ಕುಮಟಾ : ತಾಲೂಕಿನ ಮಣಕಿ ಸಮೀಪ ಸರಕಾರಿ ಶಾಲೆಯ ಎದುರು 11KV ಕರೆಂಟ್ ಲೈನ್ ಹರಿದು ಬೀಳುವ ಸ್ಥಿತಿಯಲ್ಲಿದ್ದು,ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ ತೋರುತ್ತಿದ್ದಾರೆ.
ಇದರ ಪಕ್ಕದಲ್ಲೇ ಸರಕಾರಿ ಶಾಲೆಯಿದ್ದು, ಶಾಲಾಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹೆದರುತ್ತಿದ್ದಾರೆ.

ಹಲವು ದಿನಗಳಿಂದ KEB ಗಮನಕ್ಕೆ ತಂದರೂ ಯಾರೊಬ್ಬರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವುದು ಊರ ಜನರ ಆರೋಪವಾಗಿದೆ.ಇದು ಮೂರುರು ಗ್ರಾಮಕ್ಕೆ ಹೋಗುವ 11KV ಲೈನ್ ಎನ್ನಲಾಗುತ್ತಿದ್ದು ಇನ್ನೆರಡು ದಿನಗಳಲ್ಲಿ ಹರಿದು ಬಿಳುವ ಸ್ಥಿತಿಯಲ್ಲಿದೆ.ಒಂದು ವೇಳೆ ಈ ಲೈನ್ ಹರಿದು ಬಿದ್ದು ಏನಾದರು ಅನಾಹುತ ಸಂಬಿವಿಸಿದರೆ ಇದಕ್ಕೆ ನೇರವಾಗಿ ಕಮಟಾ KEB ಘಟಕವೇ ಹೊಣೆಯಾಗಿರುತ್ತದೆ.

RELATED ARTICLES  ವಿಜ್ಞಾನ ಬೋಧನಾ ಶಿಕ್ಷಕರ ಸಂಘ : ನೂತನ ಪದಾಧಿಕಾರಿಗಳ ನೇಮಕ ಮತ್ತು ಸನ್ಮಾನ
IMG 20190731 WA0002 1

ಮೂರು ದಿನಗಳಿಂದ ಗಮನಕ್ಕೆ ತರುತ್ತಿದ್ದರು ಗೊತ್ತಿದ್ದು ಗೊತ್ತಿಲ್ಲದಂತೆ ವರ್ತಿಸುತ್ತಿರುವ ಇಂತವರ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ತಕ್ಷಣ ದುರಸ್ತಿ ಪಡಿಸುವಂತೆ ತಿಳಿಸಿದರೆ ಮುಂದಾಗುವ ಅನಾಹುತ ತಪ್ಪಿಸಬಹುದೇನೋ ಎಂಬುದು ನಮ್ಮ ಅನಿಸಿಕೆಯಾಗಿದೆ.
ಈ ಶಾಲೆಗೆ ಹೋಗುವ ಮಕ್ಕಳ ದಿನವಿಡಿ ಈ ರಸ್ತೆಯಲ್ಲೇ ಸಂಚಿಸುತ್ತಿದ್ದು ಏನಾದರು ಅನಾಹುತ ಸಂಭವಿಸುವ ಮೊದಲು ತಕ್ಷಣ ಸರಿಪಡಿಸಲಿ.ಮಾನ್ಯ ಶಾಸಕ ದಿನಕರ ಶೆಟ್ಟಿಯವರಾಾದರೂ ಇದರ ಬಗ್ಗೆ ಗಮನ ಹರಿಸಿ ಜನರಿಗಾಗುವ ತೊಂದರೆ ತಪ್ಪಿಸಬೇಕಿದೆ.

RELATED ARTICLES  ಸಿಐಟಿಯು ವತಿಯಿಂದ ಇದೇ 14ರಂದು ಬೆಂಗಳೂರಿನಲ್ಲಿ ಬೃಹತ್‌ ಹೋರಾಟ