ಕಳೆದ‌ 2017ರಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ಪರೇಶ್ ಮೇಸ್ತಾ ಗಲಭೆ ಪ್ರಕರಣ ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ನಡೆದ ಗಲಭೆ ಸಂಬಂಧಿಸಿ ಸುಮಾರು ಎರಡು ಸಾವಿರಕ್ಕೂ ಅಧಿಕ ಯುವಕರ ಮೇಲೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ಹಾಗೂ ಜಿಲ್ಲೆಯ ಬಿಜೆಪಿ ಶಾಸಕರಾಗಿರುವ ದಿನಕರ ಶೆಟ್ಟಿ, ಸುನೀಲ್ ನಾಯ್ಕ, ಅವರು ಯುವಕರ ಮೇಲಿರುವ ಎಲ್ಲಾ ಕೇಸ್ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಯಡಿಯ್ಯೂರಪ್ಪ ಅವರಿಗೆ ಪತ್ರ ಬರೆದಿದ್ದರು.

RELATED ARTICLES  ನಿರಂತರ ಓದು ಮತ್ತು ಕ್ರೀಯಾಶೀಲತೆ ಸಾಧನೆಯ ಮೊದಲ ಮೆಟ್ಟಿಲು : ಪ್ರಸನ್ನ ಭಟ್ಟ ಹಿಲ್ಲೂರು

ಇಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಯಡಿಯ್ಯೂರಪ್ಪ ಅವರು ಪರೇಶ್ ಮೇಸ್ತಾ ಗಲಭೆ ಪ್ರಕರಣದಲ್ಲಿ ಯಾವೇಲ್ಲಾ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಲ್ಲವನ್ನು ಹಿಂದಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು ಎನ್ನಲಾಗಿದೆ. ಸಿಎಂ ಅವರ ಸೂಚನೆಯ ಮೇಲೆ ಎಲ್ಲಾ ಕ್ರಮ ತೆಗೆದುಕೊಂಡಿರುವ ಪೊಲೀಸರು ಪರೇಶ್ ಮೇಸ್ತಾ ಗಲಭೆ ಪ್ರಕರಣ ಹಾಗೂ ಮಂಗಳೂರು ಹಾಗೂ ಕೊಡಗು ಪ್ರಕಣವನ್ನು ಹಿಂದೆ ಪಡೆದಿರುವ ಬಗ್ಗೆ ಆದೇಶಿಸಲಾಗಿದೆ.

RELATED ARTICLES  ಅಂಕೋಲಾ ಶೆಟಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಲನ ಸಂಪನ್ನ