ಕುಮಟಾ: ಇಂದು ಕುಮಟಾದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಂಡಲದ ವತಿಯಿಂದ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಡಾ. ಟಿ.ಟಿ ಹೆಗಡೆಯವರ ಸ್ಮರಣೆ ಹಾಗೂ ಅವರಿಗೆ ನುಡಿನಮನ ಪುಷ್ಪ ನಮನ ಸಲ್ಲಿಸಲಾಯಿತು.   ಈ ಸಂದರ್ಭದಲ್ಲಿ
ವೈದ್ಯಕೀಯ ಕ್ಷೇತ್ರವನ್ನು ಹೊರತುಪಡಿಸಿ ಬೇರೆ- ಬೇರೆ ರಂಗಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು, ಸಮಾಜದಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದ ದಿ. ಡಾ. ಟಿ.ಟಿ ಹೆಗಡೆಯವರ ಆದರ್ಶ ಗುಣ, ತತ್ವ, ನಿಷ್ಠೆ ಯುವಸಮುದಾಯಕ್ಕೆ ಸ್ಫೂರ್ತಿ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.

RELATED ARTICLES  ಸರ್ಕಾರಿ ಆಸ್ತಿ ಹಾಳು ಗೆಡವಿದ ಆರೋಪ: ಆರೋಪಿಗೆ 8 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ

ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ ಮಾತನಾಡಿ, ಆಧ್ಯಾತ್ಮವನ್ನು ಹೆಚ್ಚು ನಂಬಿದ್ದ ಅವರು ಭಾಗವತ, ಪುರಾಣ, ಭಗವದ್ಗೀತೆಯನ್ನು ದಿನನಿತ್ಯ ಪಠಿಸುತ್ತಿದ್ದರು. ಅವರ ಮರಣ ಅವರಿಗೆ ಮೊದಲೇ ತಿಳಿದಿತ್ತು. ನಿಸ್ವಾರ್ಥ ಸೇವೆಯಿಂದ ಹಲವು ಜನಪರ ಕಾರ್ಯಕ್ರಮಗಳನ್ನು ನಡೆಸಿದ ಅವರಿಗೆ ಸದ್ಗತಿ ದೊರೆಯಲಿ ಎಂದರು.

RELATED ARTICLES  ಮಾತಾಜಿ ಅಮೋಘಮಯಿ ಇವರಿಗೆ ಗೋಕರ್ಣ ಗೌರವ

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ
ಡಾ. ಜಿ.ಜಿ ಹೆಗಡೆ , ವೆಂಕಟೇಶ ನಾಯ್ಕ.ವಿನೋದ ಪ್ರಭು, ಆರ್.ಜಿ.ಗುನಗಿ, ವಿಶ್ವನಾಥ ನಾಯ್ಕ, ಪ್ರಶಾಂತ ನಾಯ್ಕ, ಗಣೇಶ ಅಂಬಿಗ, ಪುರಸಭಾ ಸದಸ್ಯ ಸಂತೋಷ ನಾಯ್ಕ ಹೇಮಂತಕುಮಾರ ಗಾಂವಕರ ಸೇರಿದಂತೆ ಹಲವರಿದ್ದರು.