ಜಿಡ್ಡಿನ ಪದಾರ್ಥಗಳಲ್ಲೇ ಅತಿ ಆರೋಗ್ಯಕರವಾದ ತುಪ್ಪ. ಇದು ಹಲವು ಉತ್ತಮ ಗುಣಗಳನ್ನು ಹೊಂದಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣ ದಲ್ಲಿರುವ ಕ್ಯಾಲೋರಿಗಳು, ಇ ಪೋಷಕಾಂಶ ಗಳು, ವೈರಸ್ಸಿನ ವಿರುದ್ಧ ಹೋರಾಡುವ ಗುಣ, ಶಿಲಿಂಧ್ರ ನಿವಾರಕ, ಬ್ಯಾಕ್ಟೀರಿಯಾ ದೇಸೀ ಹಸುವಿನ ತುಪ್ಪ, ಆರೋಗ್ಯದ ಪಾಲಿನ ಸಂಜೀವಿನಿ ನಿವಾರಕ ಗುಣಗಳು ಮತ್ತು ಅಂಟಿ ಆಕ್ಸಿಡೆಂಟುಗಳ ಜೊತೆಗೆ ಕೊಂಚ ಕೊಬ್ಬಿನ ತೈಲವೂ ಇವೆ.
ಆದರೆ ಎಮ್ಮೆಯ ಹಾಲಿನಿಂದ ತಯಾರಿಸಿದ ತುಪ್ಪದಲ್ಲೂ ಬಹುತೇಕ ಈ ಗುಣಗಳಿದ್ದರೂ ಕೊಬ್ಬಿನ ಪ್ರಮಾಣ ಅಪಾರ ವಾದುದರಿಂದ ಎಮ್ಮೆ ಹಾಲಿನ ತುಪ್ಪಕ್ಕಿಂತ ಹಸುವಿನ ಹಾಲಿನ ತುಪ್ಪವೇ ಉತೃಷ್ಕವಾಗಿದೆ.
ಸಾಮಾನ್ಯವಾಗಿ ಅನ್ನ, ಚಪಾತಿ, ಸಿಹಿ ಮೊದಲಾದ ಯಾವುದೇ ಆಹಾರದೊಂದಿಗೆ ಕೊಂಚ ತುಪ್ಪವನ್ನು ಬೆರೆಸಿ ತಿಂದರೆ ಆ ಖಾದ್ಯದ ರುಚಿ ಬಹಳಷ್ಟು ಹೆಚ್ಚುತ್ತದೆ. ಅಷ್ಟೆ ಅಲ್ಲ, ಹಸುವಿನ ತುಪ್ಪವನ್ನು ಉಪಯೋಗಿಸಿ ಮೈಯನ್ನು ಮಸಾಜ್ ಮಾಡಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.
ಹಸುವಿನ ತುಪ್ಪವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು:
*ತುಪ್ಪದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ. ಕ್ಯಾಲ್ಸಿಯಂ ಇದ್ದು ಇದು ನಮ್ಮ ಮೂಳೆಗಳು ಆರೋಗ್ಯಕರವಾಗಿರಲು ಹಾಗೂ ದೃಢಗೊಳ್ಳಲು ನೆರವಾಗುತ್ತದೆ.
*ತುಪ್ಪದಲ್ಲಿ ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದ್ದು ವಿಶೇಷವಾಗಿ ಕಣ್ಣುಗಳಿಗೆ ಹಾಗೂ ದೃಷ್ಟಿನರಕ್ಕೆ ಹೆಚ್ಚಿನ ಪೋಷಣೆ ನೀಡುತ್ತದೆ. ಅಲ್ಲದೇ ಕಣ್ಣೀರಿನ ಪ್ರಮಾಣವನ್ನು ಹೆಚ್ಚಿಸಿ ಕಣ್ಣುಗಳಲ್ಲಿ ತೇವವನ್ನೂ ಹೆಚ್ಚಿಸುತ್ತದೆ.
