿಮೆಗಳ ಉಚಿತ ತರಬೇತಿ ನೀಡಲಾಗುತ್ತದೆ. ರಾಜ್ಯದ ಹಾಗೂ ಹೊರ ರಾಜ್ಯಗಳ ಕಂಪನಿಗಳು ಭಾಗವಹಿಸುತ್ತಿರುವದರಿಂದ ಉದ್ಯೋಗ ಮೇಳದ ಪ್ರಯೋಜನ ಪಡೆಯಲು ಇಚ್ಛಿಸುವವರು ತಮ್ಮ 10 ಈಚೆಗಿನ ಬಯೋಡೆಟಾದೊಂದಿಗೆ ಮೇಳದಲ್ಲಿ ಪಾಲ್ಗೊಳ್ಳಬೇಕು. ಹೆಚ್ಚಿನ ವಿವರಗಳಿಗೆ 08384-234513 ಸಂಪರ್ಕಿಸಬಹುದಾಗಿದೆ ಎಂದರು.

RELATED ARTICLES  ಕ್ಯಾಂಪಸ್ ಸಂದರ್ಶನ ನಾಳೆ.