ಅಂಕೋಲಾ : ಜುಲೈ 31 ರಂದು ಜನಶಿಕ್ಷಣ ಸಂಸ್ಥಾನ ಕಾರವಾರ ಮತ್ತು ಶ್ರೀ ಶಾರದಾ ಶಿಕ್ಷಣ ಸಂಸ್ಥೆ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ‘ಸ್ವಚ್ಚತಾ ಪಕ್ವಾಡಾ” ಕಾರ್ಯಕ್ರಮವನ್ನು ಅಂಕೋಲಾ ತಾಲೂಕಿನ ಪುರಲಕ್ಕಿಬೇಣ ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು.

ವಿದ್ಯಾರ್ಥಿಗಳ ಸ್ವಾಗತಗೀತೆ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಂಜೀವ ಎ ನಾಯ್ಕ ಉಪವಲಯ ಅರಣ್ಯಾಧಿಕಾರಿಗಳು ಅಂಕೋಲಾ ಇವರು ವಹಿಸಿ ಅರಣ್ಯ ಸಂರಕ್ಷಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗ್ರತಿ ಮೂಡಿಸಿದರು.

RELATED ARTICLES  ಮಾಳ್ಕೋಡ್ ಗ್ರಾಮಸ್ಥರಿಂದ ಪ್ರಧಾನಮಂತ್ರಿ ಕೊರೋನಾ ನಿಧಿಗೆ ಧನ ಸಹಾಯ

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಉಷಾ ದುರ್ಗೆಕರ ಪ್ರೋಗ್ರಾಂ ಆಫೀಸರ್ ಜನಶಿಕ್ಷಣ ಸಂಸ್ಥಾನ ಕಾರವಾರ ಇವರು ಉಪಸ್ಥಿತರಿದ್ದು ಪರಿಸರ ಮಾಲಿನ್ಯ ತಡೆಯಲು ತ್ಯಾಜ್ಯ ವಸ್ತುಗಳ ಪುನರ್‍ಬಳಕೆ ಮಾಡುವ ಕುರಿತು ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದಲ್ಲಿ ಇನ್ನಿತರ ಅತಿಥಿಗಳಾಗಿ ಶ್ರೀ ಮಂಗೇಶ ಟಿ.ಆಗೇರ ಪುರಲಕ್ಕಿಬೇಣ ವಾರ್ಡ ಸದಸ್ಯರು ಪಟ್ಟಣ ಪಂಚಾಯತ ಅಂಕೋಲಾ ಹಾಗೂ ಶ್ರೀ ಸಂತೋಷ ಎನ್.ನಾಯ್ಕ ಅಧ್ಯಕ್ಷರು ಶ್ರೀ ಶಾರದಾ ಶಿಕ್ಷಣ ಸಂಸ್ಥೆ ಅಂಕೋಲಾ ಇವರು ಉಪಸ್ಥಿತರಿದ್ದರು. ಸಮುದಾಯ ಭವನದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಕೊನೆಯದಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಗಿಡಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು.

RELATED ARTICLES  ಪ್ರಕ್ರತಿಯ ಉಳಿವಿಗಾಗಿ 6 ಸಾವಿರ ಕಿ.ಮೀ ಹೊರಟ ಸಾಕ್ಷಿ ಹೆಗಡೆ.