*ತುಪ್ಪದಲ್ಲಿ ಉತ್ತಮ ಕೊಬ್ಬು ಮತ್ತು ಒಮೆಗಾ 3 ಕೊಬ್ಬಿನ ಆಮ್ಲವಿರುವ ಕಾರಣ ಇದು ಆರೋಗ್ಯಕ್ಕೆ ಹಾಗೂ ವಿಶೇಷವಾಗಿ ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಪೋಷಣೆ ನೀಡುತ್ತದೆ.
*ತುಪ್ಪದಲ್ಲಿ ಬ್ಯೂಟೈರಿಕ್ ಆಮ್ಲ ಎಂಬ ಕಿಣ್ವವಿದೆ. ಇದು ವಿಶೇಷವಾಗಿ ಜೀರ್ಣಕ್ರಿಯೆಗೆ ಹೆಚ್ಚಿನ ನೆರವು ನೀಡುತ್ತದೆ ಹಾಗೂ ಕರುಳುಗಳಲ್ಲಿ ಉರಿಯೂತವಾಗದಂತೆ ತಡೆಯುತ್ತದೆ. ಇದರಿಂದ ಆಮ್ಲೀಯತೆ ಹಾಗೂ ತನ್ಮೂಲಕ ಎದುರಾಗುವ ತೊಂದರೆಗಳಿಂದ ರಕ್ಷಣೆ ನೀಡುತ್ತದೆ.
*ಚಿಕ್ಕ ಪುಟ್ಟ ಗಾಯ, ತರಚುಗಾಯ, ಸುಟ್ಟ ಗಾಯ ಮೊದಲಾದವುಗಳಿಗೆ ತುಪ್ಪವನ್ನು ಹಚ್ಚುವ ಮೂಲಕ ಉರಿ ಕಡಿಮೆಯಾಗುತ್ತದೆ ಹಾಗೂ ಶೀಘ್ರವಾಗಿ ಹೊಸಚರ್ಮ ಬೆಳೆಯಲು ನೆರವಾಗುತ್ತದೆ.
*ತುಪ್ಪದಲ್ಲಿ ಪ್ರೋಟೀನು ಮತ್ತು ಕೊಬ್ಬು ಹೆಚ್ಚಿದ್ದು ಇದು ಪುರುಷರ ಶಕ್ತಿಯನ್ನು ಉತ್ತಮ ಮಟ್ಟದಲ್ಲಿರಿಸಲು ನೆರವಾಗುತ್ತದೆ.
*ಚಿಕ್ಕ ಪ್ರಮಾಣದಲ್ಲಿ ತುಪ್ಪವನ್ನು ಪ್ರತಿ ಊಟದೊಂದಿಗೆ ಸೇವಿಸಿದರೆ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ತುಪ್ಪ ಜೀರ್ಣಕ್ರಿಯೆಗೆ ಪ್ರಚೋದಕದ ರೂಪದಲ್ಲಿ ನೆರವಾಗುತ್ತದೆ.
*ತುಪ್ಪದ ಸೇವನೆಯಿಂದ ಕ್ಯಾನ್ಸರ್ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಸಾಮಾನ್ಯವಾಗಿ ತುಪ್ಪವನ್ನು ನಿತ್ಯವೂ ಸೇವಿಸುತ್ತಾ ಬಂದಿರುವವರಲ್ಲಿ ಕ್ಯಾನ್ಸರ್ ಪ್ರಮಾಣ ಅತಿ ಕಡಿಮೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
*ತುಪ್ಪವನ್ನು ಸೇವಿಸುತ್ತಾ ಬಂದರೆ ಹಸಿವು ಹೆಚ್ಚುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
*ತುಪ್ಪ ಒಂದು ಉತ್ತಮ ಕಾಮೋತ್ತೇಜಕ ಹಾಗೂ ವೀರ್ಯವರ್ಧಕವೂ ಆಗಿದೆ. ನಿತ್ಯದ ಸೇವನೆಯಿಂದ ಸಂತಾನ ಭಾಗ್ಯದ ಸಾಧ್ಯತೆ ಹೆಚ್ಚುತ್ತದೆ.
