ಕುಮಟಾ ತಾಲೂಕಿನ ಹಿರೇಗುತ್ತಿ ಚೆಕ್ ಪೋಸ್ಟ ನಲ್ಲಿ ರಾತ್ರಿ ಪೋಲೀಸರ ತಪಾಸಣೆ ವೇಳೆ ಅಕ್ರಮ ಗೋವುಗಳನ್ನು ತುಂಬಿದ ಮಹಿದ್ರಾ ಪಿಕಪ್ ವಾಹನ ಪೋಲೀಸರು ಕೈ ಮಾಡಿದರು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ ಘಟನೆ ನಡೆಯಿತು.
ಹಿರೇಗುತ್ತಿಯಿಂದ ಕುಮಟಾ PSI ಸಂಪತ್ ಕುಮಾರ ಅವರಿಗೆ ಮಾಹಿತಿ ನಿಡಿದ ಸಿಬ್ಬಂದಿವರ್ಗದವರು ವಾಹನ ಹಿಂಬಾಲಿಸಿದ್ದಾರೆ.ಗಾಬರಿಗೊಂಡ ವಾಹನ ಚಾಲಕ ಮಿರ್ಜಾನ ನ ಕೋಟೆ ರೋಡಿನ ಛತ್ರಕೂರ್ವೆಗೆ ಮಾರ್ಗ ಬದಲಾಯಿಸಿದ್ದಾನೆ. ರಸ್ತೆ ಕೊನೆಗೊಳ್ಳುತ್ತಿದ್ದಂತೆ ಪೋಲೀಸರು ಹಿಂಬಾಲಿಸಿದ್ದನ್ನು ನೋಡಿ ಚಾಲಕ KA 30 ನೊಂದಣಿಯ ಪಿಕಪ್ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

RELATED ARTICLES  ಅಕ್ರಮ ಸರಾಯಿ ಮಾರಾಟ ಯಲ್ಲಾಪುರದಲ್ಲಿ ಓರ್ವ ಪೋಲೀಸ್ ಬಲೆಗೆ!


ಹಿಂಸಾತ್ಮಕವಾಗಿ ಪಿಕಪ್ ನಲ್ಲಿ ಅಂಕೋಲಾ ಕಡೆಯಿಂದ ಭಟ್ಕಳ ಮಾರ್ಗವಾಗಿ ಸಾಗಿಸುತ್ತಿದ್ದ 7 ಗೋವುಗಳನ್ನು ಕುಮಟಾ ಹಾಗೂ ಹಿರೇಗುತ್ತಿ ಪೋಲೀಸರು ರಕ್ಷಣೆ ಮಾಡಲಾಗಿದ್ದು ಕುಮಟಾ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES  ವಿದ್ಯಾರ್ಥಿಗಳು ಉತ್ತಮ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು : ಪ್ರದೀಪ ನಾಯಕ ದೇವರಬಾವಿ