ನವದೆಹಲಿ: ಪುಲ್ವಾಮಾ ದಾಳಿ ಬಳಿಕ ನಡೆದ ಏರ್ ಸರ್ಜಿಕಲ್ ಸ್ಟ್ರೈಕ್ ಪಾಕ್ ಆಕ್ರಮಿತ ಪ್ರದೇಶದಲ್ಲಿದ್ದ ಉಗ್ರರನನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿತ್ತು. ಆದಾದ ಬಳಿಕ ಭಾರತ ಮತ್ತೊಂದು ಬಹುದೊಡ್ಡ ದಾಳಿಯನ್ನು ಉಗ್ರರ ನೆಲೆಗಳ ಮೇಲೆ ನಡೆಸಿದೆ.

ಪಾಕ್ ಆಕ್ರಮಿತ ಗಡಿ ಪ್ರದೇಶ 30 ಕಿಮೀ ಒಳ ಭಾಗದಲ್ಲಿ ನಿರ್ಮಿಸಲಾಗಿದ್ದ ಉಗ್ರರ ತರಬೇತಿ ಕೇಂದ್ರಗಳನ್ನು ಗುರಿಯಾಗಿಕೊಂಡು ದಾಳಿ ನಡೆಸಲಾಗಿದೆ. ಈ ಹಿಂದೆ ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ ಸೈನಿಕರು ದಾಳಿ ನಡೆಸಿದ್ದರು. ಆದರೆ ಈ ಬಾರಿ ಆರ್ಟಿಲರಿ ಗನ್ ಮೂಲಕ ಬಾಂಬ್ ದಾಳಿ ನಡೆಸಲಾಗಿದೆ. ಗುಪ್ತಚರ ಇಲಾಖೆ ನೀಡಿರುವ ಖಚಿತ ಮಾಹಿತಿ ಮೇಲೆ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ಕುರಿತು ಯಾವುದೇ ಮಾಹಿತಿ ಅಧಿಕೃತವಾಗಿ ಭಾರತ ಸೇನೆ ನೀಡಿಲ್ಲ.

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ 20,200 ಕೋವಿಶೀಲ್ಡ್ ಲಸಿಕೆ ಲಭ್ಯ
PAK a

ಜಮ್ಮು ಕಾಶ್ಮೀರದ ನೀಲಂ ಜೇಲಂ ಪ್ರಾಜೆಕ್ಟ್ ಬಳಿ ನಿಖರ ದಾಳಿ ನಡೆಸಲಾಗಿದೆ. ಈ ಹಿಂದೆ ನಡೆದಿದ್ದ ಎಲ್ಲಾ ದಾಳಿಗಳಿಗಿಂತಲೂ ಈ ದಾಳಿ ಭಿನ್ನವಾಗಿದೆ. ಆದರೆ ಘಟನೆಯಲ್ಲಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿಲ್ಲ. ನೀಲಂ ಜೇಲಂ ಪ್ರಾಜೆಕ್ಟ್ ಪಾಕಿಸ್ತಾನ ಕೈಗೊಳ್ಳುತ್ತಿರುವ ಜಲ ವಿದ್ಯುತ್ ಯೋಜನ ಇದಾಗಿದ್ದು, ಈ ದಾಳಿಯಿಂದ ಯೋಜನೆಗೆ ಹಾನಿಯಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿಯನ್ನು ಮಾಡಿದೆ.

RELATED ARTICLES  ಧಾರಾವಾಹಿಯ ಸೆಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಟಿ.

ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಸತತ 1 ವಾರಗಳ ಕಾಲ ಸಿದ್ಧತೆ ನಡೆಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮು ಕಾಶ್ಮೀರಕ್ಕೆ ಹೆಚ್ಚುವರಿ ಸೈನ್ಯವನ್ನು ರವಾನೆ ಮಾಡಲಾಗಿತ್ತು. ಆದರೆ ಈ ದಾಳಿ ಬಗ್ಗೆ ಭಾರತ ಸೇನೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಈ ಮೂಲಕ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಈ ದಾಳಿಯ ಹಿನ್ನೆಲೆಯೇ ಅಮರನಾಥ ಯಾತ್ರೆಗೆ ತೆರಳಿದ್ದ ಭಕ್ತರಿಗೆ ತಡೆ ನೀಡಿ ವಾಪಸ್ ಕಳುಹಿಸಲಾಗಿತ್ತು. ಈ ದಾಳಿಯಿಂದ ಮುಂದೇ ಬರಬಹುದಾದ ಸವಾಲುಗಳನ್ನ ಎದುರಿಸಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದೆ.