ಕುಮಟಾ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ರಿ) ಕುಮಟಾ ಹಾಗೂ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಕಸ್ತೂರಬಾ ಇಕೋ ಕ್ಲಬ್ ಸಹಯೋಗದಲ್ಲಿ ಪರಿಸರ ಅರಿವು ಕಾರ್ಯಕ್ರಮವನ್ನು ಇಲ್ಲಿಯ ಪಿ.ಆರ್.ನಾಯಕ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ನಾಗರಾಜ ನಾಯ್ಕ ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಿರ್ದೇಶನದಂತೆ ಗ್ರಾಮೀಣಾಭಿವೃದ್ಧಿ ಯೋಜನೆ ರಾಜ್ಯದಾದ್ಯಂತ ನಡೆಯುತ್ತಾ ಬಂದಿದೆ ಅಲ್ಲದೇ ಸುಸಂಸ್ಕøತ ಸಮಾಜ ನಿರ್ಮಾಣ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿ ಪರಮ ಗುರಿಯಾಗಿದೆ ಎಂದರು. ಪರಿಸರ ಸಂರಕ್ಷಣೆಗಾಗಿ ಕೆಲಸಮಯ ಮೀಸಲಿಡಿ ಎಂದು ಸಲಹೆ ನೀಡಿದರು. ಇಕೋಕ್ಲಬ್ ಸಂಚಾಲಕ, ಶಿಕ್ಷಕ ಕಿರಣ ಪ್ರಭು ಪರಿಸರ ಸಂರಕ್ಷಣೆಯ ಜವಾಬ್ದಾರಿ ಬಿಂಬಿಸುವ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಗಾಗಿ ಪರಿಸರ ಗೀತೆ, ಪರಿಸರ ಚಿತ್ರಕಲೆ ಮತ್ತು ಎಲೆಗಳನ್ನು ವೀಕ್ಷಿಸಿ ಗಿಡಗಳನ್ನು ಪತ್ತೆ ಮಾಡುವ ಸ್ಪರ್ಧೆಗಳನ್ನು ಏರ್ಪಡಿಸಿ ಶ್ರೇಯಾಂಕಿತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿಗಳಾದ ಪ್ರಜ್ಞಾ ಆಚಾರಿ, ಶರತ್ ನಾಯ್ಕ, ನಿವೇದಿತಾ ಪಟಗಾರ, ಸಹನಾ ಪಟಗಾರ, ಸಿಂಚನಾ ಆಚಾರಿ, ಆದಿತ್ಯ ಭಂಡಾರಿ, ತನುಜಾ ಎಂ.ಪಟಗಾರ, ಚೈತನ್ಯಾ ಪಟಗಾರ, ಪವಿತ್ರಾ ಪಟಗಾರ, ಪನ್ನಗ್ ಶೇಟ್, ತನುಜಾ ಎಸ್. ನಾಯ್ಕ ಬಹುಮಾನ ಸ್ವೀಕರಿಸಿದರು. ಶಾಲೆಯಲ್ಲಿ ಪಠ್ಯಕ್ರಮಕ್ಕೆ ಪೂರಕವಾದ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾಗಿರುವುದರಿಂದ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಸ್ವಾಗತಿಸುತ್ತೇವೆ ಎಂದು ಮುಖ್ಯಾಧ್ಯಾಪಕ ಎನ್.ಆರ್.ಗಜು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು. ಶಿಕ್ಷಕ ವಿ.ಎನ್.ಭಟ್ಟ ನಿರೂಪಿಸಿದರು. ಶಿಕ್ಷಕ ಅನಿಲ್ ರೊಡ್ರಿಗಿಸ್ ವಂದಿಸಿದರು. ಬಾಡ ವಲಯದ ಮೇಲ್ವಿಚಾರಕಿ ಮಹಾದೇವಿ ನಾಯ್ಕ, ಹೊಲನಗದ್ದೆ ಗ್ರಾ.ಪಂ.ಸದಸ್ಯೆ ಹಾಗೂ ತಾಂತ್ರಿಕ ತರಬೇತಿ ಸಹಾಯಕಿ ರಮ್ಯಾ ಶೇಟ್, ಸೇವಾ ಪ್ರತಿನಿಧಿ ರೂಪಾ ನಾಗೇಶ ನಾಯರ್ ಮತ್ತು ರೂಪಾ ಪಟಗಾರ, ಸಹಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.

RELATED ARTICLES  ಹಳ್ಳಿಯ ಉತ್ಪನ್ನಗಳನ್ನು ಮನೆ ಮನೆಗೆ ತಲುಪಿಸಲು ಸಿದ್ದವಾಗಿದೆ "ಫಾರ್ಮಿನ್"