ಕುಮಟಾ ತಾಲೂಕಿನ ಮಿರ್ಜಾನ್ ನ ಕೋಟೆ ಮಾರ್ಗದಿಂದ 3 ಕಿ.ಮೀ ಇರುವ ಈ ರಸ್ತೆ ಹಲವು ವರ್ಷಗಳಿಂದ ಡಾಂಬರಿಕರಣ ಕಾಣದೇ ಹೊಂಡಮಯವಾದ ರಸ್ತೆಯಲ್ಲಿ ಸಂಚರಿಸಿ ಜನರು ಬೇಸತ್ತಿದ್ದು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿ ಜನಪ್ರತಿನಿಧಿಗಳ ಗಮನ ಸೆಳೆದಿದ್ದಾರೆ.
ಹೊಂಡಮಯವಾಗಿರುವ ಕೆಸರು ರಸ್ತೆಯಲ್ಲಿ ಸಸಿ ನೆಡುವ ಮೂಲಕ ರಸ್ತೆ ಸುುಧರಣೆ ಗೊಳಿಸುವಂತೆ ಪ್ರತಿಭಟನೆ ಕೈಗೊಂಡಿದ್ದಾರೆ.


ಮಳೆಗಾಲ ಬಂತೆಂದರೆ ಈ ರಸ್ತೆಯಲ್ಲಿ ಸಂಚರಿಸುವುದು ತುಂಬಾ ಕಷ್ಟ.ಇಲ್ಲಿ 40 ಕ್ಕೂ ಹೆಚ್ಚು ಮನೆಗಳಿದ್ದು 200 ಕ್ಕೂ ಹೆಚ್ಚು ಜನರು ವಾಸಿಸುತ್ತಾರೆ.ಆದರೆ ಸರ್ಕಾರದಿಂದ ಯಾವ ಅನುದಾನವೂ ಚತ್ರಕೂರ್ವೆ ಗ್ರಾಮಕ್ಕೆ ಬರುತ್ತಿಲ್ಲ.ಜನಸಂಚಾರಕ್ಕೆ ತುಂಬಾ ಸಮಸ್ಯೆಯಾಗಿದೆ.ಈ ರಸ್ತೆಯಲ್ಲಿ ಪುರಾತನ ಇಲಾಖೆಗೆ ಒಳಪಟ್ಟ ಪ್ರಸಿದ್ದ ಪ್ರವಾಸಿ ಸ್ಥಳವಾದ ಮಿರ್ಜಾನ್ ಕೋಟೆ ಇದ್ದು, ಪ್ರವಾಸೋದ್ಯಮ ಇಲಾಖೆ ಸಹ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.ಪಂಚಾಯತ ಅಧಿಕಾರಿಗಳು ಹಾಗೂ ವಾರ್ಡ ಮೇಂಬರ್ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಹಾಕಿ ಇಲ್ಲಿಯ ರಸ್ತೆ ಸರಿಪಡಿಸುವ ಬಗ್ಗೆ ಗಮನಹರಿಸಲಿ ಎಂಬುದು ಸ್ಥಳಿಯರ ಬೇಡಿಕೆಯಾಗಿದೆ.

RELATED ARTICLES  ಶ್ರೀ ಮಾತಾಜಿ ಬಸಮ್ಮ ತಾಯಿಯವರಿಗೆ 'ಗೋಕರ್ಣ ಗೌರವ'


ಸಂಬಂದಪಟ್ಟ ಇಲಾಖೆಯವರು ಇದರ ಬಗ್ಗೆ ಗಮನ ಹರಿಸಿ ಹಾಗೂ ಶಾಸಕ ದಿನಕರ ಶೆಟ್ಟಿಯವರು ಒಮ್ಮೆ ಬೇಟಿ ನೀಡಿ ಇಲ್ಲಿನ ಜನರಿಗಾಗುವ ತೊಂದರೆ ತಪ್ಪಿಸಿ ಸಂಚರಿಸಲು ಒಂದು ರಸ್ತೆ ವ್ಯವಸ್ಥೆ ಕಲ್ಪಿಸಲಿ ಎಂಬುದು ನಮ್ಮ ಆಶಯವಾಗಿದೆ.

RELATED ARTICLES  Everything You Wanted to Know About mega city's