ಕುಮಟಾ: ತಾಲೂಕಿನ‌ ಹೊಲನಗದ್ದೆಯಲ್ಲಿ “ಸಾರ್ಥಕ ಸೇವೆಗೆ ಅಭಿಮಾನದ ಸನ್ಮಾನ ” ಕಾರ್ಯಕ್ರಮ ನಡೆಯಿತು. ಹೊಲನಗದ್ದೆ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮುಖ್ಯಾಧ್ಯಾಪಕರಾಗಿ ಸಾರ್ಥಕ ಸೇವೆ ಸಲ್ಲಿಸಿದ ಗಣಪತಿ. ಡಿ.ನಾಯ್ಕರವರನ್ನು ಎಸ್.ಡಿ.ಎಮ್.ಸಿ ಹಾಗೂ ಶಿಕ್ಷಕ ವೃಂದದ ಪರವಾಗಿ ಸನ್ಮಾನಿಸಲಾಯಿತು. ಅವರಿಗೆ ಚಿನ್ನದ ಉಂಗುರ ತೊಡಿಸಿ ನಿವೃತ್ತಿಯ ಬದುಕು ಬಂಗಾರವಾಗಲಿ ಎಂದು ಹಾರೈಸಲಾಯಿತು. ವಿದ್ಯಾರ್ಥಿಗಳು ಹಾಗೂ ಪಾಲಕರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ.ಯ ನಿಕಟಪೂರ್ವ ಅಧ್ಯಕ್ಷರಾದ ದೀಪಾ ಹಿಣಿಯವರನ್ನು ಸನ್ಮಾನಿಸಲಾಯಿತು.

RELATED ARTICLES  "ಪ್ರೀತಿ"ಯ ಕವಯತ್ರಿ ಕನ್ನಿಕಾ ಹೆಗಡೆ ಇನ್ನು ಇತಿಹಾಸ ಮಾತ್ರ.

ಹೊಲನಗದ್ದೆ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪ್ರದೀಪ ನಾಯಕ ರವರು ಸನ್ಮಾನಿತರ ಸಾಧನೆಯ ಕುರಿತು ಮಾತನಾಡಿ ಇವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ಎಸ್ ಡಿ ಎಮ್ ಸಿ ಯ ನೂತನ ಅಧ್ಯಕ್ಷರಾದ ವಾಸುದೇವ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಹೊಲನಗದ್ದೆ ಶಾಲೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಇವರ ಪಾತ್ರ ಮುಖ್ಯವಾದದ್ದು. ನಮಗೆ ಇವರ ಕಾರ್ಯವೈಖರಿಯೇ ಮಾರ್ಗದರ್ಶಿ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣಪತಿ ನಾಯ್ಕರವರು ತನ್ನ ಸೇವಾವಧಿಯ ಅನುಭವವನ್ನು ಹಂಚಿಕೊಂಡರು. ದೀಪಾ ಹಿಣಿ ತನಗೆ ಸಹಕರಿಸಿದವರನ್ನು ಸ್ಮರಿಸಿದರು. ಶಿಕ್ಷಕಿ ಶ್ಯಾಮಲಾ ಬಿ ಪಟಗಾರ ಅನಿಸಿಕೆ ವ್ಯಕ್ತ ಪಡಿಸಿದರು. ಮಂಗಲಾ ನಾಯ್ಕ ಸ್ವಾಗತಿಸಿದರು.

RELATED ARTICLES  ನೂತನ ಜಿಲ್ಲಾಧಿಕಾರಿಯಾಗಿ ಗಂಗೂಬಾಯಿ ಮಾನಕರ್.

ರವೀಂದ್ರ ಭಟ್ಟ ಸೂರಿ ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲಾ ಎಮ್ ಪಟಗಾರ ವಂದಿಸಿದರು. ಶಾಲಾ ಎಸ್.ಡಿ.ಎಮ್.ಸಿ.ಯ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಅಕ್ಷರದಾಸೋಹ ಸಿಬ್ಬಂದಿ ಹಾಗೂ ಪಾಲಕರು ಮಕ್ಕಳು ಹಾಜರಿದ್ದರು.