ಕುಮಟಾ: ಇಲ್ಲಿಯ ಬಾಡ ಹುಬ್ಬಣಗೇರಿ ಪ್ರಾಥಮಿಕ ಶಾಲೆಯಲ್ಲಿ ಡಾ.ಬಿ.ಎಂ.ಪೈ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಡಾ.ಬಿ.ಎಂ.ಪೈ ಅವರ 27 ನೆಯ ಪುಣ್ಯ ತಿಥಿಯ ಪ್ರಯುಕ್ತ ಉಚಿತ ದಂತ ಚಿಕಿತ್ಸೆ, ಸಲಹೆ, ಟೂತ್ ಬ್ರಷ್, ಪೇಸ್ಟ್, ನೋಟ್ ಬುಕ್, ಪೆನ್, ಪೆನ್ಸಿಲ್, ಕಂಪಾಸ ವಿತರಿಸಲಾಯಿತು. ಟ್ರಸ್ಟಿಗಳಾದ ತ್ರಿವಿಕ್ರಮ ಪೈ, ಕೃಷ್ಣ ಪೈ, ಎಂ.ಬಿಪೈ, ಗುರುದಾಸ ಗಾಯ್ತೊಂಡೆ, ಶ್ರೀಕಾಂತ ಭಟ್ಟ ಇವರಿಂದ ಆಯೋಜಿತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಫಲಾನುಭವಿಗಳಾದರು. ಖ್ಯಾತ ದಂತ ವ್ಶೆದ್ಯ ಡಾ.ದೀಪಕ ಡಿ. ನಾಯಕ ಮಾತನಾಡಿ ಡಾ.ಬಿ.ಎಂ.ಪೈ ನೆನಪು ಸಾರ್ವಕಾಲಿಕವಾದುದು ಎಂದು ಅಭಿಪ್ರಾಯಪಟ್ಟರು. ಟ್ರಸ್ಟಿ ಎಂ.ಬಿ.ಸ್ವಾಗತಿಸಿದರು. ಸೇವಾದಳದ ಮಾಜಿ ದಳಪತಿ ಜೆ.ಎಸ್.ನಾಯ್ಕ, ಎಸ್ಡಿಎಂಸಿ. ಅಧ್ಯಕ್ಷ ಗಂಗಾಧರ ನಾಯ್ಕ, ಮುಖ್ಯಾಧ್ಯಾಪಿಕೆ ಸಾವಿತ್ರಿ ಭಟ್ಟ ಮಾತನಾಡಿದರು. ಶ್ರೇಯಾ ಪೈ, ಬಾಬಾ ಪ್ರಹ್ಲಾದ ಪೈ ಸಹಕರಿಸಿದರು.

RELATED ARTICLES  ಉಚಿತ ಆರೋಗ್ಯ ಶಿಬಿರ ಯಶಸ್ವಿ