ಕುಮಟಾ : ಬ್ರಹ್ಮ ಕ್ರಿಯೇಶನ್ಸ್ ಅಡಿಯಲ್ಲಿ ವಿನಾಯಕ ಬ್ರಹ್ಮೂರು ನಿರ್ದೇಶನದಲ್ಲಿ ಹೊಸ ಕಿರುಚಿತ್ರ ಸೆಟ್ಟೇರಿದೆ. ‘ಆಚೆ’ ಚಿತ್ರದ ನಂತರ ಸಣ್ಣ ಗ್ಯಾಪ್ ತೆಗೆದುಕೊಂಡು ಇದೀಗ ಹೊಸ ಚಿತ್ರಕ್ಕೆ ಸಜ್ಜಾಗಿದ್ದಾರೆ ವಿನಾಯಕ ಬ್ರಹ್ಮೂರು.

ಉಪ್ಪಿ3 ಫಸ್ಟ್ ಪೋಸ್ಟರ್ ಬಿಡುಗಡೆ : ಸೈಕಾಲಾಜಿಕಲ್ ಸಿನಿಮಾಗಳಿಂದಲೇ ಖ್ಯಾತರಾಗಿರುವ ನಿರ್ದೇಶಕರು ಈ ಬಾರಿ ನಿರ್ಮಿಸುತ್ತಿರುವ ಚಿತ್ರದ ಟೈಟಲ್ ಸಾಕಷ್ಟು ಕುತೂಹಲ ಕೆರಳಿಸಿದೆ. ಉಪೇಂದ್ರ ಹಾಗೂ ಉಪ್ಪಿ2 ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿತ್ತು. ಈಗ ಉಪ್ಪಿ3 ಹೆಸರಿನಲ್ಲಿ ಕಿರುಚಿತ್ರ ನಿರ್ಮಾಣವಾಗುತ್ತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.

RELATED ARTICLES  ಓದು ಮನನ ನಿತ್ಯ ಮಂತ್ರವಾಗಲಿ-ಕೆ.ಕೃಷ್ಣರಾಜ ಭಟ್ಟ

ಚೌತಿ ಹಬ್ಬದ ನಂತರ ಚಿತ್ರೀಕರಣ : ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ವಿನಾಯಕ ಬ್ರಹ್ಮೂರು ಅವರದ್ದಾಗಿದ್ದು ಈಗಷ್ಟೇ ಸ್ಕ್ರಿಪ್ಟ್ ವರ್ಕ್ ಶುರು ಮಾಡಿದ್ದಾರೆ. ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ನಡೆಸುವ ಸಾಧ್ಯತೆಗಳಿವೆ. ಚಿತ್ರತಂಡ ಇನ್ನು ಮೇಲಷ್ಟೇ ಅಂತಿಮಗೊಳ್ಳಬೇಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