ಕುಮಟಾ: ತಾಲೂಕಿನ ಪ್ರೌಢಶಾಲೆ, ಪಿ.ಯೂ., ಪದವಿ ಅಥವಾ ಸ್ನಾತಕ್ಕೋತ್ತರ ಪದವಿ ಓದುತ್ತಿರುವ ಕಾವ್ಯಕೃಷಿಯಲ್ಲಿ ಆಸಕ್ತರಾಗಿರುವ ವಿದ್ಯಾರ್ಥಿಗಳಿಂದ ಸನದಿ ಕಾವ್ಯ ಪ್ರಶಸ್ತಿಗೆ ಖುದ್ದು ಆಹ್ವಾನಿಸಲಾಗಿದ್ದು, ಕವನ ರಚನಾ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಮುಖ್ಯಾಧ್ಯಾಪಕ, ಪ್ರಾಚಾರ್ಯರ ದೃಢೀಕರಣ ಪತ್ರದೊಂದಿಗೆ ಅಥವಾ ವಿದ್ಯಾರ್ಥಿ ಗುರುತಿನ ಚೀಟಿಯೊಂದಿಗೆ ಅ.11, ರವಿವಾರ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಬೆ.10 ಗಂಟೆಯೊಳಗೆ ಹಾಜರಿದ್ದು ಕವನ ರಚಿಸಿ ವಾಚಿಸುವ ಮೂಲಕ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ. ಅ.18 ರಂದು ನಡೆಯುವ ಡಾ.ಬಿ.ಎ.ಸನದಿ ಜನ್ಮದಿನದ ಆಚರಣೆಯಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಬಿ.ಎ.ಸನದಿ ಸಾಹಿತ್ಯ ಸಂಘದ ಸಂಚಾಲಕ, ಶಿಕ್ಷಕ ಸುರೇಶ ಪೈ ತಿಳಿಸಿದ್ದಾರೆ.

RELATED ARTICLES  ಉತ್ತರಕನ್ನಡದ ಚುನಾವಣಾ ಫಲಿತಾಂಶ.