ಶಿರಸಿ : ನಗರದ ಗಾಯತ್ರಿ ಬಳಗದಲ್ಲಿ ಈ ತಿಂಗಳ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ರಮಣ ಮಹರ್ಷಿಗಳ ಕುರಿತು ಪ್ರವಚನ ನಡೆಯಿತು.

ಗೋಕರ್ಣದ ವೇ. ವಿಷ್ಣು ಸಭಾಹಿತ ಪ್ರವಚನ ನೀಡಿ,ಲೋಕ ಕಲ್ಯಾಣಕ್ಕಾಗಿ ಅಜ್ಞಾನ ಅಂಧಕಾರವನ್ನು ಅಳಿಸುವದರ ಸಲುವಾಗಿ ಅರುಣಾಚಲದ ಶ್ರೀ ರಮಣ ಮಹರ್ಷಿಗಳು ಸಂದೇಶ ನೀಡಿದ್ದಾರೆ. ಶ್ರೀ ರಮಣರು ನಮ್ಮ ಹೃದಯದಂಗಳವನ್ನು ವಿಕಸಿಸುವಂತೆ ಮಾಡಿದ್ದಾರೆ. ಅವರ ಬಳಿಯಲ್ಲಿ ಅಸಂಖ್ಯ ಸಂಗತಿಗಳು, ಸಂದೇಹಗಳು ಪರಿಹಾರವಾಗುತ್ತಿದ್ದವು. ಶ್ರೀ ರಮಣ ಮಹರ್ಷಿಗಳು ಆತ್ಮೀಯ ಅಮೃತರು, ಮಹಾಪುರುಷರ ಸತ್ಸಂಗವನ್ನು, ಮುಮುಕ್ಷ ತ್ವವನ್ನು ತಿಳಿಸಿದವರು. ಅವಿದ್ಯೆ, ಅಜ್ಞಾನ ಮಾಯೆಯಿಂದಾಗಿ ನಮ್ಮತನ ನಮಗೆ ಕಾಣುತ್ತಿಲ್ಲ, ರಮಣರು ಮಹಾಮಹಿಮರಾಗಿದ್ದರು ಎಂದರು.

RELATED ARTICLES  ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ 120 ಜನರಿಗೆ ಕೊರೋನಾ ಪಾಸಿಟೀವ್..!