ರಾಜ್ಯದ ಬಿಜೆಪಿ ಸರಕಾರ ಮುಂದಿನ ಪೂರ್ತಿ ನಾಲ್ಕು ವರ್ಷಗಳ  ಅವಧಿಯನ್ನು ಯಶಸ್ವಿಯಾಗಿ ಪೂರೈಸಲೆಂದು ಮತ್ತು  ಕುಮಟಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ದಿನಕರ ಶೆಟ್ಟಿಯವರಿಗೆ ನೂತನ ಸರಕಾರದಲ್ಲಿ ಸಚಿವಸ್ಥಾನ ಸಿಗಲೆಂದು  ಪ್ರಾರ್ಥಿಸಿ ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು . 

ಕರ್ನಾಟಕ ರಾಜ್ಯ ಸ್ಥಾಪನೆಯದಾಗಿನಿಂದ ಈವರೆಗೆ ಕುಮಟಾ ಕ್ಷೇತ್ರಕ್ಕೆ ಸಚಿವಸ್ಥಾನ ಸಿಗಲಿಲ್ಲ ,  ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗಿ , ಕಳೆದ ೩೦ ವರ್ಷಗಳಿಂದ ಜನತೆಯ ನಾಡಿಮಿಡಿತವನ್ನು ಅರಿತು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಶ್ರೀ ದಿನಕರ ಶೆಟ್ಟಿಯವರಿಗೆ ಸಚಿವ ಸ್ಥಾನ ಸಿಗಬೇಕೆಂಬ ಬೇಡಿಕೆ  ಈಡೇರಬೇಕು ಎಂದು ಸೇರಿದ್ದ ಎಲ್ಲ ಮುಖಂಡರು, ಕಾರ್ಯಕರ್ತರು ಪ್ರಾರ್ಥಿಸಿದರು .   

RELATED ARTICLES  1-9ನೇ ತರಗತಿಗಳಿಗೆ ಪರೀಕ್ಷೆ ಇಲ್ಲ : ಮೌಲ್ಯಾಂಕನ ವಿಶ್ಲೇಷಣಾ ಫಲಿತಾಂಶ

ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀ ದಯಾ ನಾಯ್ಕ , ಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಶ್ರೀ ವಸಂತ ಶೆಟ್ಟಿ, ಶ್ರೀ ಚಂದ್ರಶೇಖರ ನಾಯ್ಕ, ಶ್ರೀ ಪ್ರಸನ್ನ ನಾಯ್ಕ,  ತಾ ಪಂ ಸದಸ್ಯರಾದ ಶ್ರೀ ಮಹೇಶ ಶೆಟ್ಟಿ , ಗ್ರಾ ಪಂ ಸದಸ್ಯರಾದ ಶ್ರೀ ಗಣಪತಿ ಗೌಡ, ಶ್ರೀ  ರಮೇಶ ಪ್ರಸಾದ, ಶ್ರೀ ಗಣಪತಿ ನಾಯ್ಕ,  ಶ್ರೀಮತಿ ಸುಮನಾ ಗೌಡ  ಹಾಗೂ ನೂರರು ಕಾರ್ಯಕರ್ತರು ಉಪಸ್ಥಿತರಿದ್ದರು . ಶ್ರೀ ಮಹೇಶ ಶೆಟ್ಟಿಯವರು ಕಾರ್ಯಕ್ರಮವನ್ನು ಸಂಘಟಿಸಿದ್ದರು . ಶ್ರೀ ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಪ್ರಸಾದ ವಿತರಿಸಿ ಶುಭಹಾರೈಸಿದರು . 

RELATED ARTICLES  ಶಿರಸಿಯಲ್ಲಿ ಅರ್ಥಪೂರ್ಣವಾಗಿ ಆಚರಣೆಗೊಂಡಿತು ಬಂಗಾರಪ್ಪನವರ ಜನ್ಮದಿನ