*ತುಪ್ಪ ಚರ್ಮದ ಆರೈಕೆಯಲ್ಲಿಯೂ ಉಪಯೋಗಕ್ಕೆ ಬರುತ್ತದೆ.
*ರಾತ್ರಿ ಮಲಗುವ ಮುನ್ನ ಬಿಸಿಬಿಸಿ ಹಾಲಿಗೆ ಕೊಂಚವೇ ಕೊಂಚ ತುಪ್ಪವನ್ನು ಸೇರಿಸಿ ಕುಡಿಯುವ ಮೂಲಕ ಉತ್ತಮ ನಿದ್ದೆ ಬರುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮಗೊಂಡು. ಬೆಳಿಗ್ಗೆ ಕಲ್ಮಶಗಳು ಸುಲಭವಾಗಿ ಹೊರ ಹೋಗಲು ಸಾಧ್ಯವಾಗುತ್ತದೆ.
*ತುಪ್ಪವನ್ನು ಸೇವಿಸುತ್ತಾ ಬಂದರೆ ಸ್ಮರಣಶಕ್ತಿ ಮತ್ತು ಬುದ್ದಿಮತ್ತೆ ಹೆಚ್ಚುತ್ತದೆ.
*ಮೂಗಿನಿಂದ ರಕ್ತ ಬರುತ್ತಿದ್ದರೆ ಕರಗಿದ ತುಪ್ಪವನ್ನು ಮೂಗಿನ ತುದಿ ಮತ್ತು ಹೊಳ್ಳೆಗಳ ಒಳಗೆ, ವಿಶೇಷವಾಗಿ ರಕ್ತ ಒಸರುವೆಡೆ ದಿನಕ್ಕೆ ಮೂರು ನಾಲ್ಕು ಬಾರಿಯಂತೆ ಎರಡರಿಂದ ಮೂರು ದಿನ ಹಚ್ಚಬೇಕು. ಇದರಿಂದ ರಕ್ತ ಬರುವುದು ನಿಲ್ಲುತ್ತದೆ.
*ಜ್ವರದ ಸಮಸ್ಯೆ ಇದ್ದಾಗ ಅಲ್ಪ ಪ್ರಮಾಣದಲ್ಲಿ ತುಪ್ಪ ಸೇವಿಸಿದರೆ ದೇಹದ ಉರಿ ಕಡಿಮೆಯಾಗುತ್ತದೆ.
*ಒಣಕೆಮ್ಮು ಮತ್ತು ಕಫ ದ ಸಮಸ್ಯೆ ಇದ್ದಾಗ ಸ್ವಲ್ಪ ತುಪ್ಪವನ್ನು ಗಂಟಲಿನಲ್ಲಿ ಇಟ್ಟುಕೊಂಡು ಒಂದು ನಿಮಿಷದ ನಂತರ ನುಂಗಿದರೆ ಕಫ ಕಡಿಮೆಯಾಗುತ್ತದೆ.
*ಮದ್ಯಪಾನಿಗಳು ತುಪ್ಪವನ್ನು ಸೇವಿಸಿದರೆ ಅವರ ಶರೀರದ ಅಂಗಗಳನ್ನು ರಕ್ಷಿಸುತ್ತದೆ.
*ಹೆರಿಗೆ ನೋವು ಪ್ರಾರಂಭ ಅದ ತಕ್ಷಣ ಬಿಸಿ ಗಂಜಿಗೆ ತುಪ್ಪ ಹಾಕಿ ಸೇವಿಸಿದರೆ ಸುಖ ಪ್ರಸವಕ್ಕೆ ಸಹಕಾರಿಯಾಗುತ್ತದೆ.
*ಹೊಟ್ಟೆಯಲ್ಲಿ ನೋವು. ಶಬ್ದ. ವಾಂತಿ ಇದ್ದರೆ ತುಪ್ಪದ ಸೇವನೆ ಒಳ್ಳೆಯದು.
ಒಟ್ಟಾರೆ ತುಪ್ಪವು ತಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಆದರೆ ನಿತ್ಯವೂ ಚಿಕ್ಕ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.